ಮಹಾವತಾರ್ ಬಾಬಾಜಿ ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ‘ಜೈಲರ್’
ಉತ್ತರಾಖಂಡ್ ಪ್ರಮುಖ ದೇವಾಲಯಗಳಿಗೆ ‘ತಲೈವಾ’ ಯಾತ್ರೆ
ಚೆನ್ನೈನಿಂದ ಹಿಮಾಲಯಕ್ಕೆ ಬಂದ ಸೂಪರ್ ಸ್ಟಾರ್ ಅಭಿಮಾನಿ
ರಜನಿಕಾಂತ್ ಎಲ್ಲೇ ಇದ್ರೂ ಅವರ ಫ್ಯಾನ್ಸ್ ಅವರನ್ನ ಬಿಡೋದೇ ಇಲ್ಲ. ಯಾಕಂದ್ರೆ ಸೂಪರ್ ಸ್ಟಾರ್ ಅಂದ್ರೆ ಅವರ ಅಭಿಮಾನಿಗಳಿಗೆ ಪಂಚಪ್ರಾಣ. ರಜನಿಕಾಂತ್ ಅವರಿಗೆ ದೇಶ, ವಿದೇಶದಲ್ಲಿ ಕೋಟ್ಯಾಂತರ ಅಭಿಮಾನಿ ಬಳಗವಿದೆ. ಅಷ್ಟೇ ಅಲ್ಲ ಅವರಿಗೋಸ್ಕರ ಜೀವ ಬೇಕಾದ್ರೂ ಕೊಡುವ ಹುಚ್ಚು ಅಭಿಮಾನಿಗಳಿದ್ದಾರೆ. ಹಿಮಾಲಯದಲ್ಲೂ ಇಂತಹದೇ ಒಂದು ಅಪರೂಪದ ಘಟನೆ ನಡೆದಿದ್ದು, ಅಭಿಮಾನಿಗಳು ರಜನಿಕಾಂತ್ ಅವರನ್ನು ಭೇಟಿ ಮಾಡಿದ ವಿಡಿಯೋವನ್ನು ಅವರ ಆಪ್ತರು ಹಂಚಿಕೊಂಡಿದ್ದಾರೆ.
ರಜನಿಕಾಂತ್ ಅವರು ಸದ್ಯ ಉತ್ತರಾಖಂಡ್‌ನ ಪ್ರವಾಸದಲ್ಲಿದ್ದಾರೆ. ಹಿಮಾಲಯದ ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ರಜನಿ ಅವರನ್ನು ಅನೇಕ ಅಭಿಮಾನಿಗಳು ಭೇಟಿ ಮಾಡುತ್ತಿದ್ದಾರೆ. ರಜನಿಕಾಂತ್ ಹಿಮಾಲಯದಲ್ಲಿರುವ ವಿಷಯ ತಿಳಿದ ಅಭಿಮಾನಿಯೊಬ್ಬ ಚೆನ್ನೈನಿಂದ ಆಗಮಿಸಿದ್ದಾನೆ.
ಈ ವ್ಯಕ್ತಿ ಚೆನ್ನೈನಿಂದ ಉತ್ತರಾಖಂಡವರೆಗೂ ಕಾಲ್ನಡಿಗೆಯಲ್ಲಿ ಬಂದಿರೋದು ವಿಶೇಷವಾಗಿದೆ. 55 ದಿನ ಕಾಲ್ನಡಿಗೆಯಲ್ಲಿ ಬಂದಿರುವ ಅಭಿಮಾನಿ ಕೊನೆಗೂ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದು ಸಂತಸ ವ್ಯಕ್ತಪಡಿಸಿದ್ದಾನೆ. ರಜನಿಕಾಂತ್ ಜೊತೆಗಿರುವ ರಾ ಅರ್ಜುನಮೂರ್ತಿ ಎಂಬುವವರು ಈ ಅಭಿಮಾನಿ ಉತ್ತರಾಖಂಡ್‌ನಲ್ಲಿ ಭೇಟಿ ಮಾಡಿರೋ ಫೋಟೋವನ್ನು ಶೇರ್ ಮಾಡಿದ್ದಾರೆ.
ರಜನಿಕಾಂತ್ ಹಿಮಾಲಯದ ಪ್ರವಾಸ ಇದೇ ಮೊದಲಲ್ಲ. ಕಳೆದ ವರ್ಷವೂ ಹಿಮಾಲಯಕ್ಕೆ ಭೇಟಿ ಕೊಟ್ಟಿದ್ದ ರಜಿನಿಕಾಂತ್ ಅವರು ಕೊರೊನಾ ಕಾರಣಕ್ಕೆ ಅರ್ಧದಲ್ಲೇ ನಿಲ್ಲಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಬ್ಯುಸಿ ಆಗಿದ್ದರು. ಇದೀಗ ತಮ್ಮ ಧ್ಯಾನ ಮುಂದುವರಿಸಲು ರಜನಿಕಾಂತ್ ಮತ್ತೆ ಹಿಮಾಲಯಕ್ಕೆ ಆಗಮಿಸಿದ್ದಾರೆ. ಉತ್ತರಾಖಂಡ ಪ್ರವಾಸದಲ್ಲಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಎರಡು ಗಂಟೆಗಳ ಟ್ರಕ್ಕಿಂಗ್ ಮಾಡುವ ಬದ್ರಿನಾಥ ದೇವಸ್ಥಾನದ ದರ್ಶನ ಪಡೆದಿದ್ದಾರೆ. ಇದೀಗ ಮಹಾವತಾರ್ ಬಾಬಾಜಿ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
இன்று மகாவதார் பாபாஜி குகையில் நம் அன்புத் தலைவர் @rajinikanth அவர்கள் தியானத்தில் இருந்தார்! pic.twitter.com/n9Mi4U8a3G
— Arjunamurthy Ra | அர்ஜூனமூர்த்தி ரா (@RaArjunamurthy) August 15, 2023