ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು
ಬಿತ್ತಿದಂತೆ ಬೆಳೆ ಬಂದ್ರೂ ಬೆಳವಣಿಗೆಗೆ ಮಳೆ ಇಲ್ಲ
ತನ್ನ ಹೊಲದಲ್ಲಿನ ಬೆಳೆಯನ್ನೇ ನಾಶ ಮಾಡಿದ ರೈತ
ಗದಗ: ರಾಜ್ಯದಲ್ಲಿ ಮಳೆ ಬಾರದಿದ್ದಕ್ಕೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಮಳೆ ಅಭಾವದಿಂದ ಒಣಗಿರುವ ಮೆಕ್ಕೆಜೋಳದ ಬೆಳೆಯನ್ನು ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿರುವ ಘಟನೆ ನಡೆದಿದೆ.
ಗ್ರಾಮದ ಮುತ್ತಣ್ಣ ರೆಡ್ಡಿ ಬೆಟಗೇರಿ ಮೆಕ್ಕೆಜೋಳದ ಬೆಳೆ ನಾಶ ಮಾಡಿದ ರೈತ. ಇವರು 4 ಎಕರೆ ಹೊಲದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದರು. ಬಿತ್ತಿದಂತೆ ಬೆಳೆಯೇನು ಭೂಮಿಯಿಂದ ಮೇಲೆ ಬಂದಿದೆ. ಸರಿಯಾಗಿ ಮೊಣಕಾಲಿನಷ್ಟು ಎತ್ತರವಾಗಿದೆ. ಆದರೆ ಕೆಲ ದಿನಗಳಿಂದ ಮಳೆ ಬಾರದಿದ್ದರಿಂದ ಬೆಳೆ ಮೇಲಕ್ಕೆ ಬೆಳೆಯದೇ ಒಣಗಿ ಹೋಗುತ್ತಿದೆ.
ಇದರಿಂದ ಇದನ್ನು ನೋಡಲು ಆಗದೇ ರೈತ ಮುತ್ತಣ್ಣ ರೆಡ್ಡಿ ನೋವಿನ ಮನಸ್ಸಿಂದಲೇ ಟ್ರ್ಯಾಕ್ಟರ್ಗೆ ರೂಟರ್ ಜೋಡಿಸಿಕೊಂಡು ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡಿದ್ದಾರೆ. ಇನ್ನು ಮುಂಡರಗಿ ತಾಲೂಕಿನಲ್ಲಿ ಮಳೆ ಇಲ್ಲದೇ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಾಕಷ್ಟು ಒಣಬೇಸಾಯದ ರೈತರು ಮಳೆಯನ್ನೇ ನಂಬಿಕೊಂಡಿದ್ದರಿಂದ ಕಂಗಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ