newsfirstkannada.com

ಟೊಮ್ಯಾಟೋ ಜಾಕ್​ಪಾಟ್​; ಕೇವಲ 45 ದಿನದಲ್ಲಿ 4 ಕೋಟಿ ಗಳಿಸಿ ಶ್ರೀಮಂತನಾದ ರೈತ

Share :

Published July 29, 2023 at 5:54pm

Update July 29, 2023 at 5:56pm

    ಬರೋಬ್ಬರಿ 4 ಕೋಟಿ ರೂಪಾಯಿ ಆದಾಯ ಗಳಿಸಿದ ಅನ್ನದಾತ

    ಟೊಮ್ಯಾಟೋ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ರೈತರು ಫುಲ್ ಖುಷ್​

    ಹನಿ ನೀರಾವರಿ ಪದ್ದತಿ ಆಳವಡಿಸಿಕೊಂಡಿರುವ ರೈತ ಚಂದ್ರಮೌಳಿ

ದೇಶಾದ್ಯಂತ ದಿನೇ ದಿನೇ ಟೊಮ್ಯಾಟೋ ರೇಟ್ ಮತ್ತಷ್ಟು ದುಬಾರಿಯಾಗುತ್ತಿದೆ. ಈಗಾಗಲೇ ಶತಕ ಬಾರಿಸಿದ ಟೊಮ್ಯಾಟೋ ದ್ವಿಶತಕದತ್ತ ಹೋಗುತ್ತಿದೆ. ಟೊಮ್ಯಾಟೋ ಖರೀದಿ ಮಾಡೋದು ಗ್ರಾಹಕರಿಗೆ ಬಲು ಭಾರವಾಗಿದೆ. ಆದ್ರೆ, ಅಪರೂಪಕ್ಕೆ ಕೆಲವೊಂದಿಷ್ಟು ರೈತರು ಟೊಮ್ಯಾಟೋ ಬೆಳೆದು ಲಾಭ ಪಡೆಯುತ್ತಿದ್ದಾರೆ. ಇದೀಗ ಈ ತಿಂಗಳಿನಲ್ಲಿ ಟೊಮ್ಯಾಟೋ ಬೆಳೆದ ರೈತರಿಗೆ ಭರ್ಜರಿ ಲಾಭವಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ಚಂದ್ರಮೌಳಿ ಎಂಬುವವರು ಬರೋಬ್ಬರಿ 4 ಕೋಟಿ ರೂಪಾಯಿ ಸಂಪಾದಿಸಿದ್ದಾರೆ.

ಸೋಮಲ ಮಂಡಲದ ಕಲಕಮಂಡ ಗ್ರಾಮದ ರೈತ ಚಂದ್ರಮೌಳಿ ಅವರ ಕುಟುಂಬ 32 ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದೆ. ಇವರ ಇಡೀ ಕುಟುಂಬ ಹಲವು ವರ್ಷಗಳಿಂದ ಟೊಮ್ಯಾಟೋ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ರೈತ ಚಂದ್ರಮೌಳಿ ಅವರು ಚಿತ್ತೂರು ಜಿಲ್ಲೆಯಿಂದ ಕರ್ನಾಟಕದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೋ ತಂದು ಮಾರಾಟ ಮಾಡುತ್ತಿದ್ದಾರೆ. ಇದೀಗ ಟೊಮ್ಯಾಟೋ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಕೇವಲ 45 ದಿನದಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿ ಲಾಭ ಪಡೆದಿದ್ದಾರೆ.

ಇದುವರೆಗೂ 40 ಸಾವಿರ ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿದ ರೈತ ಚಂದ್ರಮೌಳಿ ಅವರು 22 ಎಕರೆಯಲ್ಲಿ ಟಮೋಟೋ ಬೆಳೆಯಲು 70 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮಾರ್ಕೆಟ್‌ಗೆ 20 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡಿದ್ದರು. ಟಮೋಟೋ ಸಾಗಾಟಕ್ಕೆ 10 ಲಕ್ಷ ರೂಪಾಯಿ ವೆಚ್ಚ ಭರಿಸಿದ್ದರು. ಹೀಗಾಗಿ ವೆಚ್ಚ ಕಳೆದು ಬರೋಬ್ಬರಿ 3 ಕೋಟಿ ರೂಪಾಯಿ ಲಾಭವನ್ನು ರೈತ ಗಳಿಸಿದ್ದಾರೆ. ಸೋದರ ಮುರುಳಿ ಜೊತೆಗೆ ಸೇರಿ ಜಂಟಿ ಕುಟುಂಬದಲ್ಲಿ ಟಮೋಟೋ ಬೆಳೆದ ರೈತ ಚಂದ್ರಮೌಳಿಗೆ ಇದರಿಂದ ಫುಲ್​​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಜಾಕ್​ಪಾಟ್​; ಕೇವಲ 45 ದಿನದಲ್ಲಿ 4 ಕೋಟಿ ಗಳಿಸಿ ಶ್ರೀಮಂತನಾದ ರೈತ

https://newsfirstlive.com/wp-content/uploads/2023/07/tamato-5.jpg

Load More