newsfirstkannada.com

ಮಸಾಲೆ ದೋಸೆಗೆ ಸಾಂಬರ್ ಕೊಡದ್ದಕ್ಕೆ ಬರೋಬ್ಬರಿ ₹3,500 ದಂಡ; ಎಲ್ಲಿ? ಏನಾಯ್ತು ಗೊತ್ತಾ?

Share :

13-07-2023

    140 ರೂಪಾಯಿ ಕೊಟ್ರೂ ಸಾಂಬರ್ ಕೊಡದ ರೆಸ್ಟೋರೆಂಟ್

    ಗ್ರಾಹಕನು ಮಾನಸಿಕವಾಗಿ ನೊಂದಿದ್ದಾರೆ ಎಂದ ಕೋರ್ಟ್‌

    3,500 ರೂಪಾಯಿ ದಂಡ ಕಟ್ಟಲು 45 ದಿನಗಳ ಕಾಲಾವಕಾಶ

ಪಾಟ್ನಾ: ಬಿಸಿ, ಬಿಸಿ ಮಸಾಲೆ ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆಗಾಲದಲ್ಲಿ ಚುಮು, ಚುಮು ಚಳಿಯಲ್ಲಿ ಚಟ್ನಿ, ಸಾಂಬರ್ ಜೊತೆ ಮಸಾಲೆ ದೋಸೆ ತಿನ್ನುತ್ತಾ ಇದ್ರೆ, ಆಹಾ.. ಬಾಯಲ್ಲಿ ನೀರೂರಿಸುತ್ತೆ. ಅದೇ ರುಚಿ, ರುಚಿಯಾದ ಮಸಾಲೆ ದೋಸೆಗೆ ಸಾಂಬರ್ ಸಿಗದಿದ್ರೆ ಎಂಥವರಿಗೂ ಕೋಪ ಬರುತ್ತೆ. ಬಿಹಾರದ ಗ್ರಾಹಕರೊಬ್ಬರಿಗೆ ಆಗಿರೋದು ಇದೇ. ಈ ವ್ಯಕ್ತಿ ಮಸಾಲೆ ದೋಸೆಗೆ ಸಾಂಬರ್ ಕೊಡಲಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ. 140 ರೂಪಾಯಿ ಮಸಾಲೆ ದೋಸೆಗೆ ಸಾಂಬರ್ ಕೊಡಲಿಲ್ಲ ಎಂದು ರೆಸ್ಟೋರೆಂಟ್‌ಗೆ 3,500 ರೂಪಾಯಿ ದಂಡ ಕಟ್ಟುವಂತೆ ಮಾಡಿದ್ದಾರೆ.

ಮನೀಶ್ ಗುಪ್ತ ಎನ್ನುವ ಗ್ರಾಹಕರೊಬ್ಬರು ಬಿಹಾರದ ಬಕ್ಸರ್‌ನಲ್ಲಿರುವ ನಮಕ್‌ ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಅಂದು ಮನೀಶ್ ಗುಪ್ತ ಅವರ ಬರ್ತ್‌ಡೇ ಕೂಡ ಇತ್ತು. ಇದೇ ಖುಷಿಯಲ್ಲಿ ಸ್ಪೆಷಲ್ ಮಸಾಲೆ ದೋಸೆ ಆರ್ಡರ್ ಮಾಡಿದ ಮನೀಶ್ ಗುಪ್ತ ಅವರು ಪಾರ್ಸಲ್ ತೆಗೆದುಕೊಂಡು ಮನೆಗೆ ಹೋಗ್ತಾರೆ. ಮನೆಯಲ್ಲಿ ಮಸಾಲೆ ದೋಸೆ ತಿನ್ನಲು ಹೋದಾಗ ಚಟ್ನಿ ಇರುತ್ತೆ, ಪಾರ್ಸನಲ್‌ನಲ್ಲಿ ಸಾಂಬರೇ ಇರೋದಿಲ್ಲ. ರೆಸ್ಟೋರೆಂಟ್‌ಗೆ ವಾಪಸ್ ಹೋದ ಮನೀಶ್ ಗುಪ್ತ ಅವರು ಸಾಂಬರ್ ಕೇಳಿದ್ದಾರೆ. ಆಗ ರೆಸ್ಟೋರೆಂಟ್ ಸಿಬ್ಬಂದಿ 140 ರೂಪಾಯಿ ಕೊಟ್ಟಿದ್ದಕ್ಕೆ ಚಟ್ನಿನೇ ಜಾಸ್ತಿ ಆಯ್ತು. ಮತ್ತೆ ಬಂದು ಸಾಂಬರ್ ಬೇರೆ ಕೇಳ್ತಿಯಾ ಎಂದು ಆವಾಜ್ ಹಾಕಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಆದ ಅವಮಾನಕ್ಕೆ ಮನೀಶ್ ಗುಪ್ತ ಅವರು ದಾಖಲೆ ಸಮೇತ ಗ್ರಾಹಕರ ಕೋರ್ಟ್‌ ಮೆಟ್ಟಿಲೇರುತ್ತಾರೆ. ತನಗೆ ಸಾಂಬರ್ ಕೊಡದ ನಮಕ್‌ ರೆಸ್ಟೋರೆಂಟ್‌ ವಿರುದ್ಧ ದೂರು ದಾಖಲಿಸುತ್ತಾರೆ. ಆಗಸ್ಟ್ 15, 2022ರಲ್ಲಿ ಈ ಘಟನೆ ನಡೆದಿದ್ದು ಸತತ ವಿಚಾರಣೆ ಬಳಿಕ ಇಂದು ಕೋರ್ಟ್ ತೀರ್ಪು ನೀಡಿದೆ. ಮಸಾಲೆ ದೋಸೆಗೆ ಚಟ್ನಿ ಕೊಟ್ಟು ಕೊಡದಿರೋದಕ್ಕೆ ಗ್ರಾಹಕ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ನೊಂದಿದ್ದಾರೆ. ಹೀಗಾಗಿ ಮಸಾಲೆ ದೋಸೆಗೆ ಸಾಂಬರ್ ಕೊಡದ್ದಕ್ಕೆ 3,500 ದಂಡ ಕಟ್ಟಲು ಸೂಚಿಸಲಾಗಿದೆ. 140 ರೂಪಾಯಿ ಮಸಾಲೆ ದೋಸೆಗೆ ಸಾಂಬರ್ ಗಲಾಟೆ ಕೋರ್ಟ್‌ ಕಟಕಟೆಯಲ್ಲಿ ಇತ್ಯರ್ಥವಾಗಿದ್ದು, 3,500 ರೂಪಾಯಿ ದಂಡ ಕಟ್ಟಲು 45 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ರೆಸ್ಟೋರೆಂಟ್ ಮಾಲೀಕರು ಈ ದಂಡ ಕಟ್ಟದಿದ್ರೆ ಶೇಕಡಾ 8ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಸಾಲೆ ದೋಸೆಗೆ ಸಾಂಬರ್ ಕೊಡದ್ದಕ್ಕೆ ಬರೋಬ್ಬರಿ ₹3,500 ದಂಡ; ಎಲ್ಲಿ? ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/07/Masala-Dosa.jpg

Load More