ಪಟಾಕಿ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ
ಬೃಹತ್ ಮಟ್ಟದ ಬೆಂಕಿ ನಂದಿಸಲು ಹರಸಾಹಸ
ಬೆಂಕಿ ನಂದಿಸಲು ಐದಾರು ಗಂಟೆ ಕಾರ್ಯಾಚರಣೆ
ವಿಘ್ನೇಶ್ವರನ ಹಬ್ಬಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿ ಇರುವುಗಲೇ ಹಾವೇರಿಗರ ಪಾಲಿಗೆ ವಿಘ್ನವೊಂದು ಎದುರಾಗಿದೆ. ಗಣೇಶ.. ದಸರಾ.. ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆದು ಸಂಭ್ರಮ ಮಾಡಬೇಕೆಂದಿದ್ದ ಹಾವೇರಿ ಜನರು, ಈ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದಾರೆ.
ಅತ್ತ ಸ್ಫೋಟದ ಸದ್ದು. ಇತ್ತ ನೋವಿನ ಆಕ್ರಂದನ. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಹಾವೇರಿ ನಗರ ಹೊರವಲಯದಲ್ಲಿರುವ ಆಲದಕಟ್ಟಿ ಗ್ರಾಮ.
ಪಟಾಕಿ ಗೋಡೌನ್ನಲ್ಲಿ ಭಾರೀ ಅಗ್ನಿ ಅವಘಡ
ನಿನ್ನೆ ಹಾವೇರಿ ಜನರ ಪಾಲಿಗೆ ಕರಾಳ ದಿನವಾಗಿತ್ತು. ಶಾಂತವಾಗಿದ್ದ ಹಾವೇರಿ ಸುತ್ತಮುತ್ತ ಹೊತ್ತಿ ಊರಿಯುತ್ತಿರುವ ಹೊಗೆಯಿಂದ ಮುಚ್ಚಿ ಹೋಗಿತ್ತು. ಅದಕ್ಕೆ ಕಾರಣ ನಗರದ ಹೊರವಲಯದಲ್ಲಿರುವ ಆಲದಕಟ್ಟಿ ಗ್ರಾಮದ ಬಳಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡ. ಕುಮಾರ ಸಾತೇನಹಳ್ಳಿ ಎಂಬುವರಿಗೆ ಸೇರಿದ ಭೂಮಿಕಾ ಪಟಾಕಿ ಅಂಗಡಿಯ ಗೋದಾಮಿನಲ್ಲಿ ಸುಮಾರು ಒಂದುವರೆ ಕೋಟಿ ರುಪಾಯಿ ಮೌಲ್ಯದ ಪಟಾಕಿ ಇಡಲಾಗಿತ್ತು. ದುರಾದೃಷ್ಟವಶಾತ್ ಇದೇ ಗೋದಾಮಿಗೆ ವೆಲ್ಡಿಂಗ್ ಕಾರ್ಯ ಮಾಡುವಾಗ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿ ಉರಿದಿತ್ತು.
ಪಟಾಕಿ ಗೋದಾಮಿನ ಬೆಂಕಿ ನಂದಿಸಲು ಅಕ್ಷರಸಃ ಅಗ್ನಿಶಾಮಕ ಸಿಬ್ಬಂದಿ ಹೆಣಗಾಡಿದ್ದು, ಬೆಂಕಿ ನಂದಿಸಲು ಸುಮಾರು ಆರು ಗಂಟೆ ತೆಗದುಕೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಚ್ಚಿ ಬಿದ್ದಿದ್ದರು. ಕಾರಣ ನಾಪತ್ತೆಯಾಗಿದ್ದ ಐವರ ಪೈಕಿ ನಾಲ್ವರು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದರು. ಮೃತರು ಕಾಟೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದ್ದು, ಮನೆ ಮಕ್ಕಳನ್ನ ಕಳೆಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪಟಾಕಿ ಅವಘಡದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ
ಅಂಗಡಿಗೆ ಬಿದ್ದ ಒಂದೇ ಒಂದು ಕಿಡಿ ಕೋಟ್ಯಾಂತರ ರುಪಾಯಿ ಮೌಲ್ಯದ ಪಟಾಕಿಯ ಜೊತೆಗೆ ನಾಲ್ವರ ಪ್ರಾಣ ಹೊತ್ತೊಯ್ದಿದೆ. ಇನ್ನು ನಾಪತ್ತೆಯಾದ ಐವರ ಪೈಕಿ ಮೊದಲು ಮೂವರ ಮೃತದೇಹ ಪತ್ತೆಯಾಗಿತ್ತು. ತಡರಾತ್ತಿ ಮತ್ತೋರ್ವನ ಮೃತದೇಹ ಹೊರತೆಗೆಯಲಾಗಿದ್ದು ನಾಲ್ವರು ಮೃತಪಟ್ಟಂತಾಗಿದೆ. ಇನ್ನು ಕತ್ತಲಲ್ಲೂ ಬೆಂಕಿ ಉರಿಯುತ್ತಿದ್ದು, ಅಗ್ನಿ ಶಾಮಕ ಸಿಬ್ಬಂದಿಗೆ ಕಾರ್ಯಾಚರಣೆಯೇ ಸವಾಲಾಗಿತ್ತು. ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಶಿವಕುಮಾರ ಗೂಣಾರೆ ಹಾಗೂ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿ, ಪರಿಶೀಲನೆ ಕೂಡ ನಡೆಸಿದ್ರು.
ಇನ್ನು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಸಿಡಿದ ಒಂದು ಕಿಡಿ ಮುಗ್ಧ ಕಾರ್ಮಿಕರ ಪ್ರಾಣ ತೆಗೆದಿರೋದು ಮಾತ್ರ ಭಾರೀ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ