1 ಎಕರೆ ಜಾಗವನ್ನ 35 ಕೋಟಿಗೆ ಖರೀದಿಸಿದ ದೇವರೆಡ್ಡಿ ನಾಗಲಕ್ಷ್ಮಮ್ಮ
ಅಯ್ಯೋ.. 20 ಕೋಟಿ ರೂಪಾಯಿಯ ಚೆಕ್ನಲ್ಲಿ ಏನಿಲ್ಲ..ಏನಿಲ್ಲ
ಬ್ಯಾಂಕ್ನಲ್ಲಿ ವಿಚಾರಿಸಿದಾಗ ಅಕೌಂಟ್ನಲ್ಲಿ ಹಣ ಇಲ್ಲ
ಬಳ್ಳಾರಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಅತ್ತೆ ದೇವರೆಡ್ಡಿ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ ನಾಗರಾಜ್ ಮೇಲೆ ವಂಚನೆ ಕೇಸ್ ದಾಖಲಾಗಿದೆ. ಮಾಜಿ ಶಾಸಕ ಎಂ ದೀವಾಕರ್ ಬಾಬು ಪುತ್ರ ಎಂ ಹನುಮ ಕಿಶೋರ್ ಅವರು ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜನಾರ್ದನ ರೆಡ್ಡಿ ಅವರ ಅತ್ತೆ ನಾಗಲಕ್ಷಮ್ಮರಿಗೆ ಹನುಮ ಕಿಶೋರ್ ತಮ್ಮ ಆಸ್ತಿಯನ್ನು ಕ್ರಯ ಪತ್ರದ ಮೂಲಕ ಮಾರಾಟ ಮಾಡಿದ್ದರು. ಆದರೆ ಆಸ್ತಿ ಖರೀದಿಗೆ ನಾಗಲಕ್ಷ್ಮಮ್ಮ ಚೆಕ್ ನೀಡಿದ್ದು, ಆ ಖಾತೆಯಲ್ಲಿ ಹಣ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಇದನ್ನು ಗಮನಿಸಿ ಹನುಮ ಕಿಶೋರ್ ರೆಡ್ಡಿ ಅವರು ನಾಗಲಕ್ಷಮ್ಮ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾರೆ.
ಅಂದಹಾಗೆಯೇ ಹನುಮ ಕಿಶೋರ್ ಮಾಲಿಕತ್ವದ ನಲ್ಲಚೇರುವು ಪ್ರದೇಶದ 1 ಎಕರೆ ಜಾಗ 35 ಕೋಟಿಗೆ ಮಾರಾಟ ಮಾಡಿದ್ದರು. ಬಳ್ಳಾರಿಯ KSRTC ಬಸ್ ನಿಲ್ದಾಣ ಎದುರಿನ ನಲ್ಲಚೆರವು ಪ್ರದೇಶ ಒಂದು ಎಕರೆ ಜಾಗವನ್ನು ಸೇಲ್ ಮಾಡಿದ್ದರು. TS No 4/2B, 4/2/B, 4/CA/2, 4/3B2 ಗಳ 1 ಎಕರೆ ಜಾಗವನ್ನು ಕೊಟ್ಟಿದ್ದರು. ಹೀಗಾಗಿ ಪೇಗೀರಾ ಟಾಕ್ ಪ್ರೈ.ಲಿ. ಕಂಪನಿಯ ನಿರ್ದೇಶಕಿ ದೇವರೆಡ್ಡಿ ನಾಗಲಕ್ಷ್ಮಮ್ಮ, BK ನಾಗರಾಜ್ಗೆ ಕ್ರಯ ಪತ್ರ ವಿತರಿಸಿದ್ದರು. ಅದಕ್ಕೆ ತಕ್ಕಂತೆ ಜಾಗ ಖರೀದಿದಾರರು 20 ಕೋಟಿ ರೂಪಾಯಿಯ ಚೆಕ್ ಮುಂಗಡ ನೀಡಿದ್ದರು.
ಹನುಮ ಕಿಶೋರ್ಗೆ 04/05/23 ರಂದು ಮಾತುಕತೆ ಮೂಲಕ 20 ಕೋಟಿ ಚೆಕ್ ನೀಡಿದ್ದರು. ಆಗಸ್ಟ್ 02 ರಂದು ಚೆಕ್ ಕಲೆಕ್ಷನ್‌ಗೆ ಬ್ಯಾಂಕ್ಗೆ ಹೋಗಿ ಚೆಕ್ ನೀಡಿದ್ದಾಗ ಅಕೌಂಟ್ನಲ್ಲಿ ಹಣ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ಹನುಮ ಕಿಶೋರ್ ಖಾತೆಯಲ್ಲಿ ಹಣ ಇಲ್ಲವೆಂದು ದೇವರೆಡ್ಡಿ ನಾಗಲಕ್ಷ್ಮಮ್ಮ ಹಾಗೂ ಬಿ.ಕೆ ನಾಗರಾಜ್ ಮೇಲೆ ಕಲಂ 420 ವಂಚನೆ ಕೇಸ್ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ