newsfirstkannada.com

×

Nagamangala: ಹೊಟ್ಟೆ ಉರಿಯುತ್ತಾ ಇದೆ ಸಾರ್.. ಲಕ್ಷಾಂತರ ರೂ. ಮಾಲ್ ಹಾಳು ಮಾಡಿದ್ದಾರೆ; ಹಣ್ಣಿನ ವ್ಯಾಪಾರಿ ಅಳಲು

Share :

Published September 12, 2024 at 1:36pm

    ನಿನ್ನೆ ರಾತ್ರಿ ಕೆಳಗಿದ್ದ ಚಪ್ಪಡಿ ಕಲ್ಲನ್ನು ಅಂಗಡಿ ಮೇಲೆ ಎತ್ತಾಕಿದ್ದಾರೆ

    ನ್ಯೂಸ್ ಫಸ್ಟ್ ಜೊತೆ ತಮ್ಮ ಕಷ್ಟ ಹಂಚಿಕೊಂಡ ಹಣ್ಣಿನ ವ್ಯಾಪಾರಿ

    10 ವರ್ಷದಿಂದ ಗಣೇಶೋತ್ಸವ ಚೆನ್ನಾಗಿತ್ತು ಆದರೆ ಈ ವರ್ಷ ಏನಾಯ್ತು?

ಮಂಡ್ಯ: ನಾಗಮಂಗಲದಲ್ಲಿ ನಿನ್ನೆ ರಾತ್ರೋರಾತ್ರಿ ನಡೆದ ಅಹಿತಕರ ಘಟನೆ ಆಘಾತಕಾರಿಯಾಗಿದೆ. ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಿಂದ ಹಲವಾರು ಜನ ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ನಾಗಮಂಗಲ ಮಂಡ್ಯ ಸರ್ಕಲ್‌ನ ಸಣ್ಣ, ಪುಟ್ಟ ಅಂಗಡಿ ವ್ಯಾಪಾರಿಗಳಂತೂ ಅಕ್ಷರಶಃ ಕಂಗಾಲಾಗಿದ್ದಾರೆ.

ನಾಗಮಂಗಲ ಗಲಾಟೆಯಲ್ಲಿ ಹಾನಿಗೊಳಗಾದವರಲ್ಲಿ ಹಣ್ಣಿನ ವ್ಯಾಪಾರಿ ಮಾಜ್ ಕೂಡ ಒಬ್ಬರು. ನ್ಯೂಸ್ ಫಸ್ಟ್ ಜೊತೆ ತಮ್ಮ ಕಷ್ಟ ಹಂಚಿಕೊಂಡ ಮಾಜ್ ಅವರು ಯಾಕೆ ಇಂಥ ಘಟನೆ ನಡೆಯಿತು. ನನಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು 

ಮಾಜ್‌ ಅವರು ನಾಗಮಂಗಲದಲ್ಲಿ ಹಣ್ಣಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಿನ್ನೆ ಸಂಜೆ 6 ಗಂಟೆಗೆ ಗೌರಿ, ಗಣೇಶ ಮೂರ್ತಿ ಮೆರವಣಿಗೆ ಹೀಗೆ ಹೋಯ್ತು. ಆಮೇಲೆ ಪಟಾಕಿ ಹೊಡೆದ ಮೇಲೆ ಏನೋ ಗಲಾಟೆ ಆಗಿದೆ. ನನ್ನ ಅಂಗಡಿಯನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು, ಹಣ್ಣಿನ ಅಂಗಡಿಯಲ್ಲಿ ರಾತ್ರಿ ಜೋಡಿಸಿದ್ದ ಒಂದೂವರೆ ಲಕ್ಷದ ಹಣ್ಣುಗಳನ್ನ ಎಲ್ಲಾ ಹಾಳು ಮಾಡಿದ್ದಾರೆ. ಕೆಳಗಿದ್ದ ಚಪ್ಪಡಿ ಕಲ್ಲನ್ನು ಅಂಗಡಿ ಮೇಲೆ ಎತ್ತಾಕಿದ್ದಾರೆ. ಕಿವಿ ಫ್ರೂಟ್ಸ್ ಬಾಕ್ಸ್‌ ಅನ್ನು ಖಾಲಿ ಮಾಡಿದ್ದಾರೆ. ನನಗೆ ಒಂದೂವರೆ ಲಕ್ಷ ರೂಪಾಯಿ ಲಾಸ್ ಆಗಿದೆ. ಕಾನೂನು ಪ್ರಕಾರ ನನಗೆ ಸಹಾಯ ಮಾಡಬೇಕು ಅಷ್ಟೇ ಎಂದಿದ್ದಾರೆ.

ನಾಗಮಂಗಲದಲ್ಲಿ ಎಲ್ಲರೂ ನಾವು ಚೆನ್ನಾಗಿ ಇದ್ದೇವೆ. ನಾವು ಅವರ ಮನೆಗೆ ಹೋಗಿದ್ದೇವು. ಅವರು ನಮ್ಮ ಮನೆಗೆ ಬಂದು ಊಟ ಮಾಡಿದ್ದಾರೆ. ನಾನು ಫ್ರೆಂಡ್ಸ್‌ಗಳಿಗೆ ತುಂಬಾ ಸಹಾಯ ಮಾಡಿದ್ದೇನೆ. ಹೊಟ್ಟೆಯೆಲ್ಲಾ ಉರಿಯುತ್ತೆ ಸಾರ್. ನಮ್ಮ ಅಪ್ಪ, ಅಮ್ಮ ಎಲ್ಲರೂ ಕೋಪದಲ್ಲಿ ಇದ್ದಾರೆ. ರಾತ್ರಿ 3 ಗಂಟೆಗೆ ನಾನು ಪೊಲೀಸರಿಗೆ ಫೋನ್ ಮಾಡಿದ್ದೇ ನಾನು. ಪೊಲೀಸರು ಏನು ತೊಂದರೆ ಇಲ್ಲ. ನೀವು ಆರಾಮಾಗಿ ಇರಿ ಎಂದು ಹೇಳಿದ್ದಾರೆ.

ಎಲ್ಲರೂ ಚೆನ್ನಾಗಿದ್ದರು ಸಾರ್. 10 ವರ್ಷದಿಂದ ಗಣೇಶ ವಿಸರ್ಜನೆಯನ್ನ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದರು. ಈ ವರ್ಷ ಯಾಕೆ ಹೀಗಾಯ್ತೋ ಗೊತ್ತಿಲ್ಲ ಸಾರ್. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ನನಗೆ ಒಂದೂವರೆ ಲಕ್ಷ ರೂಪಾಯಿ ನಷ್ಟ ಆಗಿದೆ. ನನಗೆ ಪರಿಹಾರ ಬೇಕು ಅಷ್ಟೇ ಎಂದು ಹಣ್ಣಿನ ವ್ಯಾಪಾರಿ ಮಾಜ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nagamangala: ಹೊಟ್ಟೆ ಉರಿಯುತ್ತಾ ಇದೆ ಸಾರ್.. ಲಕ್ಷಾಂತರ ರೂ. ಮಾಲ್ ಹಾಳು ಮಾಡಿದ್ದಾರೆ; ಹಣ್ಣಿನ ವ್ಯಾಪಾರಿ ಅಳಲು

https://newsfirstlive.com/wp-content/uploads/2024/09/Nagamangala-Shop-owner-2.jpg

Load More