ಸಾಫ್ಟ್‌ವೇರ್ ಇಂಜಿನಿಯರ್ ಮನೆಗೆ ಕನ್ನ ಹಾಕಿದ ಖದೀಮರ ಗ್ಯಾಂಗ್
ಕನ್ನ ಹಾಕಿದ ಮನೆಯಲ್ಲಿ ಹಣ, ಚಿನ್ನ, ಬೆಳ್ಳಿ ಏನಂದ್ರೆ ಏನೂ ಸಿಗಲಿಲ್ಲ
ಲಾಕ್ ಮಾಡಿ ಹೋಗಿದ್ದ ಮನೆಯವರಿಗೆ ವಾಪಸ್ ಬಂದಾಗ ಶಾಕ್
ನವದೆಹಲಿ: ಮನೆಗೆ ಕನ್ನ ಹಾಕುವ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿಕೊಂಡು ಹೋಗ್ತಾರೆ. ಅದೇ ಮನೆಯಲ್ಲಿ ಹಣ, ಒಡವೆ, ಚಿನ್ನ, ಬೆಳ್ಳಿ ಏನೂ ಸಿಗದಿದ್ರೆ ಹೇಂಗಿರುತ್ತೆ. ಕಳ್ಳರು ನಿಜಕ್ಕೂ ಕಂಗಾಲಾಗಿ ಬಿಡ್ತಾರೆ. ಕಷ್ಟಪಟ್ಟು ಮನೆಗೆ ಕನ್ನ ಹಾಕಿದ ಮೇಲೆ ಬಿಡಿಗಾಸು ಸಿಗದಕ್ಕೆ ಕಳ್ಳರ ಗ್ಯಾಂಗ್ ಕೋಪ ಮಾಡಿಕೊಂಡು 500 ರೂಪಾಯಿ ನೋಟನ್ನು ಇಟ್ಟು ಹೋಗಿರೋ ಘಟನೆ ನವದೆಹಲಿಯಲ್ಲಿ ನಡೆದಿದೆ. ಮನೆ ಲಾಕ್ ಮಾಡಿ ಹೋಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕಳ್ಳರ ಕರಾಮತ್ತು ಕಂಡು ನಿಜಕ್ಕೂ ಶಾಕ್ ಆಗಿದ್ದಾರೆ.
ನವದೆಹಲಿ ರೋಹಿಣಿ ಏರಿಯಾದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಮನೆಯಲ್ಲಿ ಈ ಘಟನೆ ನಡೆದಿದೆ. ಈ ಮನೆಯಲ್ಲಿದ್ದವರೆಲ್ಲಾ ಗುರುಗ್ರಾಮದಲ್ಲಿರುವ ಮಗನ ಮನೆಗೆ ಹೋಗಿರುತ್ತಾರೆ. ಅಲ್ಲಿದ್ದಾಗಲೇ ಪಕ್ಕದ ಮನೆಯವರು ಫೋನ್ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಅನ್ನೋ ಸುದ್ದಿ ತಿಳಿಸುತ್ತಾರೆ. ಕೂಡಲೇ ಬಂದು ನೋಡಿದಾಗ ಮನೆಯ ಬೀಗ ಹೊಡೆದು ಬಾಗಿಲು ತೆರೆದಿರೋದು ಕಾಣಿಸುತ್ತೆ. ಒಳಗೆ ಹೋಗಿ ನೋಡಿದರೆ ಯಾವೊಂದು ವಸ್ತುಗಳು ನಾಪತ್ತೆಯಾಗಿರುವುದಿಲ್ಲ. ಏನು ಕಳ್ಳತನವಾಗಿಲ್ಲ ಅನ್ನೋದು ಖಚಿತ ಪಡಿಸಿಕೊಂಡು ನೋಡಿದ್ರೆ ಅಲ್ಲಿ 500 ರೂಪಾಯಿ ನೋಟು ಇಟ್ಟಿರೋದು ಕಂಡು ಬರುತ್ತೆ.
ಕಳೆದ ಜುಲೈ 19ರಂದು ಉತ್ತರ ರೋಹಿಣಿ ಪೊಲೀಸ್ ಠಾಣೆಗೆ 80 ವರ್ಷದ ವ್ಯಕ್ತಿ ಕರೆ ಮಾಡಿ ನಮ್ಮ ಮನೆ ಕಳ್ಳತನವಾಗಿದೆ ಎಂದು ಹೇಳುತ್ತಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಹೋಗಿ ನೋಡಿದಾಗ ಈ ದೃಶ್ಯ ಕಂಡು ಬಂದಿದೆ. ಟೆಕ್ಕಿ ಮನೆಗೆ ಕಷ್ಟಪಟ್ಟು ಕನ್ನ ಹಾಕಿದ ಕಳ್ಳರ ಗ್ಯಾಂಗ್ ಏನೂ ಸಿಗದಕ್ಕೆ ಕೋಪ ಮಾಡಿಕೊಂಡಿದೆ. ಕೊನೆಗೆ ಮನೆಯ ಬಾಗಿಲ ಬಳಿ 500 ರೂಪಾಯಿ ನೋಟು ಇಟ್ಟು ತೆರಳಿದ್ದಾರೆ.
ಕಳೆದ ಜೂನ್‌ನಲ್ಲೂ ದೆಹಲಿಯಲ್ಲಿ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಗಂಡ, ಹೆಂಡತಿಯನ್ನು ದೋಚಲು ಬಂದ ಖದೀಮರು ಅವರ ಬಳಿ ಬರೀ 20 ರೂಪಾಯಿ ಇರೋದನ್ನ ನೋಡಿದ್ದಾರೆ. ಕೊನೆಗೆ ಕಳ್ಳರೇ ದಂಪತಿ ಕೈಗೆ 100 ರೂಪಾಯಿ ಕೊಟ್ಟು ಹೋಗಿದ್ದರು. ಈ ರಾಬರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ