newsfirstkannada.com

Video: ಮಧ್ಯರಾತ್ರಿ ಬರ್ತಾರೆ ನಾಟಿ ಕೋಳಿ ಕದಿತಾರೆ.. ಕೊಕ್ಕೊ ಕೋಳಿಯೇ ಕೊಟ್ಟಿತು ಕಳ್ಳರ ಸೂಚನೆ 

Share :

24-07-2023

  ನಾಟಿ ಕೋಳಿ ಕದಿಯುತ್ತಿದ್ದ ಕಳ್ಳರ ಗ್ಯಾಂಗ್

  15 ಕೋಳಿಗಳನ್ನು ಎಗರಿಸಿದ್ದ ಖತರ್ನಾಕ್​ ಕಳ್ಳರು

  ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕದ ದೃಶ್ಯ

ತುಮಕೂರು: ನಾಟಿ ಕೋಳಿ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಘಟನೆ ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುಧಾ ಎಂಬವರ ಮನೆಯ ನಾಟಿ ಕೋಳಿಯನ್ನು ಖದೀಮರು ಕದ್ದೊಯ್ದಿದ್ದರು. ನಿನ್ನೆ ಮಧ್ಯರಾತ್ರಿ ಬಂದ 5 ಜನರ ಗ್ಯಾಂಗ್​ ಕಳ್ಳತನ ಮಾಡಿದ್ದರು. 40 ಕೋಳಿಯಲ್ಲಿ ಸುಮಾರು 15 ಕೋಳಿಗಳನ್ನು ಕಳ್ಳರು ಎಗರಿಸಿದ್ದರು.

ಕಳ್ಳರು ಕೋಳಿ ಕದಿಯುವ ವೇಳೆ ಅದರ ಕೂಗಿಗೆ ಸುಧಾ ಎಚ್ಚರಗೊಂಡಿದ್ದಾರೆ. ತಕ್ಷಣವೇ ಕೋಳಿ ಗೂಡಿನತ್ತ ಸುಧಾ ಬಂದಾಗ ನಾಲ್ವರು ಕಳ್ಳರು ಅಲ್ಲಿಂದ ಓಡಿಹೋಗಿದ್ದಾರೆ. ಆದರೆ ಓರ್ವನನ್ನು ಸುಧಾ ಹಿಡಿದು ಕೂಡಿ ಹಾಕಿದ್ದಾರೆ. ಈ ಘಟನೆ ಪಾವಗಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮಧ್ಯರಾತ್ರಿ ಬರ್ತಾರೆ ನಾಟಿ ಕೋಳಿ ಕದಿತಾರೆ.. ಕೊಕ್ಕೊ ಕೋಳಿಯೇ ಕೊಟ್ಟಿತು ಕಳ್ಳರ ಸೂಚನೆ 

https://newsfirstlive.com/wp-content/uploads/2023/07/Chiken-Stolen.jpg

Load More