newsfirstkannada.com

WATCH: ಸತ್ತ ಮೇಲೂ ವಧು- ವರರಿಗೆ ಮದುವೆ ಭಾಗ್ಯ.. ಏನಿದು ಪ್ರೇತಾತ್ಮಗಳ ಕಲ್ಯಾಣ?

Share :

13-08-2023

    ಬಂಟ್ವಾಳದ ವಧು ಉಳ್ಳಾಲದ ವರನ ಕುಟುಂಬದ ಕಲ್ಯಾಣ

    ಅಪ್ರಾಪ್ತ ವಯಸ್ಸಿನಲ್ಲಿ ಸಾವನ್ನಪ್ಪಿದರೆ ಅತೃಪ್ತ ಆತ್ಮಗಳಾಗುತ್ತವೆ

    ಸಪ್ತಪದಿ, ಸೀರೆ ಕೊಡುವ ಶಾಸ್ತ್ರ, ಸಂಪ್ರದಾಯ ಪಾಲಿಸಲಾಗುತ್ತೆ

ಬಂಟ್ವಾಳ: ಮದುವೆ ಮನೆ ಅಂದ್ರೆ ಗಂಡು, ಹೆಣ್ಣು ಇರಲೇಬೇಕು. ಆದರೆ ತುಳುನಾಡಲ್ಲಿ ವಿಶಿಷ್ಟ ಆಚರಣೆಯೊಂದು ಮಾಡಲಾಗುತ್ತೆ. ಇಲ್ಲಿ ಮದುವೆಯಾಗೋ ಗಂಡು-ಹೆಣ್ಣು ಕಣ್ಣಿಗೆ ಕಾಣಿಸೋದಿಲ್ಲ. ವಧು-ವರನ ಕುಟುಂಬದ ನಡುವೆ ಪ್ರೇತಾತ್ಮಗಳ ಮದುವೆ ಮಾಡಲಾಗುತ್ತೆ. ಈ ಪ್ರೇತಗಳ ಮದುವೆ ನಡೆಯೋದು ಯಾಕೆ? ಹೇಗೆಲ್ಲಾ ಮಾಡಲಾಗುತ್ತೆ ಅನ್ನೋದು ನಿಜಕ್ಕೂ ವಿಶಿಷ್ಟವಾಗಿದೆ.

ತುಳುನಾಡಲ್ಲಿ ನಡೆಯೋ ಪ್ರೇತಾತ್ಮಗಳ ವಿವಾಹ ಮೃತಪಟ್ಟವರ ಆಸೆ ಈಡೇರಿಸೋ ವಿಶಿಷ್ಟ ಆಚರಣೆ. ಮದುವೆಯಾಗದೇ ಮೃತಪಟ್ಟವರಿಗೆ ವಿವಾಹದ ಭಾಗ್ಯ ಕರುಣಿಸಲಾಗುತ್ತೆ. ಹೀಗೆ ಮದುವೆ ಮಾಡಿಸದಿದ್ರೆ ಕುಟುಂಬಕ್ಕೆ ನಾನಾ ತೊಂದರೆ ಆಗುತ್ತೆ ಎನ್ನುವ ನಂಬಿಕೆ ಇದೆ. ಉಡುಪಿಯಲ್ಲಿ ವರ್ಷಕ್ಕೊಂದು ಬಾರಿ ಇಂತಹ ಮದುವೆ ಮಾಡಲಾಗುತ್ತೆ. ಇತ್ತೀಚೆಗೆ ಬಂಟ್ವಾಳದ ವಧು ಉಳ್ಳಾಲದ ವರನ ಕುಟುಂಬದ ಮಧ್ಯೆ ಈ ರೀತಿಯ ಮದುವೆ ನಡೆದಿದೆ.

ಕರಾವಳಿ ಭಾಗದಲ್ಲಿ ನಡೆಯುವ ಪ್ರೇತ ಮದುವೆಯನ್ನು ಸಾಕಷ್ಟು ಸಂಭ್ರಮದಿಂದ ಮಾಡಲಾಗುತ್ತೆ. ಮದುವೆ ಆಗುವ ಮುಂಚೆ ಅಪ್ರಾಪ್ತ ವಯಸ್ಸಿನಲ್ಲಿ ಸಾವನ್ನಪ್ಪಿದರೆ ಅತೃಪ್ತ ಆತ್ಮಗಳಾಗುತ್ತವೆ. ಹಲವು ವರ್ಷಗಳ ಹಿಂದೆ ಚಿರ ಯೌವ್ವನದಲ್ಲಿ ಸಾವನ್ನಪ್ಪಿದ ವಧು, ವರರಿಗೆ ಕುಟಂಬಸ್ಥರು ಮದುವೆ ಮಾಡುತ್ತಾರೆ. ಹೇಗೆ ಬದುಕಿರುವಾಗ ವಿವಾಹ ಮಹೋತ್ಸವ ಮಾಡಲಾಗುತ್ತೋ ಅದೇ ರೀತಿಯ ಸಂಪ್ರದಾಯಗಳನ್ನು ಆಚರಿಸಲಾಗುತ್ತೆ. ಸಪ್ತಪದಿ, ಸೀರೆ ಕೊಡುವ ಶಾಸ್ತ್ರ ಹೀಗೆ ಎಲ್ಲಾ ಶಾಸ್ತ್ರಗಳನ್ನು ಪಾಲಿಸಲಾಗುತ್ತೆ. ಬಂದಂತಹ ಅತಿಥಿಗಳಿಗೆ ಭರ್ಜರಿ ಊಟ ಹಾಕಿಸಿ ಸತ್ಕರಿಸಲಾಗುತ್ತೆ. ಪ್ರತಿ ವರ್ಷದ ಆಷಾಢ ಮಾಸದಲ್ಲಿ ಇದು ಕರಾವಳಿಯಲ್ಲಿ ಸಾಮಾನ್ಯವಾಗಿ ನಡೆದುಕೊಂಡು ಬರುವ ಸಂಪ್ರದಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಸತ್ತ ಮೇಲೂ ವಧು- ವರರಿಗೆ ಮದುವೆ ಭಾಗ್ಯ.. ಏನಿದು ಪ್ರೇತಾತ್ಮಗಳ ಕಲ್ಯಾಣ?

https://newsfirstlive.com/wp-content/uploads/2023/08/Mangalore-Pretha-Maduve.jpg

Load More