newsfirstkannada.com

5 ಸ್ಟಾರ್‌ ಹೋಟೆಲ್‌ನಲ್ಲಿ 2 ವರ್ಷ ಇದ್ದ ಅತಿಥಿಗೆ ₹58 ಲಕ್ಷ ಬಿಲ್‌ ಹಾಕಿದ್ಮೇಲೆ ನಾಪತ್ತೆ; ಮುಂದೇನಾಯ್ತು?

Share :

Published June 21, 2023 at 5:18pm

    5 ಸ್ಟಾರ್ ಹೋಟೆಲ್‌ನಲ್ಲಿ ಬರೋಬ್ಬರಿ 2 ವರ್ಷ ಇದ್ದ ಆಸಾಮಿ ಕಾಣೆಯಾಗಿದ್ದಾನೆ

    ಪ್ರತಿಷ್ಟಿತ ಫೈವ್ ಸ್ಟಾರ್ ರೋಸೆಟ್ ಹೋಟೆಲ್‌ನ ಆಡಳಿತ ಮಂಡಳಿ ಫುಲ್ ಗಾಬರಿ

    2 ವರ್ಷ 58 ಲಕ್ಷ ರೂಪಾಯಿ ಬಿಲ್‌ಗೆ ಆಸಾಮಿ ಕೊಟ್ಟಿದ್ದ ಚೆಕ್‌ಗಳು ಬೌನ್ಸ್

ನವದೆಹಲಿ: ಹೋಟೆಲ್ ಅಂದ್ರೆ ಅತ್ತೆ, ಮಾವನ ಮನೆ ಅನ್ಕೊಂಡ್ರಾ. ಬೇಕಾದಷ್ಟು ದಿನ ಬಿಟ್ಟಿಯಾಗಿದ್ದು ಹೋಗೋಕೆ ಅನ್ನೋ ಡೈಲಾಗ್‌ ಅನ್ನ ನಾವೆಲ್ಲಾ ಕೇಳಿರ್ತೀವಿ. ಆದರೆ ಇದು ಮಾಮೂಲಿ ಹೋಟೆಲ್‌ನ ಕಥೆ ಅಲ್ಲ. ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಬರೋಬ್ಬರಿ 2 ವರ್ಷ ಇದ್ದ ವ್ಯಕ್ತಿಯೊಬ್ಬ 58 ಲಕ್ಷ ರೂಪಾಯಿ ಬಿಲ್ ಕಟ್ಟದೇ ಹೋಗಿದ್ದಾನೆ. ಈ ಘಟನೆ ಬಹಳ ವಿಚಿತ್ರ ಅನ್ನಿಸಿದ್ರೂ ಇದರಲ್ಲಿ ಗ್ರಾಹಕನ ಜೊತೆಗೆ ಹೋಟೆಲ್ ಸಿಬ್ಬಂದಿಯ ಕೈವಾಡವೂ ಇದೆ. ಹೋಟೆಲ್‌ ಬಿಲ್ ಬಾಕಿಯ ಈ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಇದೆ ನೋಡಿ.

2 ವರ್ಷ ತಂಗಿದ್ದ ಅತಿಥಿಗೆ ಬರೋಬ್ಬರಿ 58 ಲಕ್ಷ ರೂಪಾಯಿ ಬಿಲ್ ಹಾಕಿರೋ ಪ್ರಕರಣ ದೆಹಲಿಯ ಪ್ರತಿಷ್ಟಿತ ಫೈವ್ ಸ್ಟಾರ್ ರೋಸೆಟ್ ಹೋಟೆಲ್‌ನಲ್ಲಿ ಬೆಳಕಿಗೆ ಬಂದಿದೆ. ಅಂಕುಶ್ ದತ್ತಾ ಎಂಬ ವ್ಯಕ್ತಿ ಇದೇ ರೋಸೆಟ್ ಹೋಟೆಲ್‌ನಲ್ಲಿ ಮೇ 2019ರಿಂದ 2021ರ ಜನವರಿವರೆಗೂ ತಂಗಿದ್ದಾರೆ. ಆದ್ರೆ 2 ವರ್ಷವೂ ಒಂದು ರೂಪಾಯಿ ಬಿಲ್ ಅನ್ನು ಕಟ್ಟಿಲ್ಲ ಎಂದು ರೋಸೆಟ್ ಹೋಟೆಲ್‌ ಆಡಳಿತ ಮಂಡಳಿ ಆರೋಪಿಸಿದೆ. ಅಷ್ಟೇ ಅಲ್ಲ 58 ಲಕ್ಷ ರೂಪಾಯಿ ಬಿಲ್ ಬಾಕಿ ಇರೋ ಸಂಬಂಧ FIR ಅನ್ನು ದಾಖಲಿಸಿದೆ.

ಅಂಕುಶ್ ದತ್ತಾ ಅವರ 58 ಲಕ್ಷ ರೂಪಾಯಿ ಬಿಲ್‌ ಬಾಕಿ ಇರೋ ಈ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಕೂಡ ಇದೆ. ಅಂಕುಶ್ ದತ್ತಾ ಅವರು 2 ವರ್ಷ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಇದ್ರೂ ಇವರ ಬಿಲ್ ಬಾಕಿ ಇದೆ ಎಂದು ಹೋಟೆಲ್ ಆಡಳಿತ ಮಂಡಳಿಗೆ ಗೊತ್ತಾಗಿಲ್ಲ. 2 ವರ್ಷದ ಬಳಿಕ ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಂಕುಶ್ ದತ್ತಾ ಅವರು ನೀಡಿದ ಚೆಕ್‌ಗಳು ಬೌನ್ಸ್ ಆಗಿವೆ.

FIR ದಾಖಲಿಸಿರೋ ರೋಸೆಟ್ ಹೋಟೆಲ್‌ನ ಆಡಳಿತ ಮಂಡಳಿ 58 ಲಕ್ಷ ರೂಪಾಯಿ ಬಾಕಿ ಬಿಲ್ ಉಳಿಸಿಕೊಂಡ ಪ್ರಕರಣದಲ್ಲಿ ಹೋಟೆಲ್ ಸಿಬ್ಬಂದಿಯು ಶಾಮೀಲಾಗಿದ್ದಾರೆ ಎಂದು ದೂರಿದೆ. ಹೋಟೆಲ್‌ನಲ್ಲಿ ಕೆಲಸ ಮಾಡುವ ಪ್ರೇಮ್ ಪ್ರಕಾಶ್ ಅವರೇ 2 ವರ್ಷ ಈ ವಿಚಾರವನ್ನು ಮುಚ್ಚಿಟ್ಟಿರೋ ಆರೋಪ ಕೇಳಿ ಬಂದಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಈ ರೋಸೆಟ್ ಹೋಟೆಲ್ ಇದ್ದು, ಪೊಲೀಸರ ತನಿಖೆಯಿಂದ ನಾಪತ್ತೆಯಾಗಿರುವ ಅಂಕುಶ್ ದತ್ತಾ ಪತ್ತೆಯಾದ್ರೆ ಪ್ರಕರಣದ ನಿಜಾಂಶ ಬಯಲಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

5 ಸ್ಟಾರ್‌ ಹೋಟೆಲ್‌ನಲ್ಲಿ 2 ವರ್ಷ ಇದ್ದ ಅತಿಥಿಗೆ ₹58 ಲಕ್ಷ ಬಿಲ್‌ ಹಾಕಿದ್ಮೇಲೆ ನಾಪತ್ತೆ; ಮುಂದೇನಾಯ್ತು?

https://newsfirstlive.com/wp-content/uploads/2023/06/Delhi-5-star-Hotel.jpg

Load More