newsfirstkannada.com

ಇತಿಹಾಸ ಪ್ರಸಿದ್ಧ ಮದಗದ ಕೆರೆಗೆ ಬಂತು ಜೀವಕಳೆ.. ರೈತರ ಮುಖದಲ್ಲಿ ಸಂತಸದ ಕಳೆ

Share :

28-07-2023

    ಭರ್ತಿಯಾದ ಇತಿಹಾಸ ಪ್ರಸಿದ್ಧ ಮದಗದ ಕೆರೆ

    ನೀರಿಲ್ಲದೇ ಬರಿದಾಗಿದ್ದ ಕೆರೆ ಈಗ ನಳನಳಿಸ್ತಿದೆ

    ಮದಗದ ಕೆರೆ 13 ಕೆರೆಗಳಿಗೆ ನೀರು ತುಂಬಿಸುತ್ತೆ

ಇತಿಹಾಸದಲ್ಲಿ ಇದು ಯಾವತ್ತಿಗೂ ಬತ್ತದ ಕೆರೆ. ಸಿನಿಮಾದಲ್ಲೂ ಮಾನ್ಯತೆ ಸಿಕ್ಕ ಜಲರಾಶಿ. ಜಾನಪದ ಹಾಡಿನಲ್ಲೂ ಇದರ ಗುಣಗಾನವಿದೆ. ಆದರೆ, ಈ ಬಾರಿ ಮಳೆ ಕೊರತೆ ಎದುರಾಗಿ ಆತಂಕ ಹುಟ್ಟಿಸಿತ್ತು. ಈಗ ಆ ಆತಂಕವೆಲ್ಲಾ ಮಾಯವಾಗಿದೆ. ಯಾಕಂದ್ರೆ ಮಾಯದಂತ ಮಳೆ ಬಂದಿದೆ. ಮದಗಾದ ಕೆರೆ ಭರ್ತಿ ಆಗಿದೆ. ರೈತರ ಮೊಗ ಮಂದಹಾಸ ಬೀರಿದೆ.

ಕಣ್ಣು ಹಾಸಿದಷ್ಟು ಹಚ್ಚಹಸಿರ ಭೂಮಿ. ಇದೇ ಭೂಮಿಯ ಹುಲ್ಲು ಮೇಯುತ್ತಿರುವ ಹಸುಗಳು. ಇದು ಕಳೆದ 15 ದಿನಗಳ ಹಿಂದಿನ ದೃಶ್ಯ. ಇದು ಯಾವುದೋ ಕೃಷಿಭೂಮಿಯಲ್ಲ. ಕ್ರೀಡಾಂಗಣವಂತು ಅಲ್ವೇ ಅಲ್ಲ. ಇದು ಇತಿಹಾಸ ಪ್ರಸಿದ್ಧ ಮದಗದಕೆರೆ. 2036 ಎಕರೆ ವಿಸ್ತೀರ್ಣ, ಬುಜಬಾಹು ಚಾಚಿದ ಮಿನಿ ಸರೋವರ. 15 ದಿನಗಳ ಬಳಿಕ ಇದೇ ಮದಗದ ಕೆರೆಗೆ ಜಲಾಭಿಷೇಕವಾಗಿದೆ.

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಹೌದು, ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎನ್ನುವ ಜಾನಪದ ಹಾಡು ಯಾರು ತಾನೇ ಕೇಳಿಲ್ಲ ಹೇಳಿ. ಆ ಹಾಡಿಗೆ ಸ್ಫೂರ್ತಿಯೇ ಎಂದಿಗೂ ಬತ್ತದ ಈ ಜಲರಾಶಿ. ಕಳೆದ ವಾರದ ಹಿಂದೆ ನೀರಿಲ್ಲದೇ ಬರಿದಾಗಿದ್ದ ಕೆರೆ ಈಗ ನಳನಳಿಸ್ತಿದೆ.

ಕೆರೆಯಲ್ಲಿ ನೀರಿದ್ರೆ ಸಮುದ್ರದಂತೆ ಭಾಸವಾಗುತ್ತದೆ. ಅದರಲ್ಲೂ ಸುತ್ತಲೂ ಮುಗಿಲೆತ್ತರದ ಬೆಟ್ಟಗುಡ್ಡಗಳು ಕೆರೆಗೆ ಮತ್ತಷ್ಟು ಸೊಬಗು ನೀಡುತ್ತವೆ. ಇಲ್ಲಿನ ಸೌಂದರ್ಯವನ್ನು ಕಂಡು ಹಲವು ಚಲನಚಿತ್ರಗಳ ಹಾಡಿನ ಚಿತ್ರೀಕರಣವೂ ನಡೆದಿದೆ. ಆದ್ರೆ, ಈ ಬಾರಿ ಮಾಯದಂತ ಮಳೆಯೂ ಇಲ್ಲದೆ, ಮಾಮೂಲಿ ಮಳೆಯೂ ಇಲ್ಲದೆ. ಮದಗದ ಕೆರೆ ಸಂಪೂರ್ಣ ಖಾಲಿಯಾಗಿ ಒಣಗಿ ನಿಂತಿತ್ತು. ಈ ಕೆರೆಯ ನೀರನ್ನೇ ನಂಬಿರುವ 36 ಹಳ್ಳಿಗಳು ಸಾಕಷ್ಟು ಸಂಕಷ್ಟ ಎದಿರಿಸುವಂತಾಗಿತ್ತು.

ಮದಗಾದ ಭರ್ತಿಯಾದ್ರೆ 13 ಕೆರೆಗಳಿಗೆ ನೀರು ತುಂಬುತ್ತೆ

ಮದಗದ ಕೆರೆಯ ಜಲಾನಯನ ಪ್ರದೇಶದ ಸಂಪೂರ್ಣ ವಿಸ್ತೀರ್ಣ 336 ಹೆಕ್ಟೇರ್‌ ಅಂದ್ರೆ 2036 ಎಕರೆಯಷ್ಟು ಹರಡಿಕೊಂಡಿದೆ. ಮದಗದ ಕೆರೆಯ ಜಲಾನಯನ ಕಾಲುವೆ ನೀರು ಸರಿ ಸುಮಾರು 16 ಕಿಲೋ ಮೀಟರ್​ಗೂ ಹೆಚ್ಚು ದೂರು ಹರಿಯುತ್ತದೆ. ಒಟ್ಟು 1,500 ಅಡಿ ಕ್ಯೂಸೆಕ್​ನಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.. ಮದಗದ ಕೆರೆ ಸುಮಾರು 10 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತೆ.. ಸುಮಾರು 87 ಅಡಿಗಳಷ್ಟು ಆಳವಿರುವ ಈ ಮದಗದ ಕೆರೆಯನ್ನ ಮದಗದ ಕೆಂಚಮ್ಮನ ಕೆರೆ ಎಂದೂ ಸಹ ಕರೆಯಲಾಗುತ್ತೆ. ಮದಗದ ಕೆರೆ ಭರ್ತಿಯಾದ್ರೆ ಕಡೂರು, ಬೀರೂರು, ಚಿಕ್ಕಂಗಾಲ, ಬುಕ್ಕಸಗರ, ದ್ಯಾವನಕೆರೆ, ಬಾರ್ಕನಕೆರೆ ಸೇರಿದಂತೆ ಇತರ 13 ಕೆರೆಗಳಿಗೆ ನೀರು ತುಂಬಿಸುತ್ತೆ.

ಕಡೂರು ತಾಲೂಕಿನ ರೈತರ ಜೀವನಾಡಿಯಾಗಿರುವ ಐತಿಹಾಸಿಕ ಮದಗದ ಕೆರೆ ಸದ್ಯ ಅಂಚಿಗೆ ತಲುಪಿದೆ.. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನ ಮತ್ತೆ ಈ ಜಲರಾಶಿ ಆಕರ್ಷಿಸುತ್ತಿದೆ.. ಪ್ರಕೃತಿಯ ಸೊಬಗು ಕಣ್ತುಂಬಿಕೊಳ್ಳಲು ನೂರಾರು ಜನ, ಕೆರೆಗೆ ಭೇಟಿ ನೀಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇತಿಹಾಸ ಪ್ರಸಿದ್ಧ ಮದಗದ ಕೆರೆಗೆ ಬಂತು ಜೀವಕಳೆ.. ರೈತರ ಮುಖದಲ್ಲಿ ಸಂತಸದ ಕಳೆ

https://newsfirstlive.com/wp-content/uploads/2023/07/madagada-Lake.jpg

Load More