newsfirstkannada.com

ಧಗಧಗ ಹೊತ್ತಿ ಉರಿದ ಗುಡಿಸಲು.. ಮನೆ ಕಟ್ಟಲು ತಂದಿಟ್ಟಿದ್ದ 1 ಲಕ್ಷ ನಗದು, 3 ಲಕ್ಷ ಬೆಲೆ ಬಾಳುವ‌ ಚಿನ್ನಾಭರಣ ಭಸ್ಮ

Share :

31-10-2023

    ಹೊಸ ಮನೆ ನಿರ್ಮಾಣ ಮಾಡುತ್ತಿರುವಾಗಲೇ ಗುಡಿಸಲಿಗೆ ಬೆಂಕಿ

    ಸುಟ್ಟು ಕರಕಲಾದ 1 ಲಕ್ಷ ನಗದು, 3 ಲಕ್ಷ ಬೆಲೆಯ ಚಿನ್ನಾಭರಣ

    ಮನೆಯಲ್ಲಿದ್ದ ಎಲ್ಲ ವಸ್ತುಗಳು ಭಸ್ಮ, ಕುಟುಂಬಸ್ಥರು ಗ್ರೇಟ್ ಎಸ್ಕೇಪ್

ತುಮಕೂರು: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದ ಮುಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗೊಲ್ಲರಹಟ್ಟಿ ಗ್ರಾಮದ ನಿವಾಸಿ ರಾಜಣ್ಣ ಎಂಬುವವರಿಗೆ ಸೇರಿದ್ದ ಗುಡಿಸಲಿಗೆ ಬೆಂಕಿ. ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಧಗಧಗ ಹೊತ್ತಿರುವ ಪರಿಣಾಮ ಗುಡಿಸಲಿನಲ್ಲಿದ್ದ 1 ಲಕ್ಷ ನಗದು ಹಾಗೂ 3 ಲಕ್ಷ ಬೆಲೆ ಬಾಳುವ‌ ಚಿನ್ನಾಭರಣವೆಲ್ಲ ಸುಟ್ಟು ಕರಕಲಾಗಿದೆ.

ಆಹಾರ ಧಾನ್ಯಗಳು, ಬಟ್ಟೆ ಬರೆ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಹೊರಗೆ ಇದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದವಸ-ಧಾನ್ಯ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಸದಾಗಿ ಮನೆ ಕಟ್ಟುತ್ತಿರುವ ಹಿನ್ನೆಲೆಯಲ್ಲಿ ರಾಜಣ್ಣರ ಕುಟುಂಬ ಮನೆ ಪಕ್ಕದಲ್ಲಿನ ಗುಡಿಸಲ್ಲಿನಲ್ಲಿ ವಾಸವಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಗಧಗ ಹೊತ್ತಿ ಉರಿದ ಗುಡಿಸಲು.. ಮನೆ ಕಟ್ಟಲು ತಂದಿಟ್ಟಿದ್ದ 1 ಲಕ್ಷ ನಗದು, 3 ಲಕ್ಷ ಬೆಲೆ ಬಾಳುವ‌ ಚಿನ್ನಾಭರಣ ಭಸ್ಮ

https://newsfirstlive.com/wp-content/uploads/2023/10/TMK_HOUSE_FIRE.jpg

Load More