newsfirstkannada.com

ಸಿದ್ದರಾಮಯ್ಯ ಸರ್ಕಾರಕ್ಕೆ ಶಾಕ್‌ ಕೊಟ್ಟ ‘ಎಣ್ಣೆ’ಪ್ರಿಯರು; ಆದಾಯದಲ್ಲಿ ಭಾರೀ ಪ್ರಮಾಣದ ಇಳಿಕೆ; ಕಾರಣವೇನು?

Share :

21-08-2023

    ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಮದ್ಯ ಸೇಲ್ಸ್ ದಾಖಲೆಯ ಇಳಿಕೆ

    ಕರ್ನಾಟಕದ ಮದ್ಯ ಮಾರಾಟದ ಪ್ರಮಾಣದಲ್ಲಿ ಭಾರೀ ಇಳಿಮುಖ

    ಆದಾಯಕ್ಕಾಗಿ ಅಬಕಾರಿ ಸುಂಕ ಹೆಚ್ಚಿಸಿದ್ದ ಸಿದ್ದರಾಮಯ್ಯ ಸರ್ಕಾರ

ಬೆಂಗಳೂರು: ಇಷ್ಟು ದಿನ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ಕೊಡುತ್ತಾ ಬಂದಿತ್ತು. ಇದರೀಗ ರಾಜ್ಯದ ಎಣ್ಣೆಪ್ರಿಯರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ​ಸರ್ಕಾರ ಮದ್ಯ ಮಾರಾಟದ ದರ ಏರಿಕೆ ಮಾಡಿದ ಒಂದು ತಿಂಗಳಲ್ಲಿ ಮದ್ಯ ಖರೀದಿ ಪ್ರಮಾಣದಲ್ಲಿ ದಿಢೀರ್ ಇಳಿಕೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದಾಗಿ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿತ್ತು.

ಮದ್ಯದ ದರವನ್ನು ಕಡಿಮೆ ಮಾಡುವಂತೆ ಕೆಲವು ಕಡೆ ಮದ್ಯಪ್ರಿಯರು ಪ್ರತಿಭಟನೆ ಕೂಡ ಮಾಡಿದ್ದರು. ಇದ್ಯಾವುದಕ್ಕೂ ಸರ್ಕಾರ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸರಗೊಂಡ ಮದ್ಯಪ್ರಿಯರು ಮದ್ಯದ ಮೇಲೆ ನಿರಾಸಕ್ತಿ ತೋರಿಸುವ ಮೂಲಕ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಇದರಿಂದಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಭಾರತೀಯ ಮದ್ಯ ಮಾರಾಟ (IML) ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರುತ್ತಿತ್ತು. ಆದರೆ ಈ ಭಾರೀ ಆಗಸ್ಟ್‌ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.

ಮದ್ಯದಿಂದ ಬಂದ ಆದಾಯ ಎಷ್ಟು? 

2023 ಏಪ್ರಿಲ್ 2,308 ಕೋಟಿ
2023 ಮೇ 2,607 ಕೋಟಿ
2023 ಜೂನ್ 3,549 ಕೋಟಿ
2023 ಜುಲೈ 2,980 ಕೋಟಿ
ಆಗಸ್ಟ್​15ರವರೆಗೆ 962 ಕೋಟಿ

ಇಲ್ಲಿದೆ ವರ್ಷವಾರು ಆದಾಯ ವಿವರ 

2022 ಆಗಸ್ಟ್ 25.50 ಲಕ್ಷ ಬಾಕ್ಸ್ ದೇಶಿ ಬ್ರ್ಯಾಂಡ್
2022 ಆಗಸ್ಟ್ 10.34 ಲಕ್ಷ ಬಾಕ್ಸ್ ಬಿಯರ್ ಸೇಲ್​
2023 ಆಗಸ್ಟ್ 21.87 ಲಕ್ಷ ಬಾಕ್ಸ್ ದೇಶಿ ಬ್ರ್ಯಾಂಡ್
2023 ಆಗಸ್ಟ್ 12.52 ಲಕ್ಷ ಬಾಕ್ಸ್ ಬಿಯರ್ ಸೇಲ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಸರ್ಕಾರಕ್ಕೆ ಶಾಕ್‌ ಕೊಟ್ಟ ‘ಎಣ್ಣೆ’ಪ್ರಿಯರು; ಆದಾಯದಲ್ಲಿ ಭಾರೀ ಪ್ರಮಾಣದ ಇಳಿಕೆ; ಕಾರಣವೇನು?

https://newsfirstlive.com/wp-content/uploads/2023/08/drinks.jpg

Load More