newsfirstkannada.com

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ JCB; ಭೀಕರ ಅಪಘಾತದಲ್ಲಿ ಓರ್ವ ಸಾವು, 2 ವರ್ಷದ ಮಗು ಪಾರು

Share :

28-10-2023

    ಬೈಕ್ ಜೊತೆ ಕೆಳಕ್ಕೆ ಬಿದ್ದ ನಿಂಗರಾಜು ಮೇಲೆ ಹರಿದ ಜೆಸಿಬಿ ಚಕ್ರ

    ಬೈಕ್ ಸವಾರನ ಪ್ರಾಣ ಬಲಿ ಪಡೆದ ಜೆಸಿಬಿ ಚಾಲಕ ಸ್ಥಳದಿಂದ ಎಸ್ಕೇಪ್

    ಜೆಸಿಬಿ ಹಾಗೂ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮಂಡ್ಯ: ಜೆಸಿಬಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರೋ ದುರ್ಘಟನೆ ಮಳವಳ್ಳಿ ತಾಲೂಕಿನ ಹೆಚ್. ಬಸಾಪುರ ಗ್ರಾಮದ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, 2 ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಮಳವಳ್ಳಿ ತಾಲೂಕಿನ ಕುಲುಮೆ ದೊಡ್ಡಿ ಗ್ರಾಮದ ನಿಂಗರಾಜು (35) ಸಾವನಪ್ಪಿದ ಮೃತ ದುರ್ದೈವಿ. ನಿಂಗರಾಜು ಎರಡು ವರ್ಷದ ಪುಟ್ಟ ಮಗುವಿನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಜೆಸಿಬಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.

ಜೆಸಿಬಿಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರ ನಿಂಗರಾಜು ಕೆಳಗೆ ಬಿದ್ದಿದ್ದಾರೆ. ಬೈಕ್ ಜೊತೆ ಕೆಳಕ್ಕೆ ಬಿದ್ದ ನಿಂಗರಾಜು ಮೇಲೆ ಜೆಸಿಬಿ ಚಕ್ರ ಹರಿದಿದೆ. ಅಪಘಾತದ ಸಂಭವಿಸಿದ ಸ್ಥಳದಲ್ಲೇ ನಿಂಗರಾಜು ಅಸುನೀಗಿದ್ದಾರೆ. ನಿಂಗರಾಜು ಜೊತೆಗಿದ್ದ 2 ವರ್ಷದ ಪುಟ್ಟ ಮಗು ಅದೃಷ್ಟವಶಾತ್ ಮತ್ತೊಂದು ಕಡೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.

ಅಪಘಾತದ ಬಳಿಕ ಬೈಕ್ ಸವಾರನ ಪ್ರಾಣ ಬಲಿ ಪಡೆದ ಜೆಸಿಬಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದ. ಸ್ಥಳೀಯರು ಜೆಸಿಬಿ ಹಾಗೂ ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ JCB; ಭೀಕರ ಅಪಘಾತದಲ್ಲಿ ಓರ್ವ ಸಾವು, 2 ವರ್ಷದ ಮಗು ಪಾರು

https://newsfirstlive.com/wp-content/uploads/2023/10/death-2023-10-28T170925.808.jpg

Load More