2000ನೇ ಇಸವಿಯಲ್ಲಿ ತನ್ನ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ್ದ
2001ರಲ್ಲಿ ಜೈಲಿನಿಂದ ಎಸ್ಕೇಪ್ ಆಗಿದ್ದ ರಾಮನ್ ಏಂಜೆಲ್ ಅಬ್ರೆಗು
20 ವರ್ಷದ ಬಳಿಕ ಹೊರ ಬಂದ ಕೊಲೆಗಾರನಿಗೆ ಕಾನೂನು ನೆರವಾಗುತ್ತಾ?
ಒಬ್ಬ ಕೊಲೆಗಾರ ಪೊಲೀಸರ ಕೈಯಿಂದ ಅಬ್ಬಬ್ಬಾ ಅಂದ್ರೆ ಎಷ್ಟು ವರ್ಷ ತಪ್ಪಿಸಿಕೊಳ್ಳಬಹುದು. 5 ವರ್ಷ ಅಥವಾ 10 ವರ್ಷ ತಲೆಮರೆಸಿಕೊಂಡು ಓಡಾಡುವುದು ಬಹಳ ಕಷ್ಟ. ಕೊನೆಗೆ ಒಂದಾಲ್ಲ ದಿನ ಸಿಕ್ಕಿ ಬೀಳಲೇಬೇಕು. ಆದರೆ ಅರ್ಜೆಂಟೀನಾದ ಈ ವ್ಯಕ್ತಿ ಬರೋಬ್ಬರಿ 22 ವರ್ಷ ಜೈಲಿನಿಂದ ಎಸ್ಕೇಪ್ ಆಗಿ ಯಾರಿಗೂ ಸಿಗದಂತೆ ಕಾಲ ಕಳೆದಿದ್ದಾನೆ. ಕೊನೆಗೂ ಇವನು ಸಿಕ್ಕಿಬಿದ್ದಿದ್ದು ಹೇಗೆ ಅನ್ನೋದು ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ.
70 ವರ್ಷದ ರಾಮನ್ ಏಂಜೆಲ್ ಅಬ್ರೆಗು 2000ನೇ ಇಸವಿಯಲ್ಲಿ ತನ್ನ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ತಪ್ಪಿಗೆ ಜೈಲು ಶಿಕ್ಷೆಗೂ ಗುರಿಯಾಗಿದ್ದ. ಸೆರೆವಾಸದಲ್ಲಿದ್ದ ರಾಮನ್ ಏಂಜೆಲ್ ಅಬ್ರೆಗು ಕೆಲವೇ ದಿನಗಳಲ್ಲಿ ತಪ್ಪಿಸಿಕೊಂಡು ಹೋಗಿದ್ದ. ಕೊಲೆ ಮಾಡಿದ ಅಪರಾಧಿ ಎಲ್ಲಿದ್ದಾನೆ. ಹೇಗಿದ್ದಾನೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.
ಇದನ್ನೂ ಓದಿ: ಅಯ್ಯೋ.. ನೋಡ ನೋಡುತ್ತಿದ್ದಂತೆ ಹೊಂಡಕ್ಕೆ ಬಿದ್ದ ಕಾರು; ಭೀಕರ ಅಪಘಾತದ ಬಳಿಕ ಆಗಿದ್ದೇ ಆಶ್ಚರ್ಯ!
ಹೆಂಡತಿಯನ್ನು ಕೊಲೆ ಮಾಡಿದ್ದ ರಾಮನ್ ಏಂಜೆಲ್ ಅಬ್ರೆಗು ಜೈಲಿನಿಂದ ಸೀದಾ ಅರ್ಜೆಂಟೀನಾ ಕಾಡಿನಲ್ಲಿ ಅವಿತುಕೊಂಡಿದ್ದಾನೆ. ನಿಮಗೆ ಆಶ್ಚರ್ಯವಾಗಬಹುದು ಒಂದಲ್ಲ, ಎರಡಲ್ಲ 22 ವರ್ಷಗಳ ಕಾಲ ಕಾಡಿನಲ್ಲಿ ವಾಸ ಮಾಡಿದ್ದಾನೆ. ಪೊಲೀಸರು ಇವನನ್ನು ಹುಡುಕಿ, ಹುಡುಕಿ ಸುಸ್ತಾಗಿ ಸುಮ್ಮನಾಗಿದ್ದಾರೆ.
20 ವರ್ಷಕ್ಕೆ ಶಿಕ್ಷೆಯ ಕಾನೂನು ಮುಕ್ತಾಯ
ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ್ದ ರಾಮನ್ ಏಂಜೆಲ್ ಅಬ್ರೆಗು 20 ವರ್ಷ ಶಿಕ್ಷೆಗೆ ಗುರಿಯಾಗಿದ್ದರು. 2001ರಿಂದ 2022ಕ್ಕೆ ಇವರ ಶಿಕ್ಷೆಯ ಅವಧಿ ಕಾನೂನಿನಲ್ಲಿ ಮುಕ್ತಾಯವಾಗಿತ್ತು. ಈ 20 ವರ್ಷದ ಲಾಭ ಮಾಡಿಕೊಂಡ ರಾಮನ್ ಏಂಜೆಲ್ ಅಬ್ರೆಗು ಇದೀಗ ವಿಚಾರಣೆಯ ಕೋರ್ಟ್‌ಗೆ ಹಾಜರಾಗಿದ್ದಾರೆ. ಶಿಕ್ಷೆಯ ಕಾನೂನು ಮುಕ್ತಾಯವಾಗಿರೋದನ್ನ ಕೊಲೆಗಾರನ ಪರ ವಕೀಲರು ವಾದಿಸುತ್ತಿದ್ದಾರೆ. ಶಿಕ್ಷೆ ಪ್ರಕಟಿಸಿ 20 ವರ್ಷಗಳು ಕಳೆದಿರುವುದರಿಂದ ಶಿಕ್ಷೆಯನ್ನು ವಜಾಗೊಳಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಕೋರ್ಟ್ ಕಟಕಟೆಯಲ್ಲಿ ಕೊನೆಗೆ ಯಾವ ತೀರ್ಪು ಹೊರ ಬೀಳುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ