newsfirstkannada.com

ಮಂಗಳೂರಲ್ಲಿ ದುರಂತ.. ಕೊನೆಗೂ ಫಲಿಸದ ಆರೂವರೆ ಗಂಟೆ ರಕ್ಷಣಾ ಕಾರ್ಯ; ಕಾರ್ಮಿಕ ಸಾವು

Share :

Published July 3, 2024 at 8:58pm

Update July 3, 2024 at 8:51pm

  ಬಲ್ಮಠ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದ ಘಟನೆ

  ಫ್ಲೈವುಡ್​ ಮೇಲೆ ಮಣ್ಣು ಕುಸಿದಿದ್ದರಿಂದ ಬಚಾವ್ ಆದ ಓರ್ವ

  ಸತತ ಆರೂವರೆ ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ

ಮಂಗಳೂರಿನ ಬಲ್ಮಠ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದರು. ಮಧ್ಯಾಹ್ನ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಎನ್​ಡಿಆರ್​​ಎಫ್ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?

ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಬಿಹಾರ ಮೂಲದ ಓರ್ವ ಕಾರ್ಮಿಕ ರಾಜ್​ಕುಮಾರ್ ಎಂಬಾತನನ್ನು ಎನ್​ಡಿಆರ್​ಎಫ್ ತಂಡ ರಕ್ಷಿಸಿದೆ. ಫ್ಲೈವುಡ್​ ಮೇಲೆ ಮಣ್ಣು ಕುಸಿದಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಓರ್ವ ಕಾರ್ಮಿಕನನ್ನು ರಕ್ಷಿಸಿ ಸ್ಟ್ರೆಚರ್ ಮೂಲಕ ಮೇಲಕ್ಕೆ ತಂದು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಬಳಿಕ ಆತ ಚೇತರಿಸಿಕೊಳ್ತಿದ್ದಾನೆ.

ಬಳಿಕ ಮತ್ತೋರ್ವ ಕಾರ್ಮಿಕ ಉತ್ತರ ಪ್ರದೇಶ ಮೂಲದ ಚಂದನ್​ ಕುಮಾರ್ ರಕ್ಷಣೆಗೆ NDRF ತಂಡ ಹರಸಾಹಸ ಪಡಬೇಕಾಯಿತು. ಕಾಂಕ್ರಿಟ್ ಗೋಡೆಗೆ ರಂಧ್ರ ತೆಗೆದು ಕಾರ್ಮಿಕನ ಪತ್ತೆ ಹಚ್ಚಿದ ಬಳಿಕ ವೈದ್ಯರ ತಂಡ ಆಕ್ಸಿಜನ್, ಡ್ರಿಪ್ಸ್ ನೀಡಿತು. ಆದ್ರೆ ಕ್ರಮೇಣ ಕಾರ್ಮಿಕನಿಂದ ಸ್ಪಂದನೆ ಕಡಿಮೆಯಾಗುತ್ತಾ ಹೋಗಿದೆ. ಆತನನ್ನ ಹೊರ ತೆಗೆಯಲು ರಕ್ಷಣಾ ತಂಡ ಸುದೀರ್ಘ ಕಾರ್ಯಾಚರಣೆಯನ್ನೇ ನಡೆಸಬೇಕಾಯಿತು. ಇಷ್ಟಾದ್ರೂ ಜೀವಂತವಾಗಿ ಹೊರತೆಗೆಯೋದು ಸಾಧ್ಯವಾಗಲೇ ಇಲ್ಲ.

ಫಲಿಸದ ಸತತ ಕಾರ್ಯಾಚರಣೆ!
ಸತತ ಆರೂವರೆ ಗಂಟೆಯಿಂದ ನಡೆದಿದ್ದ ಕಾರ್ಯಾಚರಣೆ ಫಲಿಸದೆ ಮಣ್ಣಿನಡಿ ಸಿಲುಕಿದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಬಿಹಾರ ಮೂಲದ 30 ವರ್ಷದ ಚಂದನ್ ಸಾವನ್ನಪ್ಪಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಚಂದನ್ ಕುಮಾರ್ ಹೊರತೆಗೆಯಲು ರಾಡ್‌ ಅಡ್ಡಿಯಾಗಿತ್ತು. ರಾಡ್‌ನ ಮಧ್ಯದಲ್ಲಿ ಚಂದನ್‌ ಸಿಲುಕಿದ್ದ. ಕತ್ತಲಾದ ಕಾರಣ ಎಲೋಜಿನ್ ಲೈಟ್ ಹಾಕಿ‌ ಮುಂದುವರೆದಿದ್ದ ಕಾರ್ಯಾಚರಣೆ ನಡೆಸಲಾಗಿತ್ತು. ಸತತ ಆರೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಸಂಜೆ 7.30ರ ಸುಮಾರಿಗೆ ಚಂದನ್ ಅನ್ನು ಹೊರಕ್ಕೆ ತೆಗೆಯಲಾಗಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು? 

ದೂರದ ಊರಿಂದ ದುಡಿಯಲು ಬಂದವರಿಗೆ ಆ ದುಡಿಮೆಯೇ ಕಂಟಕವಾಗಿದೆ. ಒಂದ್ಕಡೆ ಮಳೆ ಹೆಚ್ಚಾದ ಪರಿಣಾಮ ಮಣ್ಣು ಸಡಿಲಗೊಂಡು ಈ ದುರಂತ ಸಂಭವಿಸಿದ್ದು, ಅಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಪಾಲಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಲ್ಲಿ ದುರಂತ.. ಕೊನೆಗೂ ಫಲಿಸದ ಆರೂವರೆ ಗಂಟೆ ರಕ್ಷಣಾ ಕಾರ್ಯ; ಕಾರ್ಮಿಕ ಸಾವು

https://newsfirstlive.com/wp-content/uploads/2024/07/Mangalore-Building-Collapse.jpg

Load More