/newsfirstlive-kannada/media/post_attachments/wp-content/uploads/2024/12/BGL-CHEATING-CASE.jpg)
ಎಲ್ಲರಿಗೂ ದುಡ್ಡು ಮಾಡೋ ಆಸೆ. ಬೇಗ ಬೇಗ ಶ್ರೀಮಂತರಾಗಬೇಕು. ಎಲ್ಲರಂತೆ ಸುಖ ಜೀವನ ಮಾಡಬೇಕು ಅಂದುಕೊಳ್ಳುವವರುಎಲ್ಲೆಲ್ಲಿ ಹಣ ಸಿಗುತ್ತೆ ಅಂತ ಹುಡುಕ್ತಾರೆ. ಹಾಗೆ ಹಣ ಹುಡುಕುತ್ತಾ ಹೋದವರಲ್ಲಿ ಕೆಲವರು ಅಡ್ಡ ದಾರಿ ಹಿಡಿದರೆ, ಮತ್ತೆ ಕೆಲವರು ಶ್ರಮದಿಂದ ಬೆಳೆಯುತ್ತಾರೆ. ಮೇಲೆ ಹೇಳಿದ ಮೊದಲನೇ ಸಾಲಿಗೆ ಸೇರುವ ಮಹಿಳೆಯೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 30 ಸಾವಿರ ಮಹಿಳೆಯರಿಗೆ ವಂಚನೆ ಮಾಡಿ ಪರಾರಿ​ ಆಗಿದ್ದಾಳೆ.
ಇದನ್ನೂ ಓದಿ: ರಾಜ್ಯದ 10 ಜಿಲ್ಲೆಗಳಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; ಪೋಷಕರು ಓದಲೇಬೇಕಾದ ಸ್ಟೋರಿ
ಒಬ್ಬ ಮಹಿಳೆ, ಒಂದು ಮನೆ, ಸಾವಿರಾರು ಮಹಿಳೆಯರು. ಇವತ್ತು ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ಕಂಡು ಬಂದ ಕೆಲವು ದೃಶ್ಯಗಳು ಕಂಡು ಬಂದವು. ಯಾರನ್ನೋ ನಂಬಿ ಹಣ ಹಾಕಿದ ಮಹಿಳೆಯರು ತಮಗೆ ಆಗಿರುವ ಅನ್ಯಾಯವನ್ನು ಹೇಳಿಕೊಳ್ಳುತ್ತಿದ್ದರು
ಸುರೇಖಾ ಎಂಬ ಹೆಸರಿನ ಮಹಿಳೆಯೊಬ್ಬಳು ಬೆಳಗಾವಿ ತಾಲೂಕಿನಾದ್ಯಂತ ಮಹಿಳಾ ಸಂಘಗಳನ್ನ ಮಾಡುವಂತೆ ಮಹಿಳೆಯರಿಗೆ ಪುಸಲಾಯಿಸಿದ್ದಾಳೆ. ಒಬ್ಬೊಬ್ಬರು 4-8 ಮಹಿಳಾ ಸಂಘಗಳನ್ನ ಮಾಡಿ ಹಣ ಕಲೆಕ್ಟ್​ ಮಾಡಿದ್ದಾರೆ. ಸಂಘಗಳನ್ನ ಮಾಡಿದವ್ರಿಗೆ 50 ಪರ್ಸೆಂಟ್​ ಶೇರ್​ ನೀಡೋದಾಗಿ ಆಸೆ ಹುಟ್ಟಿಸಿ. ಈಗ ಇರೋ ಬರೋದನ್ನೆಲ್ಲಾ ಬಾಚಿಕೊಂಡು ಪರಾರಿಯಾಗಿದ್ದಾಳೆ.
/newsfirstlive-kannada/media/post_attachments/wp-content/uploads/2024/12/BGL-CHEATING-CASE-1.jpg)
ಮಕ್ಕಳನ್ನ ಕೈನಲ್ಲಿ ಹಿಡ್ಕೊಂಡವರು, ವಯಸ್ಸಾದವರು, ಎಲ್ಲರೂ ಇಂದು ಸುರೇಖಾ ಮನೆ ಮುಂದೆ ಸೇರಿದ್ದರು. ಮನೆ ಮುಂದೆ ನಿಂತು ನಮಗೆ ನಮ್ಮ ಹಣ ಕೊಡಬೇಕು ಅಂತ ಗಲಾಟೆ ಮಾಡಿದ್ದರು. ಇಷ್ಟೊಂದು ಜನ ಸೇರಿರೋ ಮಾಹಿತಿ ಸಿಕ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಜನರನ್ನ ಚದುರಿಸಿದ್ದಾರೆ. ಮಹಿಳಾ ಸಂಘಗಳನ್ನ ಮಾಡಿರೋ ಮಹಿಳೆಯರಿಂದ ಸೊಸೈಟಿ, ಫೈನಾನ್ಸ್, ಸಂಘಗಳಲ್ಲಿ ಸಾಲ ತೆಗೆಸಿ. ಅವರಿಂದ ಹಣ ಪಡೆದು ನಿಮ್ಮ ಸಾಲ ತೀರಿಸುತ್ತೇನೆ ಅಂದಾಕೆ ಈಗ ಕಾಣದಂತೆ ಮಾಯವಾಗಿದ್ದಾಳೆ ಅಂತ ಹಣ ಹೂಡಿಕೆ ಮಾಡಿದವರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ಕಂಡ ಕನಸು ಈಡೇರೋ ಮುನ್ನವೇ ಕೊನೆಯಾದ IPS ಅಧಿಕಾರಿ; ಈ ಭೀಕರ ಅಪಘಾತ ಹೇಗಾಯ್ತು?
ಈ ಕೇಸಲ್ಲಿ 30 ಸಾವಿರ ಮಹಿಳೆಯರಿಗೆ ಸುರೇಖಾ ಬಣ್ಣ ಬಣ್ಣದ ಮಾತುಗಳಿಂದ ಬೆಣ್ಣೆ ಹಚ್ಚಿ ಹಣ ಪಡೆದುಕೊಂಡು ತಲೆಮರೆಸಿಕೊಂಡು ಹೋಗಿದ್ದಾಳೆ. ಇಷ್ಟೆಲ್ಲಾ ಆದರೂ ಕೂಡಾ ಈ ಮಹಿಳೆಯರು ಪೊಲೀಸರಿಗೆ ದೂರು ಕೊಡದೇ ಈಗ ನ್ಯಾಯ ಬೇಕು ಅಂತ ಸುರೇಖಾ ಮನೆ ಮುಂದೆ ಕುಳಿತಿದ್ದರು. ಸದ್ಯ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಸ್ಥಳಕ್ಕೆ ಬಂದು ಮಹಿಳೆಯರಿಗೆ ಆಕೆಯನ್ನ ಬಂಧಿಸಿ ಹಣ ಕೊಡಿಸೋ ಭರವಸೆ ಕೊಟ್ಟು ಎಲ್ಲರನ್ನೂ ಮನೆಗೆ ಕಳಿಸಿದ್ದಾರೆ.
ಸದ್ಯ ಕಾಕತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸುರೇಖಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅದೇನೇ ಇರಲಿ ಯಾರದ್ದೋ ಮಾತನ್ನ ನಂಬಿ ವ್ಯವಹಾರ ಮಾಡೋ ಮುನ್ನ ಸ್ವಲ್ಪ ಎಚ್ಚರ ಇರಬೇಕು. ಇಲ್ಲವಾದರೆ ಸುರೇಖಾನಂತವರು ಬಹಳಷ್ಟು ಜನ ನಮ್ಮ ನಿಮ್ಮ ಮಧ್ಯೆಯೇ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us