newsfirstkannada.com

ಬರೋಬ್ಬರಿ 200 ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೇ ಹಣ ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್‌; ಆಗಿದ್ದೇನು?

Share :

24-07-2023

    200 ವಿದ್ಯಾರ್ಥಿಗಳ ದುಡ್ಡು ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್

    ಸಹಾಯಕ ಪ್ರಾಧ್ಯಾಪಕಿ ಮೇಲೆ ಮಹಾ ಮೋಸದ ಆರೋಪ

    ಕಾಲೇಜು ಆಡಳಿತ ಮಂಡಳಿ ವಿರುದ್ಧವೂ ದೂರು ದಾಖಲು

ಮೈಸೂರು: ಬರೋಬ್ಬರಿ 200 ವಿದ್ಯಾರ್ಥಿಗಳ ದುಡ್ಡು ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್ ಆದ ಘಟನೆ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ ಮೇಲೆ 25 ಲಕ್ಷ ರೂಪಾಯಿ ಮೋಸ ಮಾಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರೊಫೆಸರ್ ವಿರುದ್ಧ ದೂರು ಕೂಡ ದಾಖಲಾಗಿದೆ.

ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ ಎಂಬುವವರು ವಿದ್ಯಾರ್ಥಿಗಳಿಂದ ಫೀಸ್ ಕಲೆಕ್ಟ್ ಮಾಡಿದ್ದಾರೆ. ಗೂಗಲ್ ಪೇ, ಫೋನ್ ಪೇ ಮೂಲಕ ಬರೋಬ್ಬರಿ 200 ವಿದ್ಯಾರ್ಥಿಗಳು ಹಣ ಕಟ್ಟಿದ್ದಾರೆ. ಈ ಫೀಸ್‌ಗೆ ನಕಲಿ ರಶೀದಿ ನೀಡಿ ಪ್ರೊ. ಹರ್ಷಿತಾ ಯಾಮಾರಿಸಿದ್ದಾರೆ ಎನ್ನಲಾಗಿದೆ.

ಎಟಿಎಂಇ ಕಾಲೇಜಿನ ಈ ವಿದ್ಯಾರ್ಥಿಗಳಿಗೆ ನಾಳೆಯೇ ಎಕ್ಸಾಂ ಇದೆ. ಪರೀಕ್ಷೆ ಹೊಸ್ತಿಲಲ್ಲಿ 25 ಲಕ್ಷ ರೂಪಾಯಿ ಹಣದೊಂದಿಗೆ ಪ್ರೊಫೆಸರ್ ನಾಪತ್ತೆಯಾಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಹರ್ಷಿತಾಗೂ ನಮಗೂ ಸಂಬಂಧವೇ ಇಲ್ಲ. ವಿದ್ಯಾರ್ಥಿಗಳು ಹೊಸದಾಗಿ ಫೀಸ್‌ ಕಟ್ಟಬೇಕು ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಲು ಪರದಾಡುತ್ತಿರುವ ವಿದ್ಯಾರ್ಥಿಗಳು, ಆರೋಪಿ ಪ್ರೊ. ಹರ್ಷಿತಾ, ಎಟಿಎಂಐ ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ. ಮೋಸ ಮಾಡಿರೋ ಲೇಡಿ ಪ್ರೊಫೆಸರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹೋರಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 200 ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೇ ಹಣ ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್‌; ಆಗಿದ್ದೇನು?

https://newsfirstlive.com/wp-content/uploads/2023/07/Mysore-Proffeser.jpg

Load More