ನಾನು ನಾಯಿ ಆಗಬೇಕು ಎಂದು ಆಸೆ ಪಟ್ಟ ಆಸಾಮಿಯ ಸಾಹಸ
ಬರೋಬ್ಬರಿ 16 ಲಕ್ಷ 45 ಸಾವಿರದ 195 ರೂಪಾಯಿ ಖರ್ಚು ಮಾಡಿದ
ಮನುಷ್ಯರೇ ಅಲ್ಲ ನಿಜವಾದ ನಾಯಿಗಳು ಇಲ್ಲಿ ಫುಲ್ ಕನ್ಫ್ಯೂಸ್!
ಟೋಕಿಯೋ: ಜಗತ್ತಿನಲ್ಲಿ ಏನೆಲ್ಲಾ ವಿಚಿತ್ರಗಳು ನಡೆಯುತ್ತೆ ಅಂದ್ರೆ ಊಹಿಸಿಕೊಳ್ಳೋದು ಅಸಾಧ್ಯ. ಗಂಡು, ಹೆಣ್ಣಾಗೋದು, ಹೆಣ್ಣು ಗಂಡಾಗಲು ಕೆಲವರು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಆದ್ರೆ, ಮನುಷ್ಯ ನಾಯಿಯಾಗೋದನ್ನ ನೀವು ಕೇಳಿದ್ದೀರಾ ಚಾನ್ಸೇ ಇಲ್ಲ ಅನ್ಸುತ್ತೆ. ಈ ಮಾತನ್ನು ಜಪಾನಿನ ವ್ಯಕ್ತಿಯೊಬ್ಬ ಸುಳ್ಳಾಗಿಸಿದ್ದಾನೆ. ಬರೋಬ್ಬರಿ 40 ದಿನದ ಪರಿಶ್ರಮದ ಬಳಿಕ ಮನುಷ್ಯನೇ ನಾಯಿರೂಪಕ್ಕೆ ಪರಿವರ್ತನೆಯಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾನೆ. ಪಾರ್ಕ್‌ನಲ್ಲಿ ನಾಯಿ ಜೊತೆ ಹುಡುಗಿಯೊಬ್ಬಳು ನಡೆದುಕೊಂಡು ಬರ್ತಾ ಇದ್ರೆ ಮನುಷ್ಯರೇ ಅಲ್ಲ ನಿಜವಾದ ನಾಯಿಗಳು ಕನ್ಫ್ಯೂಸ್ ಆಗಿವೆ.
ಜಪಾನಿನ ಪ್ರಾಣಿಪ್ರಿಯ ಪಕ್ಕಾ ನಾಯಿಯಾಗಿ ಬದಲಾಗಿದ್ದಾನೆ. ನಾಯಿ ರೂಪದ ಈ ಮನುಷ್ಯ ವಾಕಿಂಗ್ ಮಾಡ್ತಾ ಇದ್ರೆ ಯಾರೊಬ್ಬರಿಗೂ ಅನುಮಾನವೇ ಬರಲ್ಲ. ಹೀಗೆ ನಾಯಿಯಾಗಿ ಬದಲಾಗಲು ಈ ಆಸಾಮಿ ಬರೋಬ್ಬರಿ 20,000 ಡಾಲರ್ ಖರ್ಚು ಮಾಡಿದ್ದಾನೆ. ಅಂದ್ರೆ, ಭಾರತದ ರೂಪಾಯಿ ಮೌಲ್ಯದಲ್ಲಿ 16 ಲಕ್ಷ 45 ಸಾವಿರದ 195 ರೂಪಾಯಿಗಳು. ಸತತ 40 ದಿನಗಳ ಕಾಲಾವಧಿಯಲ್ಲಿ ಜೆಪ್ಪೆಟ್ ಅನ್ನೋ ಜಪಾನ್ ಕಂಪನಿ ಈ ನಾಯಿ ಉಡುಗೆಯನ್ನ ಅನ್ನ ಬಹಳ ಅಚ್ಚುಕಟ್ಟಾಗಿ ತಯಾರಿಸಿದೆ. ಮನುಷ್ಯ ರೂಪದ ವ್ಯಕ್ತಿ ಇದರೊಳಗೆ ಸೇರಿಕೊಂಡ್ರೆ ನಾಯಿ ಅಂತಾನೇ ಕಣ್ಣಿಗೆ ಕಾಣುತ್ತೆ. ಇದಕ್ಕೆ ಟೊಕೋ ಅಂತಾ ಹೆಸರಿಡಲಾಗಿದೆ.
ಈ ನಾಯಿ ಮನುಷ್ಯ ಮೊದಲ ಬಾರಿಗೆ ಎಲ್ಲರ ಮುಂದೆ ಕಾಣಿಸಿಕೊಂಡಿದೆ. ಪಾರ್ಕ್‌ನಲ್ಲಿ ನಾಯಿ ವಾಕಿಂಗ್ ಮಾಡ್ತಿರೋ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಕೆಲವರು ನಾಯಿ ರೂಪದ ಮನುಷ್ಯನ ಫೋಟೋ, ವಿಡಿಯೋ ತೆಗೆದುಕೊಂಡಿದ್ರೆ, ಹತ್ತಿರ ಬಂದ ರಿಯಲ್ ನಾಯಿಗಳು ಒಂದು ಕ್ಷಣ ಕನ್ಫ್ಯೂಸ್‌ಗೆ ಒಳಗಾಗಿವೆ. ನಾನು ನಾಯಿ ಆಗಬೇಕು ಎಂದು ಆಸೆ ಪಡುವ ವ್ಯಕ್ತಿ ಇಂತಹ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ‘I want to be an animal’ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಲಕ್ಷಾಂತರ ಮಂದಿ ಈ ವಿಡಿಯೋ ಆಶ್ಚರ್ಯಗೊಂಡಿದ್ದಾರೆ.
Toco the unidentified Japanese man, who spent ¥2 million (£12,480) on a lifelike costume to fulfil his lifelong fantasy of becoming a #dog finally goes outside relating with other dogs and people. pic.twitter.com/MwobcjFu7p
— Funny News Hub (@Funnynewshub) July 27, 2023