newsfirstkannada.com

ನೈಲ್​ ಕಟ್ಟರ್ ನುಂಗಿದ್ದ ಪುಣ್ಯಾತ್ಮ.. 8 ವರ್ಷದ ಬಳಿಕ ಹೊಟ್ಟೆ ನೋವು ಬಂದಾಗ ಪತ್ತೆ; ಮುಂದೇನಾಯ್ತು?

Share :

19-08-2023

    ಕೈಯಲ್ಲಿದ್ದ ನೈಲ್ ಕಟ್ಟರ್ ಅನ್ನು ನುಂಗಿ ಮರೆತು ಹೋಗಿದ್ದ ಆಸಾಮಿ

    8 ವರ್ಷದಿಂದ ಹೊಟ್ಟೆ ಒಳಗೆ ಏನಿದೆ ಎಂಬುದೇ ಈತನಿಗೆ ಗೊತ್ತಿಲ್ಲ!

    ಸ್ಕ್ಯಾನಿಂಗ್​ ವೇಳೆ ಹೊಟ್ಟೆಯಲ್ಲಿ ಏನೋ ಸಾಧನ ಇರುವುದು ಪತ್ತೆ

ಬೆಂಗಳೂರು: ಎಂಥೆಂಥಾ ವಿಚಿತ್ರ ಮನುಷ್ಯರು ಇರ್ತಾರೆ ಗೊತ್ತಾ.. ವ್ಯಕ್ತಿಯೊಬ್ಬರು 8 ವರ್ಷಗಳ ಹಿಂದೆ ನುಂಗಿದ್ದ ನೈಲ್​ ಕಟ್ಟರ್​ ಅನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಮಣಿಪಾಲ್ ವೈದ್ಯರು ಹೊರ ತೆಗೆದಿದ್ದಾರೆ.

ಹೊಟ್ಟೆ ಸ್ಕ್ಯಾನಿಂಗ್ ವೇಳೆ ಪತ್ತೆಯಾದ ನೈಲ್ ಕಟ್ಟರ್ ಚಿತ್ರ

ಸರ್ಜಾಪುರದ 40 ವರ್ಷದ ನಿವಾಸಿಯೊಬ್ಬರು ಮದ್ಯಪಾನ ಅಮಲಿನಲ್ಲಿ ನೈಲ್ ಕಟ್ಟರ್​ ಅನ್ನು 8 ವರ್ಷಗಳ ಹಿಂದೆ ನುಂಗಿದ್ದರು. ಇದನ್ನು ನುಂಗಿರುವುದೇ ವ್ಯಕ್ತಿ ಮರೆತು ಹೋಗಿದ್ದರು. ಮೊದ ಮೊದಲು ಇದು ಅಷ್ಟಾಗಿ ನೋವು ಕಾಣಿಸಿಕೊಂಡಿಲ್ಲ. ಆದ್ರೆ ಈಗೀಗ ಅದರ ನೋವು ವಿಪರೀತವಾಗಿತ್ತು. ಹೀಗಾಗಿ ಸ್ಥಳೀಯ ಕ್ಲಿನಿಕ್​ಗೆ ದಾಖಲಾಗಿ ತಪಾಸಣೆ ಮಾಡಿಸಿಕೊಂಡಿದ್ದರು. ಆಗ ಸ್ಕ್ಯಾನಿಂಗ್​ ವೇಳೆ ಹೊಟ್ಟೆಯಲ್ಲಿ ಏನೋ ಸಾಧನ ಇರುವುದು ಗೊತ್ತಾಗಿದೆ.

ಇದರಿಂದ ಹೊಟ್ಟೆ ಒಳಗೆ ಏನೋ ಇದೆಯೆಂದು ಹೆಚ್ಚಿನ ಚಿಕಿತ್ಸೆ ಪಡೆಯಲು ವ್ಯಕ್ತಿ ತಕ್ಷಣ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಡಾ.U. ಲೋಹಿತ್ ನೇತೃತ್ವದ ವೈದ್ಯರ ತಂಡ ಲ್ಯಾಪ್ರೋಸ್ಕೋಫಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ನೈಲ್ ಕಟ್ಟರ್ ಅನ್ನು ಹೊರ ತೆಗೆದಿದ್ದಾರೆ. ಸದ್ಯ ಆರೋಗ್ಯವಾಗಿರುವ ವ್ಯಕ್ತಿಯು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೈಲ್​ ಕಟ್ಟರ್ ನುಂಗಿದ್ದ ಪುಣ್ಯಾತ್ಮ.. 8 ವರ್ಷದ ಬಳಿಕ ಹೊಟ್ಟೆ ನೋವು ಬಂದಾಗ ಪತ್ತೆ; ಮುಂದೇನಾಯ್ತು?

https://newsfirstlive.com/wp-content/uploads/2023/08/BNG_NAIL_CUTTER.jpg

Load More