newsfirstkannada.com

ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿಯ ಕೊಲೆ; ಮರ್ಡರ್ ಮಾಡಿದ ಮೆಕ್ಯಾನಿಕ್‌ ಮತ್ತವರ ಗ್ಯಾಂಗ್ ಬಂಧನ

Share :

29-10-2023

    ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ಮೆಕ್ಯಾನಿಕ್‌ನಿಂದ ಬರ್ಬರವಾಗಿ ಹತ್ಯೆ

    ಸತ್ಯನಾರಾಯಣ ಧಮ್ಕಿ ಹಾಕಿದ್ದಕ್ಕೆ ಕುಪಿತಗೊಂಡ ಮೆಕ್ಯಾನಿಕ್‌ ಚೇತನ್

    ಚೇತನ್ ಎಂಬ ಮೆಕ್ಯಾನಿಕ್‌ ಕಲ್ಲೋಡಿ ಎಂಬಲ್ಲಿ ಗ್ಯಾರೇಜ್ ನಡೆಸುತ್ತಿದ್ದ

ಚಿಕ್ಕಬಳ್ಳಾಪುರ: ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಗೌರಿಬಿದನೂರು ತಾಲೂಕಿನ ಚನ್ನಬೈರನಹಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಸತ್ಯನಾರಾಯಣ ಹತ್ಯೆಯಾದ ವ್ಯಕ್ತಿ.

ಚೇತನ್ ಎಂಬ ಮೆಕ್ಯಾನಿಕ್‌ ಕಲ್ಲೋಡಿ ಎಂಬಲ್ಲಿ ಗ್ಯಾರೇಜ್ ನಡೆಸುತ್ತಿದ್ದ. ಈ ಗ್ಯಾರೇಜ್‌ಗೆ ಸತ್ಯನಾರಾಯಣ ಅವರು ಬೈಕ್ ರಿಪೇರಿ ಮಾಡಿಸಿ ಹಣ ಕೊಟ್ಟಿರಲಿಲ್ಲವಂತೆ. ಹಣ ಕೇಳಿದ್ದಕ್ಕೆ ಧಮ್ಕಿ ಹಾಕಿದ್ದ ಸತ್ಯನಾರಾಯಣ ಎನ್ನಲಾಗಿದೆ.

ಸತ್ಯನಾರಾಯಣ ಧಮ್ಕಿ ಹಾಕಿದ್ದಕ್ಕೆ ಕುಪಿತಗೊಂಡ ಮೆಕ್ಯಾನಿಕ್‌ ಚೇತನ್ ಹಾಗೂ ಅವನ ಸ್ನೇಹಿತರು ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಯಲ್ಲಿ ಭಾಗಿಯಾಗಿದ್ದ ಮೆಕ್ಯಾನಿಕ್ ಚೇತನ್, ಜ್ವಾಲೇಂದ್ರ, ಮತ್ತೋರ್ವ ಚೇತನ್ ಹಾಗೂ 17 ವರ್ಷದ ಅಪ್ರಾಪ್ತ ಬಾಲಕನ್ನನ್ನು ಬಂಧಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿಯ ಕೊಲೆ; ಮರ್ಡರ್ ಮಾಡಿದ ಮೆಕ್ಯಾನಿಕ್‌ ಮತ್ತವರ ಗ್ಯಾಂಗ್ ಬಂಧನ

https://newsfirstlive.com/wp-content/uploads/2023/10/Chikkaballapur-Murder.jpg

Load More