newsfirstkannada.com

ಅದೆಷ್ಟು ಕ್ರೂರಿ ಅಮ್ಮ ನೀನು.. ಬಾವಿಗೆ ಬಿದ್ದ ಮೂವರು ಮಕ್ಕಳು ಸಾವು; ತಾಯಿ ಪ್ರಾಣಾಪಾಯದಿಂದ ಪಾರು

Share :

25-08-2023

  15 ದಿನದ ಹೆಣ್ಣು ಮಗು, 6 ವರ್ಷದ ಶ್ರೀಶೈಲ, 4 ವರ್ಷದ ಶ್ರಾವಣಿ

  ಮೂವರು ಮಕ್ಕಳ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಯತ್ನ

  ತೋಟದ ಬಾವಿಯಲ್ಲಿ ಮೂವರು ಮಕ್ಕಳನ್ನು ಸಾಯಿಸಿದ ತಾಯಿ

ಬಾಗಲಕೋಟೆ: 15 ದಿನದ ಹೆಣ್ಣು ಮಗು, 6 ವರ್ಷದ ಶ್ರೀಶೈಲ, 4 ವರ್ಷದ ಶ್ರಾವಣಿ. ಈ ಮೂವರು ಮಕ್ಕಳ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕರುಣಾಜನಕ ಘಟನೆ ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದಲ್ಲಿ ನಡೆದಿದೆ. ಕುಂಬಾರಹಳ್ಳ ಗ್ರಾಮದ ತೋಟದ ಮನೆಯಲ್ಲಿ ಮಹಿಳೆ ಮೂವರು ಮಕ್ಕಳ ಜೊತೆ ಬಾವಿಗೆ ಹಾರಿದ್ದಾಳೆ. ಬಾವಿಗೆ ಬಿದ್ದ ಮೂವರು ಮಕ್ಕಳು ಸಾವನ್ನಪ್ಪಿದ್ರೆ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂವರು ಮಕ್ಕಳ ಜೊತೆ ಬಾವಿಗೆ ಹಾರಿದ ಮಹಿಳೆಯನ್ನು ಯಮನವ್ವ ಗುಡೆಪ್ಪಗೋಳ (28) ಎಂದು ಗುರುತಿಸಲಾಗಿದೆ. ಯಮನವ್ವ ಮನನೊಂದು ಮೂವರು ಮಕ್ಕಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಬಾವಿಯಲ್ಲಿ 15 ದಿನದ ಹೆಣ್ಣು ಶಿಶು, 6 ವರ್ಷದ ಶ್ರೀಶೈಲ, 4 ವರ್ಷದ ಶ್ರಾವಣಿ ಎಂಬ ಪುಟಾಣಿ ಮಕ್ಕಳು ಪ್ರಾಣ ಬಿಟ್ಟಿದ್ದಾರೆ.

ಬಾವಿಯಲ್ಲಿ ಮಕ್ಕಳು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಾರ್ಯಚರಣೆಯ ಮೂಲಕ ಬಾವಿಯಿಂದ ಮಕ್ಕಳ ಶವಗಳನ್ನು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಶ ಸಂಖ, ಸಿಪಿಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದೆಷ್ಟು ಕ್ರೂರಿ ಅಮ್ಮ ನೀನು.. ಬಾವಿಗೆ ಬಿದ್ದ ಮೂವರು ಮಕ್ಕಳು ಸಾವು; ತಾಯಿ ಪ್ರಾಣಾಪಾಯದಿಂದ ಪಾರು

https://newsfirstlive.com/wp-content/uploads/2023/08/Bagalokote-Mother.jpg

Load More