ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ PhD ಮಾಡಿದ ವಿದ್ಯಾರ್ಥಿನಿ
ಮೋದಿ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ
ಮೋದಿ ಬಗ್ಗೆ PhD ಮಾಡಿದ ದೇಶದ ಮೊದಲ ಮುಸ್ಲಿಂ ಮಹಿಳೆ ಇವ್ರು
ವಾರಾಣಸಿ: ಉತ್ತರಪ್ರದೇಶ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ PhD ಮಾಡಿದ್ದು ಇಡೀ ದೇಶದ ಗಮನ ಸೆಳೆದಿದೆ. ಹಲವರ ವಿರೋಧದ ನಡುವೆಯೂ ಈ ಸಂಶೋಧನೆಯನ್ನು ಪೂರ್ಣಗೊಳಿಸಿರುವುದಾಗಿ ಮುಸ್ಲಿಂ ಮಹಿಳೆ ನಜ್ಮಾ ಪರ್ವೀನ್ ಅವರು ತನ್ನ ಅಧ್ಯಯನದ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಜ್ಮಾ ಪರ್ವೀನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ PhD ಮಾಡಿದ ದೇಶದ ಮೊದಲ ಮುಸ್ಲಿಂ ಮಹಿಳೆ ಆಗಿದ್ದಾರೆ. ನರೇಂದ್ರ ಮೋದಿ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ ಇದು ನಜ್ಮಾ ಪರ್ವೀನ್ ಅವರ ಸಂಶೋಧನಾ ವಿಷಯ. 2014ರಲ್ಲಿ PhD ಮಾಡಲು ಆರಂಭಿಸಿದ ಇವರು ಸತತ 8 ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ.
ನಜ್ಮಾ ಪರ್ವೀನ್ ಅವರು ವಾರಾಣಸಿಯ ಲಲ್ಲಾಪೂರ ನಿವಾಸಿ. ಸಾಮಾನ್ಯ ನೇಕಾರ ಕುಟುಂಬದಿಂದ ಬಂದವರಾಗಿದ್ದು, ಬಹಳ ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನ ಕಳೆದುಕೊಂಡಿದ್ದಾರೆ. ವಿಶಾಲ ಭಾರತ ಸಂಸ್ಥಾನದ ಪ್ರೋ. ರಾಜೀವ್ ಶ್ರೀವಾತ್ಸವ ಅವರು ಈಕೆಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ನರೇಂದ್ರ ಮೋದಿ ರಾಜಕೀಯ ನಾಯಕತ್ವ ವಿಷಯದ ಸಂಶೋಧನೆಯಲ್ಲಿ ಪ್ರಮುಖವಾಗಿ ಪ್ರಧಾನಿಯನ್ನು ರಾಜಕೀಯದ ಮೆಗಾಸ್ಟಾರ್ ಎಂದೇ ಬಿಂಬಿಸಲಾಗಿದೆ.
ಈ ಸಂಶೋಧನಾ ಅಧ್ಯಯನದಲ್ಲಿ ಪ್ರಮುಖವಾಗಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಮಾಡೆಲ್ ಆದರು. ಅಲ್ಲಿಂದ ಪ್ರಧಾನ ಮಂತ್ರಿಯಾಗಿ ಹೇಗೆ ಜನಪ್ರಿಯತೆಯನ್ನ ಪಡೆದುಕೊಂಡರು ಅನ್ನೋದರ ಬಗ್ಗೆ ಉಲ್ಲೇಖಿಸಲಾಗಿದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ರಾಜಕೀಯದಲ್ಲೇ ಮೈಲಿಗಲ್ಲು ಸೃಷ್ಟಿಸಿತು. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಯಾವೆಲ್ಲಾ ನಿರ್ಧಾರಗಳನ್ನು ತೆಗೆದುಕೊಂಡರು ಅನ್ನೋ ವಿಷಯಗಳ ಬಗ್ಗೆ ಅಧ್ಯಯನ ಮಾಡಲಾಗಿದೆ.
ನಜ್ಮಾ ಪರ್ವೀನ್ ಅವರು ತಮ್ಮ ಮೋದಿ ಕುರಿತ PhDಗಾಗಿ 20 ಹಿಂದಿ ಪುಸ್ತಕ ಮತ್ತು 79 ಆಂಗ್ಲ ಪುಸ್ತಕಗಳು, 37 ನ್ಯೂಸ್ ಪೇಪರ್ ಮತ್ತು ಮ್ಯಾಗಜೀನ್‌ಗಳನ್ನು ಅಧ್ಯಯನ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಮೋದಿ ಅವರ ಸಹೋದರ ಪಂಕಜ್ ಮತ್ತು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ