newsfirstkannada.com

ಆಸ್ಟ್ರೇಲಿಯಾ ಕಿನಾರೆಯಲ್ಲಿ ‘ನಿಗೂಢ ವಸ್ತು’ ಪತ್ತೆ; ಭಾರತದ ಚಂದ್ರಯಾನ-3 ಮೇಲೆ ಗೂಬೆ ಕೂರಿಸಲು ವಿದೇಶಿಗರ ಪ್ರಯತ್ನ..!

Share :

18-07-2023

    ಹಲವು ಅನುಮಾನಗಳನ್ನು ಸೃಷ್ಟಿಸಿದೆ ವಿಚಿತ್ರ ವಸ್ತು

    ಟ್ವಿಟರ್​ನಲ್ಲಿ ಭಾರತದ ಚಂದ್ರಯಾನ-3 ಬಗ್ಗೆಯೇ ಚರ್ಚೆ

    ‘ತನಿಖೆ ಮಾಡ್ತಿದ್ದೇವೆ’ ಎಂದ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ

ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್​​ ಬೀಚ್​ನಲ್ಲಿ ನಿಗೂಢ ವಸ್ತುವೊಂವು ಪತ್ತೆಯಾಗಿದ್ದು, ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಕಾರಣವಿಷ್ಟೇ, ಜುಲೈ 14 ರಂದು ಇಸ್ರೋ ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಿದೆ. ಇದೀಗ ಅಲ್ಲಿ ಪತ್ತೆಯಾಗಿರುವ ಈ ಅನುಮಾನಾಸ್ಪದ ವಸ್ತುವಿಗೂ, ಚಂದ್ರಯಾನ-3ಗೂ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ.

ಹೌದು, ಆಸ್ಟ್ರೇಲಿಯಾದಲ್ಲಿ ಶಂಕಾಸ್ಪದ ವಸ್ತು ಪತ್ತೆಯಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಭಾರತ ಇತ್ತೀಚೆಗೆ ಚಂದ್ರಯಾನ-3 ಪ್ರಾಜೆಕ್ಟ್​​ ಲಾಂಚ್ ಮಾಡಿದೆ. ದೈತ್ಯ ಪಿಎಸ್​ಎಲ್​ವಿ ರಾಕೆಟ್​ Mark-III ಮೂಲಕ ಚಂದ್ರಯಾನ ನೌಕೆಯನ್ನು ನಭಕ್ಕೆ ಕಳುಹಿಸಿದೆ. ಈ ರಾಕೆಟ್​​ನ ಮೂರನೇ ಹಂತವು ಸಮುದ್ರಕ್ಕೆ ಬಿದ್ದು, ತೇಲಿಕೊಂಡು ಆಸ್ಟ್ರೇಲಿಯಾ ಬೀಚ್​ ಸೇರಿದೆ ಕೆಲವರು ಹೇಳ್ತಿದ್ದಾರೆ.

ಆದರೆ ಈ ಬಗ್ಗೆ ಇಸ್ರೋ ತುಟಿಬಿಚ್ಚಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಫೋಟೋ ಹಾಗೂ ಚರ್ಚೆಗಳ ಬಗ್ಗೆ ಮೌನ ವಹಿಸಿವೆ. ಜೊತೆಗೆ, ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದೆ. ಬೀಚ್​ನಲ್ಲಿ ಪತ್ತೆಯಾಗಿರುವ ನಿಗೂಢ ವಸ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿದೆ. ಈ ಬಗ್ಗೆ ನಾವು ತನಿಖೆ ಆರಂಭಿಸಿದ್ದೇವೆ. ಪತ್ತೆಯಾಗಿರುವ ವಸ್ತು ವಿದೇಶಿ ನಿರ್ಮಿತ ಸ್ಪೇಸ್​ ಲಾಂಚ್​ ವೆಹಿಕಲ್ ಎಂದು ಚರ್ಚೆ ಆಗ್ತಿದೆ. ತನಿಖೆ ಮಾಡಿದ ಮೇಲೆಯೇ ಗೊತ್ತಾಗಲಿದೆ ಎಂದು ಆಸ್ಟ್ರೇಲಿಯಾ ಸ್ಪೇಸ್​ ಏಜೆನ್ಸಿ ತಿಳಿಸಿದೆ.

ವರದಿಗಳ ಪ್ರಕಾರ, ಪತ್ತೆಯಾಗಿರುವ ನಿಗೂಢ ವಸ್ತು ಎರಡು ಮೀಟರ್ ಎತ್ತರ, ಎರಡು ಮೀಟರ್ ಅಗಲ ಇದೆ. ಚಂದ್ರಯಾನ-3 ಉಡವಾಣೆಗೆ ಬಳಸಿದ್ದ ರಾಕೆಟ್​ ಮೂರನೇ ಹಂತದ ರೀತಿಯಲ್ಲಿದೆ. ಲಾಂಚಿಂಗ್ ಬಳಿಕ ಅದು ಸಮುದ್ರಕ್ಕೆ ಬಿದ್ದು ಇಲ್ಲಿಗೆ ತೇಲಿಕೊಂಡು ಬಂದಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಟ್ರೇಲಿಯಾ ಕಿನಾರೆಯಲ್ಲಿ ‘ನಿಗೂಢ ವಸ್ತು’ ಪತ್ತೆ; ಭಾರತದ ಚಂದ್ರಯಾನ-3 ಮೇಲೆ ಗೂಬೆ ಕೂರಿಸಲು ವಿದೇಶಿಗರ ಪ್ರಯತ್ನ..!

https://newsfirstlive.com/wp-content/uploads/2023/07/CHANDRAYANA-5.jpg

Load More