newsfirstkannada.com

ವಿದ್ಯಾರ್ಥಿನಿ ಪ್ರಬುದ್ಧ ಬರ್ಬರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಪೊಲೀಸರಿಗೆ ಸಿಎಂ ಮಹತ್ವದ ಸೂಚನೆ

Share :

Published June 24, 2024 at 10:07pm

  ಪೊಲೀಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷತೆ ಆರೋಪ

  ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಪ್ರಬುದ್ಧ ತಾಯಿ

  ಪ್ರಭುದ್ಧ ತಾಯಿ ಹೇಳಿಕೆಯಿಂದ ಈ ಕೇಸ್​ ಬಗ್ಗೆ ಇನ್ನಷ್ಟು ಅನುಮಾನ

ಬೆಂಗಳೂರು: ಕಳೆದ ಮೇ15 ರಂದು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಬುದ್ಧ ಕೊಲೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಈ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಿ ಮಹತ್ವದ ಸೂಚನೆ ನೀಡಿದ್ದಾರೆ.

ಪ್ರಬುದ್ಧ ಅವರ ಕೊಲೆಗೆ ದಿಗ್ಬ್ರಾಂತರಾಗಿದ್ದ ತಾಯಿ ಸೌಮ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ ಪೊಲೀಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷತೆ, ಸಾಕ್ಷಿ ನಾಶ ಯತ್ನ ನಡೆದಿದೆ. ಸಂತ್ರಸ್ಥ ತಾಯಿಯಾದ ನನಗೂ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲು ಒತ್ತಾಯಿಸಿದ್ದರು.

ಯುವತಿ ಪ್ರಬುದ್ಧ ತಾಯಿಯ ಮನವಿ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಬುದ್ಧ ಆತ್ಮಹತ್ಯೆ ಎಂದು ನಂಬಿಸಲು ಸಖತ್ ಪ್ಲಾನ್.. ಕೊಲೆಯ ಸುಳಿವು ಸಿಕ್ಕಿದ್ದೇ ರೋಚಕ; ಸಾಯಿಸಿದ ಮೇಲೆ ಆಗಿದ್ದೇನು? 

ಪ್ರಬುದ್ಧ ಕೊಲೆ ಬೆಳಕಿಗೆ ಬಂದಿದ್ದು ಹೇಗೆ? 
ಕಳೆದ ಮೇ 15 ಬುಧವಾರ ಬೆಳಗ್ಗೆ ಸೌಮ್ಯಾ ಕೆಲಸಕ್ಕೆ ಹೋಗಿದ್ದರು. ಕಾಲೇಜಿಗೆ ಹೋಗಿದ್ದ ಪ್ರಭುದ್ಧ ಮನೆಗೆ ವಾಪಸ್ ಬಂದಿದ್ಳು. ಈ ವೇಳೆ ಮನೆಯಲ್ಲಿದ್ದ ತಮ್ಮ ಕ್ರಿಕೆಟ್ ಆಡೋದಕ್ಕೆ ಅಂತ ಹೊರಗೆ ಹೋದ. ಸಂಜೆ 7 ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದಿದ್ದ. ಮನೆಗೆ ಬಂದವನು ಡೋರ್ ಬೆಲ್ ಮಾಡಿದ್ದಾನೆ. ನೋಡಿದ್ರೆ ಮನೆ ಒಳಗಿಂದ ಡೋರ್ ಲಾಕ್ ಆಗಿತ್ತು. ನಾಲ್ಕೈದು ಬಾರಿ ಬೆಲ್ ಬಾರಿಸಿದ್ರೂ ಡೋರ್ ಓಪನ್ ಆಗಿಲ್ಲ. ಇದರಿಂದ ಆತಂಕಗೊಂಡು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಭಯಗೊಂಡೇ ಮನೆಗೆ ಆಗಮಿಸಿದ ಸೌಮ್ಯಾ, ಸ್ಥಳೀಯ ನಿವಾಸಿಗಳ ಜತೆಗೂಡಿ ಹಿಂದಿನ ಬಾಗಿಲು ತೆರೆದು ಒಳಪ್ರವೇಶಿಸಿದಾಗ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ಮುದ್ದಿನ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ಳು.

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಾಯಿ ಸೌಮ್ಯಾ ಮೊದಲು ಹೇಳಿದ್ದೇ ಈ ಮಾತು. ಯಾಕಂದ್ರೆ ಸೌಮ್ಯಾ ತನ್ನ ಮನೆಗೆ ಬಂದಾಗ ಮುಂಬಾಗಿಲು ಕ್ಲೋಸ್ ಆಗಿತ್ತು. ಹಿಂಬಾಗಿಲು ಮಾತ್ರ ಓಪನ್ ಆಗಿತ್ತು. ಅಲ್ಲದೆ, ಮನೆಗೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮನೆಯಲ್ಲಿದ್ದ ಮೊಬೈಲ್ ವಾಪಸ್ ಮನೆಗೆ ಬಂದಾಗ ಇರಲಿಲ್ಲ. ಹೀಗಾಗಿ ಇದು ಪಕ್ಕಾ ಕೊಲೆಯೇ ಅನ್ನೋದು ಸೌಮ್ಯರಿಗೆ ಕನ್ಫರ್ಮ್ ಆಗಿತ್ತು. ಫೋನ್ ಮಿಸ್ಸಿಂಗ್ ವಿಚಾರವಾಗಿ ಪ್ರಭುದ್ಧ ತಾಯಿ ಹೇಳಿಕೆಯಿಂದ ಈ ಕೇಸ್​ ಬಗ್ಗೆ ಇನ್ನಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಪ್ರಭುದ್ಧ ತಾಯಿ ಸೌಮ್ಯ ಹೇಳಿಕೆಗೆ ಪುಷ್ಟಿ ಕೊಡುವಂತೆ. ಮನೆಯ ಮಾಲಕಿ ಕೂಡ ಫೋನ್ ನಾಪತ್ತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಪ್ರಭುದ್ಧಳ ಸಾವು ತುಂಬಾ ನಿಗೂಢವಾಗಿದೆ ಎಂದು ಹೇಳೋ ಮೂಲಕ ಬೇರೇನೋ ನಡೆದಿದೆ ಎಂಬ ಆತಂಕ ಹೊರ ಹಾಕಿದ್ರು.

2000 ರೂಪಾಯಿಗಾಗಿ ಪ್ರಭುದ್ಧ ಮತ್ತು ಹುಡುಗನ ಜೊತೆ ಕಿರಿಕ್ ಶುರುವಾಗಿತ್ತು. ಕೊಟ್ಟಿರುವ ಹಣ ಕೇಳ್ದಾಗ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತಂತೆ. 2 ಸಾವಿರ ಕದ್ದಿರೋ ವಿಚಾರವನ್ನ ಯಾರಿಗೂ ಹೇಳದಂತೆ ಹುಡುಗ ಪ್ರಭುದ್ಧ ಕಾಲು ಹಿಡಿದಿದ್ದ. ಬಳಿಕ ಆಕೆಯನ್ನ ಜೋರಾಗಿ ತಳ್ಳಿದ್ದ. ತಳ್ಳಿದ ರಭಸಕ್ಕೆ ಪ್ರಭುದ್ಧ ತಲೆ ಗೋಡೆಗೆ ಬಡೆದಿದೆ. ನಂತರ ಆಕೆಯನ್ನ ಬಾತ್​ರೂಮ್​ಗೆ ಎಳೆದೊಯ್ದಿದ್ದ. ಈ ವೇಳೆ ಪ್ರಭುದ್ಧಾ ಆರೋಪಿ ಮುಖಕ್ಕೆ ಪರಚಿ ಗಾಯ ಮಾಡಿದ್ಳು. ಇದಾದ ಮೇಲೆ ಚಾಕುವಿನಿಂದ ಕೈ ಮತ್ತು ಕತ್ತು ಕೊಯ್ದಿದ್ದ. ಇದ್ರಿಂದ ತೀವ್ರವಾದ ರಕ್ತಸ್ರಾವವಾಗಿ ಪ್ರಭುದ್ಧ ಕೊನೆಯುಸಿರು ಎಳೆದಿದ್ಳು. ಪ್ರಭುದ್ಧಾಳನ್ನ ಕೊಂದು ಅಲ್ಲೇ ಕಾದು ಕೂತಿದ್ದ ಪಾಪಿ ಸಾಕ್ಷಿ ನಾಶ ಮಾಡೋದಕ್ಕೆ ಖತರ್ನಾಕ್ ಪ್ಲಾನ್ ಮಾಡಿದ್ದ. ಪ್ರಬುದ್ಧ ಸತ್ತ ನಂತರ ಮ್ಯಾಟ್ ನಿಂದ ಮನೆಯನ್ನ ಒರೆಸಿದ್ದ. ಬಳಿಕ ಚಾಕು ಮತ್ತು ಮ್ಯಾಟ್ ಎಲ್ಲವನ್ನು ತೆಗೆದುಕೊಂಡು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿನಿ ಪ್ರಬುದ್ಧ ಬರ್ಬರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಪೊಲೀಸರಿಗೆ ಸಿಎಂ ಮಹತ್ವದ ಸೂಚನೆ

https://newsfirstlive.com/wp-content/uploads/2024/05/prabhudda.jpg

Load More