newsfirstkannada.com

ಆ ಮೂವರು ಬಾಯ್ಬಿಟ್ರೆ ದರ್ಶನ್‌ಗೆ ಕುತ್ತು; ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

Share :

Published July 7, 2024 at 8:31pm

Update July 7, 2024 at 8:46pm

  ರೇಣುಕಾ ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಸುಳಿವು, ದಿನಕ್ಕೊಂದು ಟ್ವಿಸ್ಟ್‌

  ‘ಡೆವಿಲ್ ಗ್ಯಾಂಗ್’ ಸದಸ್ಯರೇ ಈಗ ಕೊಲೆ ಪ್ರಕರಣದ ಐ-ವಿಟ್ನೆಸ್‌!

  ಪ್ರಕರಣದ ಸಾಕ್ಷಿ ನಾಶ ಮಾಡಲು ಬಂದಿದ್ದವರೇ ಈಗ ಪ್ರಮುಖ ಸಾಕ್ಷಿ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಾರಿಗೂ ಬಾರದ ಕುಖ್ಯಾತಿ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ಗೆ ಬಂದಿದೆ. ಸ್ಯಾಂಡಲ್‌ವುಡ್ ಸಾರಥಿ ಕೈಗೆ ನರವಧೆಯ ನೆತ್ತರು ಮೆತ್ತಿ ಕೊಂಡಿದೆ. ಒಂದು ಕಮೆಂಟ್‌ಗೆ ಉಸಿರನ್ನೇ ನಿಲ್ಲಿಸಿ ಪರಪ್ಪನ ಅಗ್ರಹಾರದ ಕತ್ತಲ ಕೋಣೆ ಸೇರುವಂತಾಗಿದೆ. ಇದೀಗ ಪ್ರಕರಣ ತನಿಖೆ ಮಾಡ್ತಿರೋ ಪೊಲೀಸರು ದರ್ಶನ್‌ ಮೇಲಿನ ಆರೋಪ ಸಾಬೀತುಪಡಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಆರೋಪಿಗಳನ್ನೇ ಸಾಕ್ಷಿ ಮಾಡಿ ಕೊಲೆ ಪ್ರಕರಣವನ್ನ ಮತ್ತಷ್ಟು ಸ್ಟ್ರಾಂಗ್ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಬೇಲ್​ ಸಿಗುತ್ತಾ? ಇಲ್ವಾ? ನಿವೃತ್ತ ಪೊಲೀಸ್​​​ ಅಧಿಕಾರಿಯಿಂದ ಸ್ಫೋಟಕ ವಿಷ್ಯ ಬಯಲು 

ಕ್ಷಣಕ್ಕೊಂದು ಸುಳಿವು, ದಿನಕ್ಕೊಂದು ಟ್ವಿಸ್ಟ್‌, ಹಲವಾರು ಜನರ ವಿಚಾರಣೆ, ನೂರಾರು ಸಾಕ್ಷ್ಯ ಇದು ರೇಣುಕಾಸ್ವಾಮಿ ಕೊಲೆ ಕೇಸ್‌ನ ತನಿಖೆ. ಪಟ್ಟಣಗೆರೆ ಶೆಡ್‌ನ ರಕ್ತಚರಿತ್ರೆಯ ಬೆನ್ನತ್ತಿರೋ ಬೆಂಗಳೂರು ಪೊಲೀಸರು ಭೀಭತ್ಸ ಕೃತ್ಯದ ಇಂಚಿಂಚನ್ನೂ ಜಾಲಾಡುತ್ತಿರೋ ರೀತಿ. ಡೆವಿಲ್ ಗ್ಯಾಂಗ್‌ನ ಕುಕೃತ್ಯವನ್ನ ಬಯಲಿಗೆಳೆಯಲು ಮಾಡುತ್ತಿರೋ ಎನ್‌ಕ್ವೈರಿ.

‘ಡೆವಿಲ್ ಗ್ಯಾಂಗ್’ ಸದಸ್ಯರೇ ಕೊಲೆ ಪ್ರಕರಣದ ವಿಟ್ನೆಸ್‌
ಮೃತದೇಹ ಎಸೆದಿದ್ದ ಆರೋಪಿಗಳಿಂದ ದರ್ಶನ್‌ಗೆ ಕುತ್ತು

ರೇಣುಕಾಸ್ವಾಮಿ ಮೇಲೆ ಡೆವಿಲ್ ಗ್ಯಾಂಗ್ ಮೃಗೀಯವಾಗಿ ಎರಗಿ ಕೊಂದು ಹಾಕಿದೆ. ನರಬಲಿಯನ್ನ ಪಡೆದು ಜೈಲು ಕಂಬಿ ಹಿಂದೆ ಸೇರಿದೆ. ಇದೀಗ ಪ್ರಕರಣದ ತನಿಖೆ ನಡೆಸುತ್ತಿರೋ ಪೊಲೀಸರು ಕೊಲೆ ಕೇಸಲ್ಲಿ ಸಾಕ್ಷಿ ನಾಶ ಮಾಡಲು ಬಂದವರನ್ನೇ ಸಾಕ್ಷಿಯಾಗಿ ಪರಿಗಣಿಸಲು ಪ್ಲಾನ್ ಮಾಡಿದೆ. ದರ್ಶನ್‌ನಿಂದ ಡೀಲ್ ಪಡೆದು ಸಾಕ್ಷಿ ನಾಶ ಮಾಡಿ ಶರಣಾಗಿದ್ದವರೇ ಹತ್ಯೆಯ ಪ್ರಮುಖ ವಿಟ್ನೆಸ್ ಆಗಲಿದ್ದಾರೆ.

ಡೆವಿಲ್ ಗ್ಯಾಂಗ್‌ ಮೇಲೆ ಬಂದಿರೋ ಕೊಲೆ ಆರೋಪದಲ್ಲಿ ತುಮಕೂರಿನ ಕಾರಾಗೃಹ ಸೇರಿರೋ ಮೂವರು ಆರೋಪಿಗಳೇ ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗೋದು ಕನ್ಫರ್ಮ್ ಆಗಿದೆ.

ಆರೋಪಿಗಳೇ ಸಾಕ್ಷಿ!
ಎ15 ಕಾರ್ತಿಕ್ ಅಲಿಯಾಸ್ ಕಪ್ಪೆ
ಎ 8 ರವಿ
ಎ17 ನಿಖಿಲ್ ನಾಯಕ್

ಕೊಲೆ ಆರೋಪದಲ್ಲಿ ಜೈಲು ಸೇರಿರೋ 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆಯನ್ನ ಕೊಲೆ ಕೇಸ್‌ನ ಪ್ರಮುಖ ಸಾಕ್ಷಿಯನ್ನಾಗಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇನ್ನೂ 8ನೇ ಆರೋಪಿ ರವಿ ಕೂಡ ಪ್ರಮುಖ ಸಾಕ್ಷಿಯಾಗೋದು ಪಕ್ಕಾ ಆಗಿದೆ. ಉಳಿದಂತೆ 17ನೇ ಆರೋಪಿ ನಿಖಿಲ್ ನಾಯಕ್ ಸಹ ದರ್ಶನ್‌ ವಿರುದ್ಧ ಸಾಕ್ಷಿಯಾಗಿ ಕಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ವಿಜಯಲಕ್ಷ್ಮೀ ಹಾಕೋ ತರಹದ ಬಟ್ಟೆ, ಒಡವೆ ಪವಿತ್ರಾ ಗೌಡಗೆ ಬೇಕು; ಆಶಿಕಿ ಡೈರೆಕ್ಟರ್​ನ ಅಚ್ಚರಿಯ ಮಾತು 

ಈ ಮೂವರು ಆರೋಪಿಗಳನ್ನ ತುಮಕೂರಿಗೆ ಶಿಫ್ಟ್ ಮಾಡೋಕು ಕಾರಣವಿದೆ. ಯಾಕಂದ್ರೆ, ಈ ಮೂವರು ರೇಣುಕಾಸ್ವಾಮಿ ಡೆಡ್‌ಬಾಡಿನ ಕಾಮಾಕ್ಷಿಪಾಳ್ಯ ರಾಜಕಾಲುವೆ ಬಳಿ ಎಸೆದಿದ್ದವರು. ಅಲ್ಲದೇ ಇವರನ್ನೇ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ಇವರಿಂದ ಈ ಮೂವರು ಆರೋಪಿಗಳಿಂದ ಹೇಳಿಕೆಯನ್ನ ದಾಖಲಿಸಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಬಿಟ್ಟು ಬೇರೆಡೆ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಹೇಗೆ ಈ ಮೂವರು ಸಾಕ್ಷಿ?
ಸಾಕ್ಷಿ ನಾಶ ಮಾಡಲು ಬಂದಿದ್ದವರೇ ಈಗ ಪ್ರಮುಖ ಸಾಕ್ಷಿ
ರೇಣುಕಾ ಮೃತದೇಹ ಡಿಸ್ಪೋಸ್ ಮಾಡಲು ಬಂದಿದ್ದ ರವಿ
ನಿಖಿಲ್ ನಾಯಕ್, ಕಾರ್ತಿಕ್ ಅಲಿಯಾಸ್ ಕಪ್ಪೆ ಹೋಗಿದ್ರು
ಜೂ.9ರ ರಾತ್ರಿ ಮೃತದೇಹ ರಾಜಕಾಲುವೆ ಬಳಿ ಬಿಸಾಡಿದ್ರು
ಜಡ್ಜ್​​ ಮುಂದೆ CRPC 164ರ ಅಡಿಯಲ್ಲಿ ಹೇಳಿಕೆ ದಾಖಲು
ಕೊಲೆ ಕೇಸ್‌ನಲ್ಲಿ ಇವರೇ ಪ್ರಬಲ ಸಾಕ್ಷಿಯಾಗುವ ಸಾಧ್ಯತೆ

ಡಿ ಗ್ಯಾಂಗ್ ಡೀಲ್ ರಹಸ್ಯ!
ಕೇಶವ್ ಮೂರ್ತಿ, ನಿಖಿಲ್ ನಾಯಕ್, ರವಿ ಸಾಕ್ಷಿ
ತಲಾ 5 ಲಕ್ಷ ಪಡೆದಿದ್ದ ಕೇಶವ್‌ ಮೂರ್ತಿ, ನಿಖಿಲ್
ಮೃತದೇಹ ಸಾಗಿಸಲು ಸಹಾಯ ಮಾಡಿದ್ದ ರವಿ
ಸಾಕ್ಷಿ ನಾಶಕ್ಕೆ ಯತ್ನಿಸಿದ್ದ ಈ ಮೂವರೀಗ ವಿಟ್ನೆಸ್
ಈ ಆರೋಪಿಗಳೇ ಸಾಕ್ಷಿ.. ದರ್ಶನ್‌ಗೆ ಇದು ಸಮಸ್ಯೆ
ಮೂವರು ಆರೋಪಿಗಳಿಂದ ದರ್ಶನ್‌ ವಿರುದ್ಧ ಹೇಳಿಕೆ
ನ್ಯಾಯಾಧೀಶರ ಎದುರೇ 164 ಅಡಿ ಸಾಕ್ಷಿ ಹೇಳಿಕೆ
ದರ್ಶನ್ ಪಾತ್ರ ಸಾಬೀತುಪಡಿಸುವಲ್ಲಿ ಮಹತ್ವದ ಸಾಕ್ಷ್ಯ
ಮೂವರ ಹೇಳಿಕೆಯಿಂದ ದರ್ಶನ್‌ಗೆ ಮತ್ತಷ್ಟು ಸಮಸ್ಯೆ

ಸಾಕ್ಷಿ ನಾಶ ಮಾಡಲು ಹೋದವರೇ ಈಗ ಪ್ರಮುಖ ಸಾಕ್ಷಿಯಾಗಿರೋದು ಕೇಸ್ ಮತ್ತಷ್ಟು ಸ್ಟ್ರಾಂಗ್ ಆಗುವ ಸಾಧ್ಯತೆ ಇದೆ. ಈ ಕೊಲೆ ಪ್ರಕರಣದಲ್ಲಿ ದರ್ಶನ್‌ ಪಾತ್ರ ಸಾಬೀತಾಗೋದು ಈ ಬೆಳವಣಿಗೆಯಿಂದ ಬಹುತೇಕ ಪಕ್ಕಾ ಆದಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಮೂವರು ಬಾಯ್ಬಿಟ್ರೆ ದರ್ಶನ್‌ಗೆ ಕುತ್ತು; ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

https://newsfirstlive.com/wp-content/uploads/2023/12/Darshan-Katera.jpg

Load More