newsfirstkannada.com

ನವ ವಿವಾಹಿತೆ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಲಕ್ಷ, ಲಕ್ಷ ಖರ್ಚು ಮಾಡಿ ಮದ್ವೆ ಮಾಡಿದ ಮೇಲೆ ಏನಾಯ್ತು?

Share :

Published July 5, 2024 at 10:53pm

Update July 5, 2024 at 10:54pm

  ಇನ್ನೂ 22 ವರ್ಷ.. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌

  ಪ್ರತಿ ತಿಂಗಳು 40 ಸಾವಿರ ಸಂಬಳನೂ ತರ್ತಿದ್ದ ಟೆಕ್ಕಿ ಸಾವು

  ಇದ್ದಕ್ಕಿದ್ದ ಹಾಗೆ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದೇಕೆ?

ಬೆಂಗಳೂರು: 22 ವರ್ಷದ ಈಕೆ ಹತ್ತಾರು ಕನಸಿನೊಂದಿಗೆ ವರ್ಷದ ಹಿಂದಷ್ಟೇ ಹಸೆಮಣೆ ಏರಿದ್ದಳು. ಹೆತ್ತವರನ್ನ ಬಿಟ್ಟು ಗೊತ್ತಿಲ್ಲದವನ ಕೈ ಹಿಡಿದಿದ್ದಳು. ಮಗಳನ್ನ ದಡ ಸೇರಿಸಿದ್ವಿ ಅಂತ ಅಪ್ಪ-ಅಮ್ಮ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಎಲ್ಲವೂ ಸರಿ ಆಯ್ತು ಅನ್ನೋ ಅಷ್ಟ್ರಲ್ಲಿ ಮದುವೆಯಾಗಿದ್ದ ಮಗಳು ಮಸಣ ಸೇರಿ ಬಿಟ್ಟಿದ್ದಾಳೆ.

ಇದನ್ನೂ ಓದಿ: ಉಲ್ಟಾ ಹೊಡೆಯೋ ಚಾನ್ಸೇ ಇಲ್ಲ.. ದರ್ಶನ್ ಗ್ಯಾಂಗ್‌ಗೆ ಬಿಗ್‌ ಶಾಕ್ ಕೊಟ್ಟ ಹೊಸ ಸಾಕ್ಷ್ಯಗಳು; ಸ್ಫೋಟಕ ಮಾಹಿತಿ! 

ಇನ್ನೂ 22 ವರ್ಷ.. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ವರ್ಷದ ಹಿಂದಷ್ಟೇ ನೂರಾರು ಕನಸುಗಳೊಂದಿಗೆ ಸುನೀಲ್ ಕೈ ಹಿಡಿದಿದ್ದ ಈಕೆ, ತಿಂಗಳಿಗೆ 40 ಸಾವಿರ ಸಂಬಳನೂ ತರ್ತಿದ್ದಳು. 5ಲಕ್ಷ ಹಣ, 12 ತೊಲ ಬಂಗಾರ ಕೊಟ್ಟು ದಾಮ್​ ಧೂಮ್​ ಅಂತ ಪೋಷಕರು ಮದ್ವೆ ಮಾಡಿಕೊಟ್ಟಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮಗಳನ್ನ ಕಳೆದುಕೊಂಡ ಹೆತ್ತವರಿಗೆ ದಿಕ್ಕೇ ತೋಚದಂತಾಗಿದೆ.

ಇತ್ತ ಮಗಳ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಕೊಂಡಿದ್ದ ಅಪ್ಪ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆರೋಪಿಸಿದ್ದಾರೆ. ತಿನ್ನೋ ಒಂದೊಂದು ಅಗಳಿಗೂ ಬಾಯಿಗೆ ಬಂದ ಹಾಗೆ ಮಾತಾಡ್ತಾ ಇದ್ರಂತೆ ಸಾರ್​​.. ತುಂಬ ಕಷ್ಟ ಆಗ್ತಿದೆ ಇರೋಕ್​ ಆಗ್ತಿಲ್ಲ ಅಂದಿದ್ದಳು. ಇದ್ದ ಅಕ್ಕನನ್ನ ಕಳ್ಕೊಂಡ್​ ಬಿಟ್ವಿ ಅಂತ ತಂಗಿ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇದನ್ನೂ ಓದಿ: ವಿಷಕಾರಿ ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಯುವಕ ಹಾವನ್ನೇ ಕಚ್ಚಿದ.. ಆಮೇಲೆ ಏನಾಯ್ತು ಗೊತ್ತಾ? 

ಗಂಗಮ್ಮನ ಗುಡಿ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಪೂಜಾ ಸಾವಿಗೆ ಗಂಡ ಹಾಗೂ ಕುಟುಂಬಸ್ಥರು ಕಾರಣ ಅಂತ ಆರೋಪಿಸಿ ಪೋಷಕರು ಗಂಗಮ್ಮನಗುಡಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನವ ವಿವಾಹಿತೆ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಲಕ್ಷ, ಲಕ್ಷ ಖರ್ಚು ಮಾಡಿ ಮದ್ವೆ ಮಾಡಿದ ಮೇಲೆ ಏನಾಯ್ತು?

https://newsfirstlive.com/wp-content/uploads/2024/07/Bangalore-lady-Death-1.jpg

Load More