newsfirstkannada.com

ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಪೊಲೀಸರ ಮುಂದೆ ದರ್ಶನ್​ ಹೆಸ್ರು ಮೊದಲು ಬಾಯ್ಬಿಟ್ಟಿದ್ದು ಯಾರು?

Share :

Published July 2, 2024 at 8:55pm

Update July 2, 2024 at 8:56pm

  ಸರೆಂಡರ್‌ ಆದವರು ಗೊತ್ತಿಲ್ಲ ಅಂದ್ರು, ಆಮೇಲೆ ಹೇಳಿದ್ದೇನು?

  ಪೊಲೀಸರ ಮುಂದೆ ನಡೆದಿತ್ತು ಆರು ಮಂದಿಯ ಹೈಡ್ರಾಮಾ

  ಮಧ್ಯರಾತ್ರಿ 1 ಗಂಟೆಗೆ ಇಬ್ಬರ ಹೆಸರು ಬಾಯ್ಬಿಟ್ಟ ಆರೋಪಿಗಳು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕಳೆದಂತೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಕೇಸಲ್ಲಿ 17 ಜನರೇನೋ ಜೈಲು ಸೇರಿದ್ದಾರೆ. ಆದರೆ ಈ ಕೇಸ್​ನ ತನಿಖೆಯನ್ನು ಹಗಲು ರಾತ್ರಿ ಅನ್ನದೇ ತನಿಖೆ ನಡೆಸ್ತಿರೋ ಪೊಲೀಸರು ಇನ್ನೇನು ಚಾರ್ಜ್​ಶೀಟ್​ ಸಲ್ಲಿಕೆಗೂ ಮುಂದಾಗಿದ್ದಾರೆ. ಇದರ ನಡುವೆಯೇ ದರ್ಶನ್​ ಹೆಸರು ಈ ಕೇಸಲ್ಲಿ ಹೊರಬಂದಿದ್ದು ಹೇಗೆ ಅನ್ನೋ ರೋಚಕ ಕಹಾನಿ ಬಯಲಾಗಿದೆ.

ಇದನ್ನೂ ಓದಿ: ಪವಿತ್ರಾ ಗೌಡ ಬೆನ್ನಲ್ಲೇ A1 ಆಪ್ತೆಯನ್ನು ಭೇಟಿಯಾದ ದರ್ಶನ್; ಕಾರಣವೇನು? ಯಾರಿವರು? 

ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಹೊರ ಬಂದಿದ್ದೇ ರೋಚಕ. ಈ ಕೇಸ್​ನಲ್ಲಿ ಮಾಸ್ಟರ್​ ಮೈಂಡೇ ದರ್ಶನ್​ ಎನ್ನಲಾಗ್ತಿದ್ದು, ಈ ಡೈರೆಕ್ಟರ್​ ಸೃಷ್ಟಿಸಿದ್ದ ಪಾತ್ರಗಳೇ ಇವರಿಗೆ ಮುಳುವಾಗಿತ್ತು. ಇದ್ರಿಂದ ದರ್ಶನ್​ ಜೈಲಿಗೂ ಹೋಗಬೇಕಾಗಿದೆ.

ಜೂನ್ 11ನೇ ತಾರೀಖು ದರ್ಶನ್​ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಬಂಧನಕ್ಕೂ 10 ಗಂಟೆಗಳ ಮುನ್ನ ನಡೆದಿದ್ದೇನು? ದರ್ಶನ್​ ಹೆಸರು ಕೇಸಲ್ಲಿ ಹೊರ ಬಂದಿದ್ದು ಹೇಗೆ? ಅನಾಥ ಶವಕ್ಕೆ ನಾವೇ ಕಾರಣಕರ್ತರು ಅಂತ ಬಂದವರು ಮಾಡಿದ ಯಡವಟ್ಟೇನು? ಅನ್ನೋದೇ ಇಂಟ್ರೆಸ್ಟಿಂಗ್​.

ಇದನ್ನೂ ಓದಿ: ಕೊನೆಗೂ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಮದುವೆ ಫಿಕ್ಸ್​; ಭಾವಿ ಸೊಸೆ ಬಗ್ಗೆ ಗುಟ್ಟು ಬಿಚ್ಚಿಟ್ಟ ಅತ್ತೆ 

ಮೊದಲು ಗೊತ್ತಿಲ್ಲ ಅಂದ್ರು, ಆಮೇಲೆ ಅವರೇ ಹೇಳಿದ್ದು ಅಂದ್ರು
ಪೊಲೀಸರ ಮುಂದೆ ನಡೆದಿತ್ತು ಆರು ಮಂದಿಯ ಡ್ರಾಮಾ..!
ಕೊಲೆಯ ಮಾಸ್ಟರ್ ಮೈಂಡ್ ಹೆಸರು ಬಾಯಿ ಬಿಡಿಸೋದಕ್ಕೆ ಕಾಮಾಕ್ಷಿಪಾಳ್ಯ ಪೊಲೀಸ್ರಿಗೆ ಬೇಕಾಗಿತ್ತು ಸರಿ ಸುಮಾರು ಹತ್ತು ಗಂಟೆ ಸಮಯ. ರೇಣುಕಾಸ್ವಾಮಿನ ಹಂತಕ‌ ಪಡೆ ಕೊಲೆ ಮಾಡಿದ್ದು ಶನಿವಾರ. ಬಳಿಕ ಸೋಮವಾರ ಕೊಲೆ ಮಾಡಿದ್ದು ನಾವೇ ಅಂತ ಕಾರ್ತಿಕ್, ನಿಖಿಲ್, ಕೇಶವ ಮೂರ್ತಿ ಹಾಗೂ ರಾಘವೇಂದ್ರ ಸರೆಂಡರ್​ ಆಗಿದ್ದಾರೆ. ಇದ್ಯಾಕೋ ವಿಚಿತ್ರ ಅನ್ನಿಸ್ತಿದೆ ಅಂತ ಸರೆಂಡರ್​ ಆದವರಿಗೇ ಪೊಲೀಸರು ತಮ್ಮ ಭಾಷೆಯಲ್ಲಿ ಎನ್​ಕ್ವೈರಿ ಮಾಡ್ತಾರೆ. ಆಗ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅವರು ಪ್ರದೋಶ್ ಹಾಗೂ ವಿನಯ್ ಹೆಸ್ರನ್ನ ಬಾಯ್ಬಿಡ್ತಾರೆ.

ನೆಕ್ಸ್ಟ್​​​ ಸ್ಟೇಷನ್​ಗೆ ಪ್ರದೋಶ್ ಹಾಗೂ ವಿನಯ್ ಎಂಟ್ರಿ. ಮೊದಲಿಗೆ ಕಾರ್ತಿಕ್, ನಿಖಿಲ್, ಕೇಶವ ಮೂರ್ತಿ ಹಾಗೂ ರಾಘವೇಂದ್ರ ಯಾರೂ ಅಂತಾನೇ ಗೊತ್ತಿಲ್ಲ ಅನ್ನೋ ಐನಾತಿಗಳು ಸೈಲೆಂಟ್​ ಆಗೇ ಇರ್ತಾರೆ. ಇವರ ಬ್ಯಾಗ್ರೌಂಡ್​ ಕೂಡ ಹೇಳಿದ್ದಾರೆ. ಆಮೇಲೆ ಈ ಕೇಸ್​ ಚಿಕ್ಕ ಕೇಸಲ್ಲ ಅಂತ ಪೊಲೀಸರಿಗೆ ಗೊತ್ತಾಗುತ್ತೆ, ವಿಚಾರಣೆ ತೀವ್ರಗೊಳಿಸ್ತಾರೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳ್ತಾರೆ. ಎಲ್ಲೂ ದರ್ಶನ್​ ಹೆಸರು ಬಾಯ್ಬಿಡದ ಪ್ರದೂಷ್​ ಮತ್ತು ವಿನಯ್​ ಬೆಳಗ್ಗೆ ಆಗ್ತಿದ್ದಂತೆ ಪವಿತ್ರಾಗೌಡ ಹೆಸರನ್ನ ಹೇಳ್ತಾರೆ. ಪವಿತ್ರಾ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ ದರ್ಶನ್ ಜೊತೆ ಪವಿತ್ರಾಗೌಡ ಲಿಂಕ್ ಪತ್ತೆಯಾಗುತ್ತೆ. ಚಾಟಿಂಗ್ಸ್, ಕಾಲ್ ಡಿಟೇಲ್ಸ್ ಮೂಲಕ ಕೊಲೆ ಕೇಸ್​ ಕನ್ಫರ್ಮ್​ ಆಗುತ್ತೆ. ಕೂಡ್ಲೇ ಕಮೀಷನರ್‌ಗೆ ಡಿಸಿಪಿ ಗಿರೀಶ್ ವಿಷಯ ಮುಟ್ಟಿಸಿದ್ದರು. ಪ್ರಕರಣದ ಗಂಭೀರ ಅರಿತ ಕಮೀಷನರ್ ರಿಂದ ದರ್ಶನ್ ಬಂಧನಕ್ಕೆ‌‌ ಸೂಚಿಸಿದ್ದಾರೆ.

ಏನೇ ತಪ್ಪು ಮಾಡಿದ್ರೂ ಹೋಗಿ ಸರೆಂಡರ್​ ಆಗ್ಬಿಟ್ರೆ ಕೇಸ್​ ಮುಚ್ಚೋಗುತ್ತೆ ಅಂತ ಅಂದ್ಕೊಂಡಿದ್ದ ದರ್ಶನ್​ ಅಂಡ್​ ಟೀಂ ರಾತ್ರಿ ತೋಡಿದ ಹಳ್ಳದಲ್ಲಿ ಬೆಳಗ್ಗೆ ಬಿದ್ದಂತೆ ಈಗ ಜೈಲು ಸೇರಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ಮಾಡಿದವರು ಜೈಲಲ್ಲೇ ಕೊಳಿಯಲಿ ಅಂತ ಆತನ ಮನೆಯವರು ಹೇಳ್ತಾ ಇದ್ರೆ, ಇತ್ತ ದರ್ಶನ್​ ಅಭಿಮಾನಿಗಳು ಆದಷ್ಟು ಬೇಗ ದರ್ಶನ್ ಹೊರಗೆ ಬರಲಿ ಅಂತ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಪೊಲೀಸರ ಮುಂದೆ ದರ್ಶನ್​ ಹೆಸ್ರು ಮೊದಲು ಬಾಯ್ಬಿಟ್ಟಿದ್ದು ಯಾರು?

https://newsfirstlive.com/wp-content/uploads/2024/06/DARSHAN-18.jpg

Load More