newsfirstkannada.com

ಗಂಡನ ಮನೆಯಿಂದ ತವರಿಗೆ ಬಂದ ಮಹಿಳೆ ಸಾವು.. ಮದುವೆಯಾದ ವರ್ಷಕ್ಕೆ ದುರಂತ ಅಂತ್ಯ; ಕಾರಣವೇನು?

Share :

Published August 25, 2024 at 2:57pm

    ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ ಸಾವಿಗೆ ಶರಣು

    ತವರಿನಲ್ಲಿ ಪತ್ನಿ ಸಾವನ್ನಪ್ಪುತ್ತಿದ್ದಂತೆ ಗಂಡನ ಮನೆಯವರು ಎಸ್ಕೇಪ್‌!

    ಪತಿಯ ಮನೆ ಎದುರೇ ಅಂತ್ಯ ಸಂಸ್ಕಾರಕ್ಕೆ ಮುಂದಾದ ನೊಂದ ಹೆತ್ತವರು

ಕೋಲಾರ: ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ. 24 ವರ್ಷದ ಮಾನಸ ಸಾವಿಗೆ ಶರಣಾಗಿರುವ ನವವಿವಾಹಿತೆ.

ಮಾನಸಳನ್ನು ಕೋಲಾರ ತಾಲ್ಲೂಕು ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್ ಗೌಡ ಎಂಬುವರೊಂದಿಗೆ ಮದುವೆ ಮಾಡಲಾಗಿತ್ತು. ಉಲ್ಲಾಸ್ ಗೌಡ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಮಾನಸ ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಮಾನಸ ನಿನ್ನೆ ರಾತ್ರಿ ಡೆತ್ ನೋಟ್‌ ಬರೆದು ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: KAS ಪರೀಕ್ಷೆ ಬಗ್ಗೆ ಬಗೆಹರಿಯದ ಗೊಂದಲ; ಇವತ್ತು ಬೆಳಗ್ಗೆ ಮತ್ತೊಂದು ಬೆಳವಣಿಗೆ 

ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ತವರು ‌ಮನೆಗೆ ಬಂದಿದ್ದ ಮಾನಸ ಅವರು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಾವಿನ ನಂತರ ಉಲ್ಲಾಸ್ ಗೌಡ ಮನೆಯವರು ನಾಪತ್ತೆಯಾಗಿದ್ದಾರೆ. ಉಲ್ಲಾಸ್ ಕುಟುಂಬಸ್ಥರ ವಿರುದ್ಧ ಮಾನಸ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪತಿಯ ಮನೆ ಎದುರೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಪೊಲೀಸರು ಹಾಗೂ ಮಾನಸ ಸಂಬಂಧಿಕರ ಮಧ್ಯೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ನಟ ದರ್ಶನ್ ಕೇಸ್​​ಗೆ ಮತ್ತೊಂದು ಟ್ವಿಸ್ಟ್; ತನಿಖಾಧಿಕಾರಿಗಳ ಕೈಸೇರಿದ CSFL ರಿಪೋರ್ಟ್..! 

ಉಲ್ಲಾಸ್ ಗೌಡ ಮತ್ತು ಕುಟುಂಬಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದರು. ಸ್ಥಳದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೋಲಾರದ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆ ಮುಂದೆ ಶವವನ್ನಿಟ್ಟು ಮಾನಸ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನ ಮನೆಯಿಂದ ತವರಿಗೆ ಬಂದ ಮಹಿಳೆ ಸಾವು.. ಮದುವೆಯಾದ ವರ್ಷಕ್ಕೆ ದುರಂತ ಅಂತ್ಯ; ಕಾರಣವೇನು?

https://newsfirstlive.com/wp-content/uploads/2024/08/Kolar-Wife-Death-2.jpg

Load More