newsfirstkannada.com

VIDEO: ತಾಯಿ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಯಾರೂ ಇಲ್ಲ.. ಕಲುಷಿತ ನೀರು ಕುಡಿದ ಕವಾಡಿಗರಹಟ್ಟಿಯಲ್ಲಿ ಕರುಣಾಜನಕ ಕಥೆ

Share :

05-08-2023

    ಕಲುಷಿತ ನೀರು ಕುಡಿದು ಅಸ್ವಸ್ಥರಾದ ತಾಯಿ ಕೊನೆಯುಸಿರು

    ಒಂದೇ ಮನೆಯ 11 ಜನರಲ್ಲಿ 10 ಮಂದಿ ಅಸ್ವಸ್ಥರಾದ ಘಟನೆ

    ಅಸ್ವಸ್ಥರಾದ 150ಕ್ಕೂ ಹೆಚ್ಚು ಜನ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ

ಚಿತ್ರದುರ್ಗ: ಕಲುಷಿತ ನೀರು ಕುಡಿದು ಅಸ್ವಸ್ಥರಾದ ಕವಾಡಿಗರಹಟ್ಟಿಯ ನೂರಾರು ಜನ ಇನ್ನೂ ಚೇತರಿಸಿಕೊಂಡಿಲ್ಲ. ಅಸ್ವಸ್ಥರಾದ 157 ಜನ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ನಾಲ್ವರ ಸ್ಥಿತಿ ಇಂದಿಗೂ ಗಂಭೀರವಾಗಿದೆ ಎನ್ನಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಸ್ವಸ್ಥರಾದವರೆಲ್ಲಾ ಗುಣಮುಖರಾಗಲಿ ಅನ್ನೋ ಪ್ರಯತ್ನದ ಮಧ್ಯೆ ಕರುಣಾಜನಕ ಕಥೆಯೊಂದು ಮನಕಲಕುವಂತೆ ಮಾಡಿದೆ.

ನಿನ್ನೆ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ಪಾರ್ವತಮ್ಮ ಸಾವನ್ನಪ್ಪಿದ್ದರು. ಇಂದು ಪೋಸ್ಟ್ ಮಾರ್ಟಮ್‌ ಕೂಡ ಮುಗಿದಿದ್ದು, ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಬೇಕಿದೆ. ಆದ್ರೆ, ದುರಂತ ಏನಂದ್ರೆ ಪಾರ್ವತಮ್ಮ ಅವರ ಮನೆಯಲ್ಲಿರುವ 11 ಜನರಲ್ಲಿ 10 ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಪಾರ್ವತಮ್ಮನವರ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಯಾರೂ ಇಲ್ಲದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಕಲುಷಿತ ನೀರು ಪ್ರಕರಣಕ್ಕೆ ಟ್ವಿಸ್ಟ್​; ಅಂತರ್ಜಾತಿ Love storyಗೆ ಲಿಂಕ್ ಪಡೆದುಕೊಂಡ ಕೇಸ್..!

ಪಾರ್ವತಮ್ಮನವರ ಅಂತ್ಯ ಸಂಸ್ಕಾರಕ್ಕೆ ಅವರ ಮಗಳು ಕಣಮಕ್ಕ, ಸಂಬಂಧಿಕರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಕುಟುಂಬದ ಸದಸ್ಯರನ್ನು ಮನೆಗೆ ಕಳಿಸಿ ಎಂದು ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆಸ್ಪತ್ರೆಯಿಂದ ಕುಟುಂಬಸ್ಥರು ಬಂದ ಮೇಲೆಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೊನೆಗೆ ಪಾರ್ವತಮ್ಮ ಕುಟುಂಬಸ್ಥರನ್ನು ಮನೆಗೆ ಕಳಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಾಯಿ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಯಾರೂ ಇಲ್ಲ.. ಕಲುಷಿತ ನೀರು ಕುಡಿದ ಕವಾಡಿಗರಹಟ್ಟಿಯಲ್ಲಿ ಕರುಣಾಜನಕ ಕಥೆ

https://newsfirstlive.com/wp-content/uploads/2023/08/Chitradurga-Water-Death.jpg

Load More