48 ಗಂಟೆಯಲ್ಲಿ 300 ಬಾರಿ ಕರೆ ಮಾಡಿ ಟಾರ್ಚರ್ ಕೊಟ್ಟ
ಪ್ರತಿ ಬಾರಿ ಕರೆ ಮಾಡಿದಾಗಲೂ ಆತನಿಂದ ಅದೇ ಮಾತು
ಲೇಡಿ ಪೊಲೀಸ್ ಕೆಣಕಿದ್ರೆ ಸುಮ್ನೆ ಬಿಡ್ತಾರಾ? ಏನಾಯ್ತು?
ಎರ್ನಾಕುಲಂ: ಒಂದಲ್ಲ, ಎರಡು, ಮೂರು ಬಾರಿ ಕರೆ ಮಾಡಿದ್ರೆ ಯಾರಿಗಾದ್ರೂ ಕೋಪ ಬಂದೇ ಬರುತ್ತೆ. ಅದೇ 48 ಗಂಟೆಯಲ್ಲಿ 300 ಬಾರಿ ಕಾಲ್ ಮಾಡಿದ್ರೆ ಏನಾಗುತ್ತೆ ಯೋಚ್ನೆ ಮಾಡಿ. ಕೇರಳದಲ್ಲಿ ಕಿಡಿಗೇಡಿಯೊಬ್ಬ 48 ಗಂಟೆಯಲ್ಲಿ ಬರೋಬ್ಬರಿ 300 ಬಾರಿ ಕರೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಈ ಭೂಪ ಕರೆ ಮಾಡಿರೋದು ಯಾರೋ ಸಾಮಾನ್ಯರಿಗಲ್ಲ. ಲೇಡಿ ಪೊಲೀಸ್ ಕಂಟ್ರೋಲ್ ರೂಮ್‌ಗೆ 300 ಬಾರಿ ಕರೆ ಮಾಡಿ ಕೊಡಬಾರದ ಟಾರ್ಚರ್ ಕೊಟ್ಟಿದ್ದಾನೆ.
ಲೇಡಿ ಪೊಲೀಸ್ ಕೆಣಕಿದ್ರೆ ಸುಮ್ನೆ ಬಿಡ್ತಾರಾ? ಅವನ ಜಾಲ ಹುಡುಕಿ ಕಂಬಿ ಹಿಂದೆ ಕೊಳೆಯುವಂತೆ ಮಾಡಿದ್ದಾರೆ. ಈ ಆರೋಪಿ ಲೇಡಿ ಪೊಲೀಸ್‌ಗೆ 300 ಬಾರಿ ದೂರು ಕೊಡೋಕೆ ಕರೆ ಮಾಡಿದ್ರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಪದೆ ಪದೇ ಕರೆ ಮಾಡಿದ ಈ ಭೂಪ ಲೇಡಿ ಪೊಲೀಸ್‌ಗೆ ಕಿರುಕುಳ ಕೊಟ್ಟಿದ್ದಾನೆ. ಇದನ್ನ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಿ ಕೇಸ್‌ಗಳ ಮೇಲೆ ಕೇಸ್ ಹಾಕಲಾಗಿದೆ.
ಇದನ್ನೂ ಓದಿ: ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ನಿರ್ದೇಶಕರಿಗೆ ಲೀಗಲ್ ನೋಟಿಸ್; ಬೊಮ್ಮನ್, ಬೆಲ್ಲಿ ದಂಪತಿ ಬೇಡಿಕೆಗಳೇನು ಗೊತ್ತಾ?
3 ವರ್ಷ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡ
ಅಂದ ಹಾಗೆ 48 ಗಂಟೆಯಲ್ಲಿ 300 ಬಾರಿ ಕರೆ ಮಾಡಿ ಟಾರ್ಚರ್ ಕೊಟ್ಟಿರೋ ಘಟನೆ ನಡೆದಿರೋದು ಕೇರಳದಲ್ಲಿ. ತಿರುವನಂತಪುರಂನ ಜೋಸ್ ಎಂಬಾತನೇ ಈ ಕೇಸ್‌ನ ಅಪರಾಧಿಯಾಗಿದ್ದಾನೆ. ಇತ್ತೀಚೆಗೆ ಈ ಪ್ರಕರಣದಲ್ಲಿ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈತನಿಗೆ 3 ವರ್ಷ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಈ ಜೋಸ್ ತನ್ನ ಮೊಬೈಲ್‌ನಿಂದ ವನಿತಾ ಪೊಲೀಸ್ ಠಾಣೆಯ ಲ್ಯಾಂಡ್‌ಲೈನ್ ನಂಬರಿಗೆ 300 ಬಾರಿ ಕರೆ ಮಾಡಿದ್ದಾನೆ. ಈ ವನಿತಾ ಪೊಲೀಸ್ ಠಾಣೆಯಲ್ಲಿ ಬರೀ ಮಹಿಳಾ ಪೊಲೀಸ್ ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪದೆ ಪದೇ ಕರೆ ಮಾಡಿದ ಈ ವ್ಯಕ್ತಿ ಅತ್ಯಂತ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾನೆ ಎನ್ನಲಾಗಿದೆ. ಇದನ್ನು ಸೆಕ್ಷನ್ 354A (1)(ii) ಅನ್ವಯ ಲೈಂಗಿಕ ಕಿರುಕುಳ ಎಂದೇ ಭಾವಿಸಲಾಗಿದೆ. ಕೇರಳ ಪೊಲೀಸ್ ಕಾಯ್ದೆಯ ಪ್ರಕಾರ ಈ ತಪ್ಪಿಗೆ ಮ್ಯಾಜಿಸ್ಟೇಟ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ