ದೋಸೆ ಜೊತೆಗೆ ನೆಂಚಿಕೊಳ್ಳಲು ಸಾಂಬಾರ್ ಕೊಡದ ಹೋಟೆಲ್
ಕೇಳಿದ್ದಕ್ಕೆ ಹೋಟೆಲನ್ನೇ ಖರೀದಿ ಮಾಡು ಎಂದು ಹೇಳಿದ ಸಿಬ್ಬಂದಿ
140 ರೂಪಾಯಿಗೆ ದೋಸೆಗೆ 3500 ರೂಪಾಯಿ ದಂಡ! ಎಂಥಾ ಅವಸ್ಥೆ
ದೋಸೆಗಳಲ್ಲಿ ನಾನಾ ವೆರೈಟಿಗಳಿವೆ. ನೀರ್ ದೋಸೆ, ಮಸಾಲೆ ದೋಸೆ, ಬೆಣ್ಣೆ ದೋಸೆ, ಪನ್ನೀರ್ ದೋಸೆ ಹೀಗೆ ಬಾಯಲ್ಲಿ ನೀರುಣಿಸುವಂತೆ ಮಾಡುವ ಅನೇಕ ದೋಸೆಗಳಿವೆ. ಅದರಲ್ಲಿ ಕೆಲವೊಂದು ದೋಸೆಗಳನ್ನು ಚಟ್ನಿ ಜೊತೆಗೆ ತಿಂದರೆ ಚೆನ್ನಾಗಿರುತ್ತದೆ. ಇನ್ನು ಕೆಲವು ದೋಸೆಗಳನ್ನ ಸಾಂಬಾರ್ ಜೊತೆಗೆ ಸೇವಿಸದರೆ ಮಾತ್ರ ಚೆನ್ನಾಗಿರುತ್ತದೆ. ಆದರೆ ಕೆಲವೊಂದು ಹೋಟೆಲ್ಗಳು ದೋಸೆಗೆ ತಕ್ಕಂತೆ ಸಾಂಬಾರ್ ಅಥವಾ ಚಟ್ನಿಯನ್ನು ನೀಡುವುದಿಲ್ಲ. ಅದರಂತೆ ಇಲ್ಲೊಂದು ಹೋಟೆಲ್ ಕೂಡ ಗ್ರಾಹಕನೋರ್ವನಿಗೆ ದೋಸೆ ಜೊತೆಗೆ ಸಾಂಬಾರ್ ನೀಡಿಲ್ಲ. ಇದರಿಂದ ಕೋಪಗೊಂಡ ಗ್ರಾಹಕ ಏನು ಮಾಡಿದ್ದಾನೆ ಗೊತ್ತಾ? ಕೋರ್ಟ್ ಮೆಟ್ಟಿಲೇರಿದ್ದಾನೆ.
ಬಿಹಾರದಲ್ಲಿ ಈ ಘಟನೆ ನಡೆದಿದೆ. ಮನೀಶ್ ಎಂಬ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ದೋಸೆ ಸವಿಯಲೆಂದು ಹೋಟೆಲ್ಗೆ ಹೋಗಿದ್ದಾನೆ. ಆ ವೇಳೆ ತನ್ನಿಷ್ಟದ ದೋಸೆ ಆರ್ಡರ್ ಮಾಡಿದ್ದಾನೆ. 140 ರೂಪಾಯಿಗೆ ದೋಸೆ ಆರ್ಡರ್ ಮಾಡಿದ್ದಾನೆ.
ಮನೀಶ್ ದೋಸೆ ಆರ್ಡರ್ ಮಾಡಿದಂತೆ ದೋಸೆ ಬಂದಿದೆ. ಆದರೆ ದೋಸೆ ಜೊತೆ ನೆಂಚಿಕೊಳ್ಳಲು ಸಾಂಬಾರ್ ಕೊಟ್ಟಿರಲಿಲ್ಲ. ಈ ವೇಳೆ ಹೋಟೆಲ್ನವರನ್ನು ಕೇಳಿದಾಗ 140 ರೂಪಾಯಿಗೆ ಹೋಟೆಲನ್ನೇ ಖರೀದಿ ಮಾಡು ಎಂದು ಉಡಾಫೆ ಮಾತನಾಡಿದ್ದಾರೆ.
ಇದರಿಂದ ಕೋಪಗೊಂಡ ಮನೀಶ್ ಕೋರ್ಟ್ ಮೊರೆ ಹೋಗುತ್ತಾನೆ. ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ದ್ರೋಹ ಮಾಡಿದೆ ಎಂದು ಹೋಟೆಲ್ ವಿರುದ್ಧ ಕೋರ್ಟ್ನಲ್ಲಿ ವಾದಿಸಿದ್ದಾನೆ. ಮನೀಶ್ಗೆ ಆದ ಅವಮಾನಕ್ಕೆ ಕೋರ್ಟ್ ಹೋಟೆಲ್ಗೆ 3500 ರೂಪಾಯಿ ದಂಡ ವಿಧಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ