newsfirstkannada.com

ಗಣೇಶ ಹಬ್ಬದ ಗಮ್ಮತ್ತಿನಲ್ಲಿದ್ದವರಿಗೆ ಬಿಸಿ ಮುಟ್ಟಿಸಿದ ಖಾಸಗಿ ಬಸ್ ಮಾಲೀಕರು; ಟಿಕೆಟ್​ ದರ ಎಷ್ಟಿದೆ ಗೊತ್ತಾ?

Share :

14-09-2023

    ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಶಾಕ್​

    ಟಿಕೆಟ್​​ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರು

    3 ಪಟ್ಟು ಹಣ ವಸೂಲಿ ಮಾಡ್ತಿದ್ದಾರೆ ಖಾಸಗಿ ಬಸ್​ ಮಾಲೀಕರು

ಗಣೇಶ ಹಬ್ಬಕ್ಕೆ ನಾಲ್ಕೇ ದಿನಗಳು ಬಾಕಿ. ಈಗಾಗಲೇ ಎಲ್ಲೆಂದರಲ್ಲಿ ಹಬ್ಬದ ವಾತಾವರಣ ಶುರುವಾಗಿದೆ. ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಅತ್ತ ಹಬ್ಬದ ಸಮಯದಲ್ಲಿ ರಜೆ ಇದ್ದು, ಬೆಂಗಳೂರು ಬಿಟ್ಟು ಊರು ಸೇರಲು ಅನೇಕರು ಮುಂದಾಗಿದ್ದಾರೆ. ಹೀಗಿರುವಾಗ ಅಂತವರಿಗೆ ಖಾಸಗಿ ಬಸ್​​ ಮಾಲೀಕರು ಕೊಂಚ ಬಿಸಿ ಮುಟ್ಟಿಸಿದ್ದಾರೆ.

ಖಾಸಗಿ ಬಸ್​ಗಳ ಟಿಕೆಟ್ ವಿಮಾನದ ಟಿಕೆಟ್​ನಷ್ಟೇ ದುಬಾರಿಯಾಗಿವೆ. ಹೀಗಿರುವಾಗ ಖಾಸಗಿ ಬಸ್ ಮಾಲೀಕರಿಗೆ, ಆನ್​ಲೈನ್ ಟಿಕೆಟ್ ಬುಕ್ಕಿಂಗ್ ಕಂಪನಿಗಳಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಹಬ್ಬ, ಹರಿದಿನಗಳಲ್ಲಿ, ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಬಾರದು ಎಂದಿದೆ.

ಅತ್ತ ಪ್ರಯಾಣಿಕರ ವಾಹನಗಳಲ್ಲಿ ಇತರೆ ಸರಕುಗಳನ್ನೂ ಅನಧಿಕೃತವಾಗಿ ಸಾಗಿಸಬಾರದು. ಇಂತಹ ಪ್ರಕರಣ ಕಂಡು ಬಂದರೆ ಮಾಲೀಕರು, ಕಾನೂನು ಕ್ರಮವಾಗಿ ವಿತರಕರ ವಿರುದ್ಧ ಕೇಸ್ ಹಾಕಲಾಗುವುದು ಎಂದಿದೆ.

ಇನ್ನು ಸಾರಿಗೆ ಆಯುಕ್ತರು ನೀಡಿದ ಆದೇಶಕ್ಕೆ ಕಿಮ್ಮತ್ತಿಲ್ಲದೆ ಸಾಮಾನ್ಯ ದಿನಗಳಲ್ಲಿ 500 ರಿಂದ 700 ರೂಪಾಯಿ ಇದ್ದ ಟಿಕೆಟ್​ಗಳು 1,800-2,500ರವರೆಗೂ ದುಪ್ಪಟ್ಟಾಗಿವೆ. 3 ಪಟ್ಟು ಹಣ ವಸೂಲಿ ಮಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣೇಶ ಹಬ್ಬದ ಗಮ್ಮತ್ತಿನಲ್ಲಿದ್ದವರಿಗೆ ಬಿಸಿ ಮುಟ್ಟಿಸಿದ ಖಾಸಗಿ ಬಸ್ ಮಾಲೀಕರು; ಟಿಕೆಟ್​ ದರ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/09/Bus-2-1.jpg

Load More