newsfirstkannada.com

‘ಪುಷ್ಪ’ ಸ್ಟೈಲ್​ನಲ್ಲಿ ಸೆಂಚುರಿ ಸಂಭ್ರಮಿಸಿದ ವಾರ್ನರ್;​ ಈ ಸಕ್ಸಸ್​​ಗೆ SRH ಕಾರಣ ಎಂದಿದ್ದೇಕೆ ಡೆವಿಡ್..?

Share :

21-10-2023

    ‘ಪುಟ್ಟ ಬೊಮ್ಮ’ ಹಾಡಿಗೆ ಹುಚ್ಚೆದ್ದು ಕುಣಿದ ವಾರ್ನರ್-ವಿಡಿಯೋ

    9 ಸಿಕ್ಸರ್, 14 ಬೌಂಡರಿ ಬಾರಿಸಿರುವ ಡೆವಿಡ್ ವಾರ್ನರ್

    ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 62 ರನ್​ಗಳ ಜಯ

ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಪಂದ್ಯ ನಡೆಯಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಸೀಸ್​ನ ಡೆವಿಡ್ ವರ್ನಾರ್, 163 ರನ್​ಗಳಿಸಿ ಮೈದಾನದಲ್ಲಿ ಹೀರೋ ಆಗಿ ಮೆರೆದಾಡಿದರು.

ಬರೋಬ್ಬರಿ 9 ಸಿಕ್ಸರ್, 14 ಬೌಂಡರಿ ಬಾರಿಸಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದರು. 124 ಬಾಲ್​ಗಳನ್ನು ಎದುರಿಸಿರುವ ವಾರ್ನರ್, 131.45 ಸ್ಟ್ರೈಕ್​​ ರೇಟ್​ನಲ್ಲಿ ಬ್ಯಾಟ್ ಬೀಸಿದರು. ವಿಶೇಷ ಅಂದರೆ ಅವರು ಶತಕ ಬಾರಿಸಿ ಸಂಭ್ರಮಿಸಿದ ರೀತಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ವಾರ್ನರ್​ ಶತಕಕ್ಕಿಂತ, ವಾರ್ನರ್​ ಮಾಡಿದ ಪುಷ್ಪ ಸ್ಟೈಲ್​ನಲ್ಲಿ ‘ತಗ್ಗದೇ ಇಲ್ಲ’ ಸೆಲಬ್ರೇಷನ್​ ಟ್ರೆಂಡಿಂಗ್​ನಲ್ಲಿದೆ. ಹಾಗೆಯೇ ಜನಪ್ರಿಯ ‘ಪುಟ್ಟ ಬೊಮ್ಮ’ ಹಾಡಿಗೂ ಹೆಜ್ಜೆ ಹಾಕಿದರು.

ಶತಕ ಬಾರಿಸಿ ಪ್ರತಿಕ್ರಿಯಿಸಿದ ವಾರ್ನರ್.. ನಾನು ಹೈದ್ರಾಬಾದ್ ತಂಡದಲ್ಲಿದ್ದಾಗ ಸಾಕಷ್ಟು ಕಲಿತೆ. ಐಪಿಎಲ್​ ನನ್ನ ಬ್ಯಾಟಿಂಗ್​ ಶೈಲಿಯನ್ನು ಬದಲಿಸಿತು ಎಂದು ವಾರ್ನರ್ ಹೇಳಿದರು. ಇನ್ನು ಆಸ್ಟ್ರೇಲಿಯಾ ತಂಡವು ಪಾಕಿಸ್ತಾನದ ವಿರುದ್ಧ 62 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 367 ರನ್​​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಾಕ್, 45.3 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 305 ರನ್​ಗಳಿಸಿ ಸೋಲಿಗೆ ಶರಣಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪುಷ್ಪ’ ಸ್ಟೈಲ್​ನಲ್ಲಿ ಸೆಂಚುರಿ ಸಂಭ್ರಮಿಸಿದ ವಾರ್ನರ್;​ ಈ ಸಕ್ಸಸ್​​ಗೆ SRH ಕಾರಣ ಎಂದಿದ್ದೇಕೆ ಡೆವಿಡ್..?

https://newsfirstlive.com/wp-content/uploads/2023/10/warner.jpg

Load More