newsfirstkannada.com

ಆಹಾರ ಹುಡುಕುತ್ತ ಮನೆಗೆ ಬಂದ ಬೃಹತ್ ಕಾಳಿಂಗ ಸರ್ಪ.. ಇದರ ಹಿಡಿದಿದ್ದೇ ರೋಚಕ..!

Share :

02-11-2023

    ದೊಡ್ಡದಾದ ಹಾವನ್ನು ನೋಡಿ ಒಮ್ಮೆಗೆ ಭಯ ಬಿದ್ದ ಗ್ರಾಮಸ್ಥರು

    ಕಾಳಿಂಗ ಸರ್ಪವನ್ನು ಹಿಡಿಯಲು ಹರಸಾಹಸಪಟ್ಟ ಉರಗ ತಜ್ಞ

    ಮನೆ ಮುಂದಿನ ಬಾಳೆ ಗಿಡದೊಳಗೆ ನುಗ್ಗಲು ಯತ್ನಿಸಿದ ಕಾಳಿಂಗ

ಉತ್ತರ ಕನ್ನಡ: ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಜಿಲ್ಲೆಯ ಅಂಕೋಲಾ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ತಾಲೂಕಿನ ಕೃಷ್ಣಾಪುರ ಗ್ರಾಮದ ಪ್ರಶಾಂತ್ ನಾಯಕ್ ಎನ್ನುವವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ತಕ್ಷಣ ಉರಗಪ್ರೇಮಿ ಮಹೇಶ್ ನಾಯ್ಕ್​ ಅವರಿಗೆ ಕಾಲ್ ಮಾಡಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಕ್ಷಣ ಮಹೇಶ್ ನಾಯ್ಕ್​ ಸ್ಥಳಕ್ಕೆ ಆಗಮಿಸಿದರು. ಬಳಿಕ ಕಳಿಂಗ ಸರ್ಪವನ್ನು ಹಿಡಿಯಲು ಸತತ ಪ್ರಯತ್ನ ನಡೆಸಿದರು. ಈ ವೇಳೆ ಮನೆ ಮುಂದಿನ ಬಾಳೆ ಗಿಡದೊಳಗೆ ನುಗ್ಗಲು ಯತ್ನಿಸಿದ ಕಾಳಿಂಗ ಕೊನೆಗೆ ಸೆರೆ ಸಿಕ್ಕಿದೆ.

ಸೆರೆಸಿಕ್ಕ ಕಾಳಿಂಗ ಸರ್ಪ ಸುಮಾರು 12 ಅಡಿಗೂ ಅಧಿಕ ಉದ್ದವಿದ್ದು ಆಹಾರವನ್ನ ಹುಡುಕುತ್ತ ಕಾಡಿನಿಂದ ಜನರು ವಾಸಿಸುವ ಕಡೆ ನುಸುಳಿ ಬಂದಿದೆ ಎನ್ನಲಾಗಿದೆ. ಹಾವನ್ನು ಅರಣ್ಯ ಇಲಾಖೆಯವರಿಗೆ ಉರಗತಜ್ಞ ಹಸ್ತಾಂತರ ಮಾಡಿದರು. ಬಳಿಕ ಅಧಿಕಾರಿಗಳು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಹಾವನ್ನು ಬಿಟ್ಟುಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಹಾರ ಹುಡುಕುತ್ತ ಮನೆಗೆ ಬಂದ ಬೃಹತ್ ಕಾಳಿಂಗ ಸರ್ಪ.. ಇದರ ಹಿಡಿದಿದ್ದೇ ರೋಚಕ..!

https://newsfirstlive.com/wp-content/uploads/2023/11/KWR_KALANGA_SARPA.jpg

Load More