newsfirstkannada.com

‘ವರ್ತೂರು ಸಂತೋಷ್‌ಗೆ ಯಾರು ಹೆಣ್ಣು ಕೊಡಬೇಡಿ, ಅವನೊಬ್ಬ ಮೋಸಗಾರ’- ಮಾವ ಗಂಭೀರ ಆರೋಪ

Share :

14-11-2023

    ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಬಾಳಲ್ಲಿ ಬಿರುಗಾಳಿ?

    ವರ್ತೂರು ಸಂತೋಷ್​​ ಮದುವೆ ಫೋಟೋ ವೈರಲ್ ಆದ ಮೇಲೆ ಹೊಸ ಟ್ವಿಸ್ಟ್

    ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​​ ಮೇಲೆ ಗಂಭೀರ ಆರೋಪಗಳು

ಕನ್ನಡ ಕಿರುತೆರೆಯ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ. ವರ್ತೂರು ಸಂತೋಷ್​​ ಅವರ ಮದುವೆ ಫೋಟೋಗಳು ವೈರಲ್​​ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವರ್ತೂರು ಸಂತೋಷ್‌ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಮತ್ತೊಂದು ವಿಡಿಯೋ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ವರ್ತೂರು ಸಂತೋಷ್​ ಅವರ ಮಾವ ಎನ್ನಲಾದ ವ್ಯಕ್ತಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

FARM INDIA 22 ಅನ್ನೋ ಯುಟ್ಯೂಬ್‌ ಚಾನೆಲ್‌ನಲ್ಲಿ ವರ್ತೂರು ಸಂತೋಷ್‌ ಅವರ ವಿರುದ್ಧ ಆರೋಪಿಸಿರುವ ವಿಡಿಯೋಗಳನ್ನು ಪಬ್ಲಿಷ್ ಮಾಡಲಾಗಿದೆ. ಅದರಲ್ಲಿ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ಅವರ ಮದುವೆ, ಹಣಕಾಸಿನ ವ್ಯವಹಾರ, ಹಳ್ಳಿಕಾರ್ ವ್ಯವಸಾಯದ ಕುರಿತು ಬಹಳ ಗಂಭೀರ ಆರೋಪಗಳನ್ನು ಮಾಡಲಾಗಿದೆ.

ವೈರಲ್​ ಆದ ವಿಡಿಯೋದಲ್ಲಿ ಏನಿದೆ..? 

ವರ್ತೂರು ಸಂತೋಷ್ ನಿಜವಾಗಿಯೂ ದೊಡ್ಡ ಮೋಸಗಾರ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ಆ ವಿಡಿಯೋದಲ್ಲಿ ವರ್ತೂರು ಸಂತೋಷ್​ ಅವರ ಮಾವ ಎಂದು ತಿಳಿದು ಬಂದಿದೆ.  ಕೇವಲ ಒಂದು ಜೊತೆ ಹಳ್ಳಿಕಾರ್ ಹಸುಗಳನ್ನು ಕಟ್ಟಿಕೊಂಡು ತಾನೊಬ್ಬ ಹಳ್ಳಿಕಾರ್ ಉಳಿವಿಗೆ ಹೋರಾಟ ಮಾಡುವ ರೈತ ಎನ್ನುವುದು ಮಹಾ ಸುಳ್ಳು. ಚಿಕ್ಕಂದಿನಿಂದಲೂ ಶೋಕಿ ಮಾಡುತ್ತಲೇ ಬೆಳೆದ ವರ್ತೂರು ಸಂತೋಷ್ ನಿಜವಾಗಿಯೂ ಎಂಬಿಎ ಪದವೀದರನೇ ಅಲ್ಲ ಎಂದಿದ್ದಾರೆ.

ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಮುಳಬಾಗಿಲಿನಲ್ಲಿ ಹಿರಿಯರು ಕೊಡಿಸಿದ ಜಮೀನಿನಲ್ಲಿ ಕೂಲಿ ಆಳುಗಳನ್ನು ಇಟ್ಟುಕೊಂಡು ವ್ಯವಸಾಯ ಮಾಡುತ್ತಿದ್ದಾನೆ ಅಷ್ಟೇ. ಅವನೊಬ್ಬ ದೊಡ್ಡ ​ ಫ್ರಾಡ್​ ಅವನಿಗೆ ಯಾರೂ ಹೆಣ್ಣು ಕೊಡಬಾರದು ಎಂದು ಅವರ ಮಾವ ಗಂಭೀರವಾಗಿ ಆರೋಪ ಮಾಡಿದ್ದಾರೆ. ಸದ್ಯ ಬಿಗ್​ಬಾಸ್​ ಸೀನಸ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವರ್ತೂರು ಸಂತೋಷ್‌ಗೆ ಯಾರು ಹೆಣ್ಣು ಕೊಡಬೇಡಿ, ಅವನೊಬ್ಬ ಮೋಸಗಾರ’- ಮಾವ ಗಂಭೀರ ಆರೋಪ

https://newsfirstlive.com/wp-content/uploads/2023/11/varturu-2.jpg

Load More