newsfirstkannada.com

3 ಸಾವಿರ ಕಾರುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ; ಓರ್ವ ಭಾರತೀಯ ಸಾವು, 20 ಮಂದಿಗೆ ಗಾಯ

Share :

27-07-2023

    ಸಮುದ್ರ ಮಧ್ಯೆಯೇ ಹೊತ್ತಿ ಉರಿದ ಬೃಹದಾಕಾರದ ಹಡಗು

    3 ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಹಗಡು ನಡುನೀರಿನಲ್ಲೇ ಭಸ್ಮ

    ಭಾರತೀಯನೋರ್ವ ಸಾವನ್ನಪ್ಪಿರುವುದನ್ನ ಖಚಿತ ಪಡಿಸಿದ ರಾಯಭಾರ ಕಚೇರಿ

ಜರ್ಮನಿಯಿಂದ ಈಜಿಪ್ಟ್ ಗೆ ಕಾರು ಸಾಗಿಸುತ್ತಿದ್ದ  ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನೆದರ್ ಲ್ಯಾಂಡ್ಸ್ ನಿಂದ ಡಚ್ ಸಮುದ್ರ ತೀರದಲ್ಲಿ ನಡೆದಿದೆ. ಬೆಂಕಿ ಅವಘಡದಲ್ಲಿ ಹಡಗಿನಲ್ಲಿದ್ದ ಭಾರತದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, 20 ಮಂದಿಗೆ ಗಾಯವಾಗಿದೆ.

ಎಲೆಕ್ಟ್ರಿಕ್ ಕಾರ್ ಗಳನ್ನು ಸಾಗಿಸುತ್ತಿದ್ದ ಬೃಹದಾಕಾರದ ಹಡಗು ನೆದರ್ ಲ್ಯಾಂಡ್ಸ್ ನಿಂದ ಡಚ್ ಸಮುದ್ರ ತೀರದಲ್ಲಿ ಸಾಗುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿದ್ದ 3 ಸಾವಿರ ಕಾರುಗಳಿದ್ದು, ಬೆಂಕಿ ಬಿದ್ದಿರೋದು ಗೊತ್ತಾಗುತ್ತಿದ್ದಂತೆಯೇ ಕೆಲವು ಸಿಬ್ಬಂದಿಗಳು ಸಮುದ್ರಕ್ಕೆ ಜಂಪ್ ಮಾಡಿದ್ದಾರೆ.

ನೆದರ್ ಲ್ಯಾಂಡ್​ನ‌ ಭಾರತದ ರಾಯಭಾರ ಕಚೇರಿ ಭಾರತದ ಓರ್ವ ನಾಗರಿಕ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದೆ. ಹಡಗಿನಲ್ಲಿದ್ದ ಸಿಬ್ಬಂದಿಗಳ ರಕ್ಷಣೆಗಾಗಿ ಬೋಟ್, ಹೆಲಿಕಾಪ್ಟರ್ ಬಳಕೆ ಮಾಡಿ ರಕ್ಷಿಸುವ ಕೆಲಸ ಮಾಡಿದ್ದಾರೆ. ಇನ್ನು ಹಡಗಿಗೆ ಎಲೆಕ್ಟ್ರಿಕ್ ಕಾರ್ ಗಳಿಂದಲೇ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಸಾವಿರ ಕಾರುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ; ಓರ್ವ ಭಾರತೀಯ ಸಾವು, 20 ಮಂದಿಗೆ ಗಾಯ

https://newsfirstlive.com/wp-content/uploads/2023/07/Ship.jpg

Load More