newsfirstkannada.com

VIDEO: ದರ್ಶನ್ ಕಸ್ಟಡಿಯಲ್ಲಿರೋ ಪೊಲೀಸ್ ಠಾಣೆಯಲ್ಲಿ ಹಾವು ದಿಢೀರ್‌ ಪ್ರತ್ಯಕ್ಷ; ಫುಲ್ ಗಾಬರಿ!

Share :

Published June 19, 2024 at 11:17pm

  ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತಾ ಶಾಮಿಯಾನ

  ಹಾವು ಕಂಡು ಗಾಬರಿಯಿಂದ ಓಡಿ ಹೋದ ಪೊಲೀಸ್ ಸಿಬ್ಬಂದಿ

  ಸ್ಟೇಷನ್ ಮುಂದಿನ ಶಾಮಿಯಾನದ ಬಳಿ ಹಾವು ದಿಢೀರ್ ಪ್ರತ್ಯಕ್ಷ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ ಗ್ಯಾಂಗ್ ಸತತ 9 ದಿನಗಳಿಂದ ಸೆರೆವಾಸದಲ್ಲಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಸಹಚರರನ್ನು ವಿಚಾರಣೆ ನಡೆಸಲಾಗಿದೆ. ನಾಳೆ ದರ್ಶನ್ ಗ್ಯಾಂಗ್ ಕಸ್ಟಡಿ ಅವಧಿ ಮುಗಿಯುತ್ತಿದ್ದು, ಪ್ರಕರಣದ ತನಿಖೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತಾ ಶಾಮಿಯಾನ ಹಾಕಿ ನಟ ದರ್ಶನ್ ಗ್ಯಾಂಗ್ ವಿಚಾರಣೆ ನಡೆಸುತ್ತಾ ಇರೋದು ಚರ್ಚೆಗೆ ಗುರಿಯಾಗಿತ್ತು. ಇದೀಗ ದರ್ಶನ್ ಅವರ ವಿಚಾರಣೆ ನಡೆಯುತ್ತಿರುವಾಗಲೇ ಪೊಲೀಸ್ ಠಾಣೆಯ ಬಳಿ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರೂ ಶಾಕ್ ಆಗುವಂತೆ ಮಾಡಿದೆ.

ಪೊಲೀಸ್ ಠಾಣೆ ಮುಂದೆ ಹಾಕಿರುವ ಶಾಮಿಯಾನದ ಬಳಿ ಹಾವು ದಿಢೀರ್ ಪ್ರತ್ಯಕ್ಷವಾಗಿದೆ. ಪೊಲೀಸ್ ಸಿಬ್ಬಂದಿ ಹಾವು ಕಂಡು ಗಾಬರಿಗೊಂಡು ಠಾಣೆ ಒಳಗೆ ಓಡಿ ಹೋಗಿದ್ದಾರೆ. ಶಾಮಿಯಾನ ಬಳಿಯಿಂದ ಹಾವು ಠಾಣೆ ಮುಂಭಾಗದ ಮೋರಿಗೆ ನಿಧಾನಕ್ಕೆ ಜಾರಿಕೊಂಡಿದೆ.

ಠಾಣೆಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್ ನೋಡಲು ಈಗಲೂ ಅವರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಈ ಮಧ್ಯೆ ಹಾವು ಪ್ರತ್ಯಕ್ಷವಾಗಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿತ್ತು. ಕೊನೆಗೆ ಪೊಲೀಸರು ಉರಗ ತಜ್ಞರನ್ನು ಪೊಲೀಸ್ ಠಾಣೆಗೆ ಕರೆಸಿ ಹಾವನ್ನು ಹಿಡಿಯೋ ಸಾಹಸ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದರ್ಶನ್ ಕಸ್ಟಡಿಯಲ್ಲಿರೋ ಪೊಲೀಸ್ ಠಾಣೆಯಲ್ಲಿ ಹಾವು ದಿಢೀರ್‌ ಪ್ರತ್ಯಕ್ಷ; ಫುಲ್ ಗಾಬರಿ!

https://newsfirstlive.com/wp-content/uploads/2024/06/Darshan-Police-Station.jpg

Load More