newsfirstkannada.com

ಶ್ರೀದೇವಿ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಗಿಫ್ಟ್; ಈ ಚಿತ್ತಾರದ ಹಿಂದೆ ಇರೋದು ಯಾರು ಗೊತ್ತಾ?

Share :

13-08-2023

    ಎವರ್‌ಗ್ರೀನ್ ಚೆಲುವೆ ಶ್ರೀದೇವಿ 60ನೇ ವರ್ಷದ ಹುಟ್ಟುಹಬ್ಬ

    ಇವತ್ತಿನ ಗೂಗಲ್‌ ಡೂಡಲ್‌ನಲ್ಲಿ ಶ್ರೀದೇವಿಯ ಅದ್ಭುತ ಚಿತ್ರ

    ಬೋನಿ ಕಪೂರ್ ಹಾಗೂ ಮಗಳು ಖುಷಿ ಕಪೂರ್‌ರಿಂದ ವಿಶ್

ಇವತ್ತು ಅತಿಲೋಕ ಸುಂದರಿ, ಬಾಲಿವುಡ್ ಐಕಾನ್ ಚೆಲುವೆ ಶ್ರೀದೇವಿ ಅವರ 60ನೇ ವರ್ಷದ ಹುಟ್ಟುಹಬ್ಬ. ಶ್ರೀದೇವಿ ಅವರ ಜನ್ಮದಿನದ ಹಿನ್ನೆಲೆ ಗೂಗಲ್ ವಿಶೇಷ ಗೌರವ ನೀಡಿದೆ. ಇವತ್ತಿನ ಡೂಡಲ್‌ನಲ್ಲಿ ಶ್ರೀದೇವಿಯ ಅವರನ್ನ ಸ್ಮರಿಸಲಾಗಿದ್ದು, ಆಕರ್ಷಕವಾದ ಚಿತ್ತಾರ ಮೂಡಿಸಲಾಗಿದೆ.

ಅಂದಹಾಗೆ ಶ್ರೀದೇವಿ ಅವರ ಈ ಗೂಗಲ್ ಡೂಡಲ್‌ನ ಚಿತ್ತಾರ ಮೂಡಿಸಿದವರು ಭೂಮಿಕಾ ಮುಖರ್ಜಿ. ಮುಂಬೈ ಮೂಲದ ಕಲಾವಿದೆ ಭೂಮಿಕಾ, ಶ್ರೀದೇವಿಯ ಅದ್ಭುತ ಡೂಡಲ್ ಚಿತ್ರ ಬಿಡಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವತ್ತು ಶ್ರೀದೇವಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮುಂಬೈ ಮೂಲದ ಕಲಾವಿದೆ ಭೂಮಿಕಾ ಮುಖರ್ಜಿ

ಬಾಲನಟಿಯಾಗಿ ಕೇವಲ 4 ವರ್ಷಕ್ಕೆ ಬಣ್ಣದ ಲೋಕಕ್ಕೆ ಬಂದ ಎವರ್‌ಗ್ರೀನ್‌ ಬ್ಯೂಟಿ ಶ್ರೀದೇವಿ. 90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಅವರು ಮಾಡಿರೋ ಮೋಡಿ ಅಷ್ಟಿಷ್ಟಲ್ಲ. ಬಾಲಿವುಡ್‌ನ ಪುರುಷ ಪ್ರಧಾನ ಕಾಲದಲ್ಲೂ ಶ್ರೀದೇವಿ ತನ್ನದೇ ಛಾಪು ಮೂಡಿಸಿದ್ದು ನಿಜಕ್ಕೂ ಗಮನರ್ಹವಾದದ್ದು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರೀದೇವಿ ಅವರಿಗೆ ಈಗಲೂ ಅಭಿಮಾನಿಗಳಿದ್ದಾರೆ. 2018ರಲ್ಲಿ ದುಬೈಗೆ ಹೋಗಿದ್ದ ಶ್ರೀದೇವಿ ಅವರು ಹೋಟೆಲ್ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಇಂದು ಅವರು ಬದುಕಿದ್ದರೆ 60ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಶ್ರೀದೇವಿ ಅವರ ಪತಿ ಬೋನಿ ಕಪೂರ್ ಹಾಗೂ ಮಗಳು ಖುಷಿ ಕಪೂರ್ ಹಳೇ ಫೋಟೋಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀದೇವಿ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್‌ನಲ್ಲಿ ಸ್ಪೆಷಲ್ ಗಿಫ್ಟ್; ಈ ಚಿತ್ತಾರದ ಹಿಂದೆ ಇರೋದು ಯಾರು ಗೊತ್ತಾ?

https://newsfirstlive.com/wp-content/uploads/2023/08/Sridevi-Doodles.jpg

Load More