newsfirstkannada.com

Video: ಶಾಲಾ ವಿದ್ಯಾರ್ಥಿನಿಗೆ ಗುದ್ದಿದ ಬೈಕ್​.. ಹೈದರಾಬಾದ್​ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಿಸಿಟಿಯಲ್ಲಿ ಸೆರೆ

Share :

05-07-2023

  ಶಾಲೆಯಿಂದ ಮನೆಗೆ ತೆರಳುತ್ತಿರುವಾಗ ಅಪಘಾತ

  ಶಾಲಾ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಬೈಕ್​ ಸವಾರ

  ನೆಲಕಪ್ಪಳಿಸಿದ ಬಾಲಕಿ, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್​: ಶಾಲಾ ವಿದ್ಯಾರ್ಥಿಯೊಬ್ಬಳಿಗೆ ​ಅತಿಯಾದ ವೇಗವಾಗಿ ಬಂದ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾದ್​ನಗರದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಾ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ದಾಟಲು ಯತ್ನಿಸುತ್ತಾಳೆ. ಆದರೆ ಅತ್ತ ಕಡೆಯಿಂದ ವೇಗವಾಗಿ ಬಂದ ಬೈಕ್​ ಸವಾರ ಬಾಲಕಿಗೆ ಡಿಕ್ಕಿ ಹೊಡೆಯುತ್ತಾನೆ. ಡಿಕ್ಕಿಯ ರಭಸಕ್ಕೆ ಬಾಲಕಿ ನೆಲಕ್ಕೆ ಅಪ್ಪಳಿಸುತ್ತಾಳೆ.

ಬಾಲಕಿಗೆ ಬೈಕ್​ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗು ಸೇರಿ 3 ದುರ್ಮರಣ

ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಾಹನ ಸವಾರರ ಅತಿಯಾದ ವೇಗದಿಂದ ಅಪಘಾತವಾಗುತ್ತಿರುವ ದೃಶ್ಯಗಳು ಬೆಳಕಿಗೆ ಬರುತ್ತಿರುತ್ತವೆ.  ನಿನ್ನೆ  ಹೈದರಶಾಕೋಟೆಯ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ಒಂದು ಮಗು ಸಾವನ್ನಪ್ಪಿತ್ತು. ಬೆಳಗ್ಗಿನ ಜಾವ ವಾಯುವಿಹಾರಕ್ಕೆ ಬಗ್ಗ ಮಹಿಳೆಯರಿಬ್ಬರು ಮತ್ತು ಒಂದು ಮಗುವಿಗೆ ಅತ್ತ ಕಡೆಯಿಂದ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿತ್ತು. ಈ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಶಾಲಾ ವಿದ್ಯಾರ್ಥಿನಿಗೆ ಗುದ್ದಿದ ಬೈಕ್​.. ಹೈದರಾಬಾದ್​ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಿಸಿಟಿಯಲ್ಲಿ ಸೆರೆ

https://newsfirstlive.com/wp-content/uploads/2023/07/Hyderbad.jpg

Load More