newsfirstkannada.com

Video: ಗಂಗಮ್ಮನ ಸುಡ್ರೋ..ಚೌಡೇಶ್ವರಿನ ಸುಡ್ರೋ.. ಇದು ಮಳೆಗಾಗಿ ದೇವರನ್ನೇ ಸುಡೋ ವಿಚಿತ್ರ ಆಚರಣೆ

Share :

18-08-2023

    ಮದುವೆಯಾಗದ ಯುವಕರಿಂದ ವಿಚಿತ್ರ ಆಚರಣೆ

    ರಾತ್ರಿಯಿಡೀ ಬೆಂಕಿಯಲ್ಲಿ ಆಟವಾಡಿದ ಅವಿವಾಹಿತರ ಯುವಕರು

    ಕಲ್ಲಿನ ಶವಯಾತ್ರೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಹುಡುಗರು

ಚಿಕ್ಕಬಳ್ಳಾಪುರ: ಮಳೆಗಾಗಿ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುವ ಸಂಪ್ರದಾಯದ ಬಗ್ಗೆ ಕೇಳಿರಬಹುದು, ನೋಡಿರಬಹುದು. ಆದರೆ ಮಳೆ ಬರುವಿಕೆಗಾಗಿ ದೇವರನ್ನೇ ಸುಡೋ ವಿಚಿತ್ರ ಆಚರಣೆ ಬಗ್ಗೆ ಕೇಳಿದ್ದೀರಾ?. ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದಲ್ಲಿ ಈ ವಿಚಿತ್ರ ಆಚರಣೆ ಕಂಡುಬಂದಿದೆ.

ಊರಿನ ಜನರು ಗ್ರಾಮದೇವತೆಗಳಿಗೆ ಬೆಂಕಿ ತಾಗಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ ಮದುವೆಯಾಗದ ಯುವಕರಿಂದ ಉಪ್ಪರಪೆಟ್ಟಿಗೆ ಆಚರಣೆ ಮಾಡಿದ್ದಾರೆ.

ಯುವಕರು ರಾತ್ರಿಯಿಡೀ ಬೆಂಕಿಯಲ್ಲಿ ಆಟವಾಡಿ ಕಲ್ಲಿನ ಶವಯಾತ್ರೆ ಮಾಡಿದ್ದಾರೆ. ಗಂಗಮ್ಮನ ಸುಡ್ರೋ, ಚೌಡೇಶ್ವರಿಯನ್ನು ಸುಡ್ರೋ ಅಂತ ಕೂಗುವ ಮೂಲಕ ಅದ್ಧೂರಿಯಾಗಿ ಆಚರಿಸಿದ್ದಾರೆ. ಇನ್ನು ಊರಿನ ಜನರಲ್ಲಿ ಹೀಗೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಇದ್ದು, ನ್ಯೂಸ್​​ಫಸ್ಟ್ ಕನ್ನಡದ​ ಮೂಲಕ ಇಂತಹದೊಂದು ಸಂಪ್ರದಾಯ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಗಂಗಮ್ಮನ ಸುಡ್ರೋ..ಚೌಡೇಶ್ವರಿನ ಸುಡ್ರೋ.. ಇದು ಮಳೆಗಾಗಿ ದೇವರನ್ನೇ ಸುಡೋ ವಿಚಿತ್ರ ಆಚರಣೆ

https://newsfirstlive.com/wp-content/uploads/2023/08/Chikkaballapura.jpg

Load More