ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸಾಧನೆ ಏನು ಗೊತ್ತಾ?
ಬಿ.ಕಾಂ ಓದುತ್ತಿರುವ ಶ್ರೀರಕ್ಷಾ ಪ್ರತಿಭೆಗೆ ರಾಷ್ಟ್ರ ಮಟ್ಟದ ಮನ್ನಣೆ
ಇವಳ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆ
ಎಲೆ ಮರೆ ಕಾಯಿ ತರ ಇರೋ ಪ್ರತಿಭೆಗಳಿಗೆ ಒಂದು ಸಣ್ಣ ರೆಂಬೆ, ಕೊಂಬೆಗಳು ಸಿಕ್ಕರೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ಪ್ರೋತ್ಸಾಹಿಸುವ ಒಳ್ಳೆ ಮನಸು ಇರಬೇಕು ಅಷ್ಟೇ. ಈ ಮಾತಿಗೆ ಪೂರಕವಾಗಿ ಶ್ರೀರಕ್ಷಾ ಅನ್ನೋ ಈ ಬಿಕಾಂ ವಿದ್ಯಾರ್ಥಿನಿ ಇಡೀ ರಾಜ್ಯವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
19 ವರ್ಷದ ಶ್ರೀರಕ್ಷಾ ಅಸಾಮಾನ್ಯ ಸಾಧನೆಯೊಂದನ್ನ ಮಾಡಿದ್ದು, ಕನ್ನಡದ ಕುವರಿಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ. ಶ್ರೀರಕ್ಷಾ ಕನ್ನಡ ಭಾಷೆಯಲ್ಲೇ ಈ ಸಾಧನೆ ಮಾಡಿರೋದು ವಿಶೇಷವಾಗಿದೆ.
ಇದನ್ನೂ ಓದಿ: 12 ವರ್ಷದಿಂದ ಈತನ ನಿದ್ರೆ ದಿನಕ್ಕೆ ಕೇವಲ 30 ನಿಮಿಷ.. ನೀ ಮಾಯೆಯೊಳಗೊ ನಿದ್ದೆ ಮಾಯೆ ನಿನ್ನೊಳಗೊ..!
ದ್ವಿತೀಯ ವರ್ಷದ ಬಿ.ಕಾಂ ಓದುತ್ತಿರುವ ಶ್ರೀರಕ್ಷಾ ಕೇವಲ 17 ನಿಮಿಷ 30 ಸೆಕೆಂಡ್‌ನಲ್ಲಿ 61 ಅವಲಕ್ಕಿಯ ಮೇಲೆ ಕನ್ನಡ ಭಾಷೆಯಲ್ಲಿ ರಾಷ್ಟ್ರಗೀತೆಯನ್ನು ಬರೆದಿದ್ದಾರೆ. ಇದು ಇಡೀ ದೇಶದಲ್ಲೇ ಹೊಸ ದಾಖಲೆಗೆ ಸಾಕ್ಷಿಯಾಗಿದೆ.
ಶ್ರೀರಕ್ಷಾ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮುಗದೂರು ಗ್ರಾಮದವರು. ಇವರ ರೈತನ ಮಗಳು. ಮುಗದೂರು ಗ್ರಾಮದ ರವಿಶಂಕರ ಆರ್. ಹೆಗಡೆ ಹಾಗೂ ಗಾಯತ್ರಿ ಆರ್. ಹೆಗಡೆ ಅವರ ಪುತ್ರಿಯಾಗಿದ್ದಾರೆ. ಪುಟ್ಟ ಹಳ್ಳಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಶ್ರೀರಕ್ಷಾ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ