ಬೆಂಕಿ ತಗುಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಸಾರಿಗೆ ಬಸ್
ಬಸ್‌ಗೆ ಬೆಂಕಿ ತಗಲುತ್ತಿದ್ದಂತೆಯೇ ಕೆಳಗಿಳಿದ ಪ್ರಯಾಣಿಕರು
ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ
ಬೆಳಗಾವಿ: ಚಲಿಸುತ್ತಿದ್ದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಡು ರಸ್ತೆಯಲ್ಲಿ ಹೊತ್ತಿ ಉರಿದಿರುವ ಘಟನೆ ಹುಕ್ಕೇರಿ ತಾಲೂಕಿನ ನರಸಿಂಗಪೂರ ಬಳಿ ನಡೆದಿದೆ. ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೋಡ, ನೋಡುತ್ತಿದ್ದಂತೆ ಬಸ್ ಬೆಂಕಿಗೆ ಆಹುತಿಯಾಗಿದೆ.
ನರಸಿಂಗಪೂರ ಬಳಿ ಬಸ್‌ಗೆ ಬೆಂಕಿ ತಗಲುತ್ತಿದ್ದಂತೆಯೇ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಕೂಡಲೇ ಅವರನ್ನು ಕೆಳಗಿಳಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸದ್ಯ ಪ್ರಯಾಣಿಕರೆಲ್ಲರೂ ಬಚಾವ್ ಆಗಿದ್ದಾರೆ. ಬೆಳಗಾಬಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಮಕನಮರಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ