ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿ ಐವರು ಶಂಕಿತ ಉಗ್ರರು
ಐವರು ಶಂಕಿತ ಉಗ್ರರಲ್ಲಿ ಓರ್ವ ಸೂಸೈಡ್ ಬಾಂಬರ್ ಪತ್ತೆ
36 HE ಮಾದರಿ ಗ್ರೆನೇಡ್ ಹೊಂದಿದ್ದ ಸೂಸೈಡ್ ಬಾಂಬರ್
ಬೆಂಗಳೂರು: ಸಿಸಿಬಿ ಪೊಲೀಸರು ಬಂಧಿಸಿದ ಐವರು ಶಂಕಿತ ಉಗ್ರರಲ್ಲಿ ಓರ್ವ ಸೂಸೈಡ್ ಬಾಂಬರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಬಳಿ 36 HE ಮಾದರಿ ಗ್ರೆನೇಡ್ ಇರುವುದು ತನಿಖೆಗೆ ವೇಳೆ ತಿಳಿದು ಬಂದಿದೆ.
ಶಂಕಿತ ಉಗ್ರ ತನ್ನನ್ನು ತಾನೇ ಸಿಡಿಸಿಕೊಳ್ಳುವ ಬಾಂಬ್ ತಯಾರಿಸಿದ್ದಾನೆ. ಉಳಿದ ಶಂಕಿತರು ಆತನಿಗಾಗಿ ಗ್ರೆನೇಡ್ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಸಿಕ್ಕಿರುವ 36 HE ಮಾದರಿ ಗ್ರೆನೇಡ್ 4 ರಿಂದ 7 ಸೆಕೆಂಡ್ನಲ್ಲಿ ಬ್ಲಾಸ್ ಆಗುವ ಸಾಮರ್ಥ್ಯ ಹೊಂದಿದೆ ಎಂದು ಸಿಸಿಬಿ ತನಿಖೆ ವೇಳೆ ಬಹಿರಂಗವಾಗಿದೆ.
ಸ್ಫೋಟಕ ಅಂಶಗಳು ಬಹಿರಂಗ
ಆರು ಶಂಕಿತರಲ್ಲಿ ಉಮರ್, ಸುಹೇಲ್, ತಬ್ರೇಜ್, ಫೈಜಲ್ ರಬಾನಿ, ಮುದಾಸಿರ್ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿದ್ದು, ಅದರಲ್ಲಿ ಜುನೈದ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಸದ್ಯ ಸಿಸಿಬಿ ಪೊಲೀಸರ ಬಳಿ ಐವರು ಶಂಕಿತ ಉಗ್ರರಿದ್ದಾರೆ. ಸೂಕ್ತ ಮಾಹಿತಿ ಮೇರೆಗೆ ಮತ್ತು ಸರಿಯಾದ ಸಮಯಕ್ಕೆ ಶಂಕಿತ ಉಗ್ರರನ್ನು ಬಂಧಿಸಿ ಅವರ ಆಪರೇಷನ್ ಅನ್ನು ಸಿಸಿಬಿ ಪೊಲೀಸರು ಫೇಲ್ ಮಾಡಿದ್ದಾರೆ. ಆರ್ ಟಿ ನಗರ, ಹೆಬ್ಬಾಳ ಡಿಜೆಹಳ್ಳಿಯಲ್ಲಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ ಆರೋಪ; ಬೆಂಗಳೂರಲ್ಲಿ 5 ಶಂಕಿತ ಉಗ್ರರು ಸಿಸಿಬಿ ವಶಕ್ಕೆ
ಸಿಸಿಬಿ ಕೈಗೆ ಸಿಕ್ಕ 36 HE ಮಾದರಿ ಗ್ರೆನೇಡ್ನ ಕ್ರಾಕರ್ ಕ್ಯಾಪಸಿಟಿಯನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ಈ ಪ್ರಕರಣದ ಹಿಂದೆ ಯಾವುದಾದರು ಸಂಘಟನೆಯ ಪಾತ್ರ ಇದೆಯಾ ಎಂದು ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಹೀಗೆ ವಿವಿಧ ಆಯಾಮದಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಕೂಡ ಎಂಟ್ರಿ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ