newsfirstkannada.com

ಕೊನೆಗೂ ದರ್ಶನ್‌ ಆಸೆ ಈಡೇರಿಸಿದ ಜೈಲಾಧಿಕಾರಿಗಳು.. ಬಳ್ಳಾರಿ ಸೆಲ್‌ಗೆ ಬಂತು ಸ್ಪೆಷಲ್ ಚೇರ್‌; ಯಾಕೆ?

Share :

Published September 2, 2024 at 5:37pm

Update September 2, 2024 at 5:46pm

    ದರ್ಶನ್‌ಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಬಂತು ಸರ್ಜಿಕಲ್ ಚೇರ್!

    ದರ್ಶನ್ ಮೆಡಿಕಲ್ ರಿಪೋರ್ಟ್‌ ಪರಿಶೀಲನೆ ನಡೆಸಿದ್ದ ಜೈಲಾಧಿಕಾರಿಗಳು

    ಬಳ್ಳಾರಿ ಜೈಲಿನ ಸೆಲ್‌ ನಂಬರ್ 15ರಲ್ಲಿ ದರ್ಶನ್‌ ಎದುರಾದ ಸಮಸ್ಯೆಗಳೇನು?

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅವರ ಮನವಿಗೆ ಜೈಲಾಧಿಕಾರಿಗಳು ಸ್ಪಂದಿಸಿದ್ದಾರೆ. ಬಳ್ಳಾರಿ ಜೈಲಿನ ಸೆಲ್‌ನಲ್ಲಿರುವ ದರ್ಶನ್ ಅವರು ತಮಗೆ ಬೆನ್ನು ನೋವು ಇದೆ. ಬಾತ್‌ ರೂಂಗೆ ಹೋಗುವಾಗ ಕಷ್ಟವಾಗುತ್ತಿದ್ದು, ಸರ್ಜಿಕಲ್ ಕಮೋಡ್ ಚೇರ್ ನೀಡುವಂತೆ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು.

ಇದನ್ನೂ ಓದಿ: 3 ದಿನ ಸ್ನಾನವಿಲ್ಲ, ಒಂದೇ ಟೀ ಶರ್ಟ್​​.. ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ಗೆ 5 ದುಸ್ಥಿತಿ; ಏನದು? 

ಕಳೆದ ಶನಿವಾರ ಬಳ್ಳಾರಿ ಜೈಲಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ನೀಡಿದ್ದರು. ಈ ವೇಳೆ ದರ್ಶನ್ ಅವರಿಗೆ ಕಾಡುತ್ತಿರುವ ಬೆನ್ನು ನೋವಿನ ಬಗ್ಗೆ ಮೆಡಿಕಲ್ ರಿಪೋರ್ಟ್‌ ಅನ್ನು ಕಾರಾಗೃಹದ DIGಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಜೈಲಿನ ಡಾಕ್ಟರ್ ಬಳಿ ದರ್ಶನ್ ಅವರ ಮೆಡಿಕಲ್ ಚೆಕಪ್ ಮಾಡಲಾಗಿತ್ತು.

ಬಳ್ಳಾರಿ ಜೈಲಿನ ಡಾಕ್ಟರ್‌ಗಳು ದರ್ಶನ್ ಅವರ ಬೆನ್ನು ನೋವಿನ ಮೆಡಿಕಲ್ ರಿಪೋರ್ಟ್‌ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ.

ಇದನ್ನೂ ಓದಿ: ಪೂಮಾ ಟೀ ಶರ್ಟ್‌ನಲ್ಲೇ ದರ್ಶನ್.. ಮೆಡಿಕಲ್ ಚೆಕಪ್​ಗೆ ಕರೆದುಕೊಂಡು ಹೋದ ಜೈಲಾಧಿಕಾರಿಗಳು; ಕಾರಣವೇನು? 

ದರ್ಶನ್ ಸೆಲ್‌ಗೆ ಸರ್ಜಿಕಲ್ ಚೇರ್‌!
ಬಳ್ಳಾರಿ ಜೈಲಿಗೆ ಇಂದು ದರ್ಶನ್‌ಗಾಗಿ ಜಿಲ್ಲಾಸ್ಪತ್ರೆಯಿಂದ ಸರ್ಜಿಕಲ್ ಚೇರ್ ಅನ್ನು ತರಲಾಗಿದೆ. ಕಾರಿನಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಸರ್ಜಿಕಲ್ ಚೇರ್ ತಂದು ಜೈಲಾಧಿಕಾರಿಗಳಿಗೆ ನೀಡಿದ್ದಾರೆ. ಜೈಲಿನ ಸಿಬ್ಬಂದಿ ತಪಾಸಣೆ ನಡೆಸಿದ ಬಳಿಕ ಸರ್ಜಿಕಲ್ ಕಮೋಡ್ ಚೇರ್ ಅನ್ನು ಸೆಲ್‌ಗೆ ಶಿಫ್ಟ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ದರ್ಶನ್‌ ಆಸೆ ಈಡೇರಿಸಿದ ಜೈಲಾಧಿಕಾರಿಗಳು.. ಬಳ್ಳಾರಿ ಸೆಲ್‌ಗೆ ಬಂತು ಸ್ಪೆಷಲ್ ಚೇರ್‌; ಯಾಕೆ?

https://newsfirstlive.com/wp-content/uploads/2024/09/Darshan-Surggical-Chair.jpg

Load More