newsfirstkannada.com

ಪೂಜೆ ಮಾಡುವ ನೆಪದಲ್ಲಿ ಬಂದ ಕಳ್ಳ ಸ್ವಾಮೀಜಿ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿ

Share :

28-08-2023

    ತಮಿಳುನಾಡು ಮೂಲದ ಕಳ್ಳ ಸ್ವಾಮೀಜಿ ರಾಜ

    ಕೌಟುಂಬಿಕ ಕಲಹ ಸರಿಪಡಿಸಲು ಪೂಜೆ ಮಾಡಲು ಬಂದಿದ್ದ

    2.40 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರ ಕದ್ದು ಪರಾರಿ

ಸ್ವಾಮೀಜಿಯೊಬ್ಬ ಪೂಜೆ ಮಾಡುವ ನೆಪದಲ್ಲಿ ಬಂದು ಮಹಿಳೆಯ 2.40 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರವನ್ನು ಕದ್ದೊಯ್ದ ಘಟನೆ ಇಂದಿರಾನಗರದ ಕದಿರಯ್ಯನಪಾಳ್ಯದಲ್ಲಿ ಬೆಳಕಿಗೆ ಬಂದಿದೆ.

ಸುಗುಣಾ ಎಂಬ ಮಹಿಳೆ ಕೌಟುಂಬಿಕ ಕಲಹದಿಂದ ಬೇಸತ್ತಿದ್ದರು. ಹೀಗಾಗಿ ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು. ಕೌಟುಂಬಿಕ ಕಲಹ ಸರಿಪಡಿಸಲು ಪೂಜೆ ಮಾಡಬೇಕೆಂದು ಸ್ವಾಮೀಜಿ ಬಳಿ ಕೇಳಿಕೊಂಡಿದ್ದಳು.

ಅದರಂತೆಯೇ ಮನೆಗೆ ಬಂದು ಪೂಜೆ ಸಲ್ಲಿಸಿ ಸಮಸ್ಯೆ ನಿವಾರಣೆ ಮಾಡುತ್ತೇನೆ ಎಂದು ಕಳ್ಳ ಸ್ವಾಮೀಜಿ ರಾಜ ಹೇಳಿದ್ದ. ಆದರೆ ಆಗಸ್ಟ್ 13ರಂದು ಪೂಜೆಗೆಂದು ಸುಗುಣ ಮನೆಗೆ ಬಂದಾತ ಸಂಜೆ 4ರಿಂದ 4:45ರವರೆಗೂ ಮನೆಯೊಳಗೆ ಪೂಜೆ ಮಾಡಿ, ಬಳಿಕ ಪೂಜೆ ಮಾಡಿದ್ದ ಸ್ಥಳದಲ್ಲಿ ಮಾಂಗಲ್ಯ ಸರವನ್ನ ಬಿಚ್ಚಿಡುವಂತೆ ಸೂಚಿಸಿದ್ದ. ಅದರಂತೆ ಸುಗುಣಾ ತಮ್ಮ ಸರವನ್ನ ಬಿಚ್ಚಿಟ್ಟಿದ್ದರು. ಬಳಿಕ ಮನೆಯ ಹೊರಗಡೆ ಪೂಜೆ ಸಲ್ಲಿಸಲು ಹೋದಾಗ ಆರೋಪಿ ಸರದ ಸಮೇತ ಪರಾರಿಯಾಗಿದ್ದಾನೆ.

ಮಾಂಗಲ್ಯ ಸರ ಕಳೆದುಕೊಂಡ ಸುಗುಣಾ ದಿಕ್ಕು ತೋಚದೆ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಇಂದಿರಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೂಜೆ ಮಾಡುವ ನೆಪದಲ್ಲಿ ಬಂದ ಕಳ್ಳ ಸ್ವಾಮೀಜಿ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿ

https://newsfirstlive.com/wp-content/uploads/2023/08/mangalya.jpg

Load More