newsfirstkannada.com

ಅಕ್ಕನ ಬಾಯ್‌ಫ್ರೆಂಡ್ ಜೊತೆ ತಂಗಿ ಪರಾರಿ.. ಟೆಕ್ಕಿ ಅನುಮಾನಾಸ್ಪದ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು?

Share :

02-09-2023

    ಸಿಸಿಟಿವಿಯಲ್ಲಿ ಬಾಯ್‌ಫ್ರೆಂಡ್ ಜೊತೆ ತಂಗಿ ಪರಾರಿಯಾದ ದೃಶ್ಯ ಸೆರೆ

    ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 24 ವರ್ಷದ ದೀಪ್ತಿ

    ಮನೆಯಲ್ಲಿ ವೋಡ್ಕಾ, ಬ್ರೀಜರ್, ವಿನೆಗರ್ ಮತ್ತು ನಿಂಬೆಹಣ್ಣು ಪತ್ತೆ

ಹೈದರಾಬಾದ್‌: ಅಕ್ಕನ ಬಾಯ್‌ಫ್ರೆಂಡ್ ಜೊತೆ ತಂಗಿ ಪರಾರಿಯಾಗುತ್ತಿದ್ದಂತೆ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ತೆಲಂಗಾಣದ ಕೋರುಟ್ಲದಲ್ಲಿ ನಡೆದಿದೆ. ಕಳೆದ ಆಗಸ್ಟ್ 30 ರಂದು ನಡೆದಿದ್ದ ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಅಕ್ಕನ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾದ ತಂಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾವಿಗೂ ಮುನ್ನ ಆಗಿದ್ದೇನು ಅನ್ನೋದನ್ನ ತಂಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ಅಣ್ತಮ್ಮ ನಾವ್‌ ಬಂದ್ರೂ ರೆಸ್ಪೆಕ್ಟ್‌ ಕೊಡಲ್ವಾ.. ಬೆಂಗಳೂರಲ್ಲಿ ಪುಡಿ ರೌಡಿಗಳಿಂದ ಡೆಡ್ಲಿ ಅಟ್ಯಾಕ್‌!

24 ವರ್ಷದ ದೀಪ್ತಿ ಹೈದರಾಬಾದ್ ಮೂಲದ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಳು. ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದೀಪ್ತಿ ವರ್ಕ್ ಫ್ರಮ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದಳು. ದೀಪ್ತಿ ತಂಗಿ ಚಂದನಾ ಬಿಟೆಕ್ ಪದವೀಧರೆಯಾಗಿದ್ದಳು. ಚಂದನಾ ಜೊತೆ ತನ್ನ ಬಾಯ್‌ಫ್ರೆಂಡ್ ಪರಾರಿಯಾದ ಬೆನ್ನಲ್ಲೇ ಅಕ್ಕ ದೀಪ್ತಿ ಮನೆಯ ಸೋಫಾ ಮೇಲೆ ಶವವಾಗಿ ಪತ್ತೆಯಾಗಿದ್ದಳು. ದೀಪ್ತಿಯನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ದೀಪ್ತಿ ಅನುಮಾನಾಸ್ಪದ ಸಾವಿನ ತನಿಖೆ ನಡೆಸಿದ ಪೊಲೀಸರು ತಂಗಿ ಚಂದನಾ ಹಾಗೂ ಆಕೆಯ ಬಾಯ್​ಫ್ರೆಂಡ್ ಅನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಂಗಿ ತಾನು ಪರಾರಿಯಾಗೋ ಮುನ್ನ ಮೂವರು ಸೇರಿ ಪಾರ್ಟಿ ಮಾಡಿದ್ದೆವು ಅನ್ನೋದನ್ನ ಬಾಯ್ಬಿಟ್ಟಿದ್ದಾಳೆ. ಪೊಲೀಸರು ಮನೆಯಲ್ಲಿ ವೋಡ್ಕಾ, ಬ್ರೀಜರ್, ವಿನೆಗರ್ ಮತ್ತು ನಿಂಬೆಹಣ್ಣುಗಳನ್ನು ಪತ್ತೆ ಮಾಡಿದ್ದಾರೆ. ಅಂದು ಮುಂಜಾನೆ 5 ಗಂಟೆ ಸುಮಾರಿಗೆ ದೀಪ್ತಿ ಅವರ ತಂಗಿ ಚಂದನಾ ಅಪರಿಚಿತ ವ್ಯಕ್ತಿಯೊಂದಿಗೆ ಮನೆಯಿಂದ ಹೊರಟಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ದೀಪ್ತಿ ಅವರನ್ನು ಮದ್ಯ ಸೇವಿಸಿದ ವ್ಯಕ್ತಿಯೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕನ ಬಾಯ್‌ಫ್ರೆಂಡ್ ಜೊತೆ ತಂಗಿ ಪರಾರಿ.. ಟೆಕ್ಕಿ ಅನುಮಾನಾಸ್ಪದ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/09/Sister-Love-Story.jpg

Load More