/newsfirstlive-kannada/media/post_attachments/wp-content/uploads/2023/11/kambala-14.jpg)
ಬೆಂಗಳೂರು: ಕಳೆದರೆಡು ದಿನದಿಂದ ಸಿಲಿಕಾನ್ ಸಿಟಿ ಜನರನ್ನ ಮೈನವಿರೆಳಿಸಿದ್ದ ಕರಾವಳಿ ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ತುಳುನಾಡಿನ ಕಂಬಳವನ್ನು ಸಿಲಿಕಾನ್​ ಸಿಟಿಯಲ್ಲಿ ಸುಮಾರು 9 ರಿಂದ 10 ಲಕ್ಷಕ್ಕೂ ಹೆಚ್ಚು ಜನರು ಕಣ್ಣು ತುಂಬಿಕೊಳ್ಳುವ ಮೂಲಕ ಕರಾವಳಿಯ ಕ್ರೀಡೋತ್ಸವ ಹೊಸ ದಾಖಲೆಯೊಂದಿಗೆ ಇತಿಹಾಸದ ಪುಟ ಸೇರಿತು.
/newsfirstlive-kannada/media/post_attachments/wp-content/uploads/2023/11/KAMBALA-1-1.jpg)
6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಕನಹಲಗೆ ವಿಭಾಗದಲ್ಲಿ ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು ಗೆಲುವಿನ ನಗೆಬೀರಿದ್ದಾವೆ. ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣಗಳು, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣಗಳು, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಗೆಲ್ಲುವ ಮೂಲಕ ಬೆಂಗಳೂರಿಲ್ಲಿ ಇತಿಹಾಸ ನಿರ್ಮಿಸಿದವು.
ಕರಾವಳಿ ಆಚೆಗೂ ತುಳು ಸಂಸ್ಕೃತಿ ಪಸರಿಸಿದೆ
ಫೈನಲ್ ಪಂದ್ಯದಲ್ಲಿ ಸಮನಾಗಿ ಓಡುವ ಮೂಲಕ ಪಂದ್ಯ ಟೈ ಆಗಿತ್ತು. ನಂತರ ಮತ್ತೆ 2 ತಂಡಗಳ ನಡುವೆ ಟೈ ಬ್ರೇಕರ್ ಪಂದ್ಯ ಆಯೋಜನೆ ಮಾಡಲಾಗಿ, ಆ ಓಟದಲ್ಲಿ ಎಸ್ಎಂಎಸ್ ಫ್ಯಾಮಿಲಿ ಬೆಂಗಳೂರು ತಂಡ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಂಬಳ ವಿಜೇತರಿಗೆ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಉದ್ಯಾನ ನಗರಿ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದ ಕರಾವಳಿ ಭಾಗದ ಕಂಬಳಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ಬೆಂಗಳೂರು ಕಂಬಳ ನಮ್ಮ ಕಂಬಳ ತುಳುನಾಡಿನ ಅಸ್ಮಿತೆಗೆ ಸಾಕ್ಷಿಯಾಯಿತು. ಕರಾವಳಿ ಆಚೆಗೂ ತುಳು ಸಂಸ್ಕೃತಿ ಪಸರಿಸುವ ಹೆಬ್ಬಯಕೆ ಈಡೇರಿದೆ. ಎರಡು ದಿನ ಕಂಬಳ ನೋಡಿ ಹೋದವರು ಒಟ್ಟು 9 ರಿಂದ 10 ಲಕ್ಷಕ್ಕೂ ಹೆಚ್ಚು ಮಂದಿ. ಈ ಮೂಲಕ ಕರಾವಳಿಯ ಕ್ರೀಡೋತ್ಸವ ಹೊಸ ದಾಖಲೆಯೊಂದಿಗೆ ಇತಿಹಾಸದ ಪುಟ ಸೇರಿದೆ.
2 ದಿನವೂ ಲಕ್ಷಾಂತರ ಮಂದಿ ಕಂಬಳ ಕಣ್ತುಂಬಿಕೊಳ್ಳುವ ಜತೆಗೆ ಕಂಬಳ ಸಾಂಸ್ಕೃತಿಕ ಹಬ್ಬವಾಗಿ ರಾಜಧಾನಿಯಲ್ಲಿ ಸದ್ದು ಮಾಡಿತು. ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಕೋಣಗಳು ಓಡುವ ಕರೆ ಸುತ್ತ ಜನಸಾಗರವೇ ಸೇರಿತ್ತು. ವಾರಾಂತ್ಯದ ಕಾರಣ ಕುಟುಂಬ ಸಮೇತರಾಗಿ ಆಗಮಿಸಿದ್ದ ಜನ, ಕಂಬಳವನ್ನು ಹತ್ತಿರದಿಂದ ವೀಕ್ಷಿಸಿದ್ರು. ಕರಾವಳಿ ಭಾಗದಲ್ಲೂ ಇಷ್ಟು ಜನಸ್ತೋಮ ಕಾಣದ ಈ ಕ್ರೀಡೆಗೆ ಬೆಂಗಳೂರಿನಲ್ಲಿ ಜನಪ್ರವಾಹವೇ ಹರಿದುಬಂದಿದ್ದು ನೋಡಿ ಕೋಣಗಳ ಯಜಮಾನರು ಮತ್ತೆ ರಾಜಧಾನಿಯಲ್ಲಿ ಕಂಬಳ ಉತ್ಸವ ಆಯೋಜಿಸಿದ್ರೆ ಭಾಗವಹಿಸುವ ಉಮೇದು ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us