newsfirstkannada.com

WATCH: ಆಕಾಶದಲ್ಲಿ ನಿಂತು ಹೋದ ‘ಹವಾ’; ಟಿಶ್ಯೂ ಪೇಪರ್‌ನಲ್ಲಿ ಗಾಳಿ ಬೀಸಿಕೊಂಡ ಪ್ರಯಾಣಿಕರು; ಆಗಿದ್ದೇನು?

Share :

05-08-2023

    ವಿಮಾನದಲ್ಲಿ ಎಸಿ ಇಲ್ಲದೇ 10-15 ನಿಮಿಷ ಒದ್ದಾಡಿದ ವಿಡಿಯೋ

    ಟಿಶ್ಯೂ ಪೇಪರ್‌ಗಳನ್ನ ಹಂಚಿ ಕೂಲ್ ಮಾಡಿದ ಗಗನಸಖಿಯರು

    ಪ್ರಯಾಣಿಕರಿಗೆ ಹಣ ಪಡೆದು ಸೂಕ್ತ ಸೌಲಭ್ಯ ನೀಡದ ಆರೋಪ

ಆಕಾಶದಲ್ಲಿ ಹಾರಾಡುವಾಗ ಹವಾ ಚೆನ್ನಾಗಿರಬೇಕು. ವಿಮಾನದಲ್ಲಿ ಪ್ರಯಾಣಿಸುವಾಗ ತಂಪಾದ AC ಬೀಸುತ್ತಿರಬೇಕು. ವಿಮಾನದಲ್ಲಿ ಪ್ರಯಾಣಿಸುವಾಗ ಒಂದೇ ಒಂದು ನಿಮಿಷ ಎಸಿ ಆಫ್‌ ಆದ್ರೂ ಕೂರೋದು ಕಷ್ಟ. ಆದ್ರೆ ಚಂಡೀಗಢದಿಂದ ಜೈಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರು ವಿಮಾನದಲ್ಲಿ ಎಸಿ ಇಲ್ಲದೇ 10-15 ನಿಮಿಷ ಒದ್ದಾಡಿದ ಘಟನೆ ಬೆಳಕಿಗೆ ಬಂದಿದೆ.

ಇಂಡಿಗೋ ವಿಮಾನ 6E7261 ವಿಮಾನ ಜೈಪುರಕ್ಕೆ ಪ್ರಯಾಣಿಸುವಾಗ ಎಸಿ ತನ್ನ ಕಾರ್ಯಾಚರಣೆ ನಿಲ್ಲಿಸಿದೆ. ಎಸಿ ಇದ್ದಕ್ಕಿದ್ದಂತೆ ಆಫ್ ಆದಂತೆ ಪ್ರಯಾಣಿಕರೆಲ್ಲ ಕಂಗಾಲಾಗಿದ್ದು, ಪುಟಾಣಿ ಮಕ್ಕಳು, ಮಹಿಳೆಯರು ಒದ್ದಾಡಲು ಆರಂಭಿಸಿದ್ದಾರೆ. ಅಲ್ಲಿದ್ದ ಗಗನಸಖಿಯರು ಕೂಡಲೇ ಪ್ರಯಾಣಿಕರಿಗೆ ಟಿಶ್ಯೂ ಪೇಪರ್‌ಗಳನ್ನ ಹಂಚಿದ್ದಾರೆ. ಕೊನೆಗೆ ಪ್ರಯಾಣಿಕರೆಲ್ಲಾ ಆ ಟಿಶ್ಯೂ ಪೇಪರ್‌ಗಳಿಂದ ಗಾಳಿ ಬೀಸಿಕೊಳ್ಳುತ್ತಾ ಕೂಲ್ ಆಗೋಕೆ ಶತಪ್ರಯತ್ನ ಮಾಡಿದ್ದಾರೆ.

ಇಂಡಿಗೋ ವಿಮಾನದಲ್ಲಿ ಇಂತಹದೊಂದು ಭಯಾನಕ ಅನುಭವ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಮಾನ ಟೇಕ್ ಆಫ್ ಆದಾಗಿಂದಲೂ ಪ್ರಯಾಣಿಕರಿಗೆ ಸರಿಯಾದ ಗಾಳಿ ಸಿಗದೇ ಬಹಳಷ್ಟು ಕಷ್ಟ ಅನುಭವಿಸಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಗಂಭೀರವಾದ ವಿಷಯವಾಗಿದ್ದು, ಪ್ರಯಾಣಿಕರಿಂದ ಹಣ ಪಡೆದು ಸರಿಯಾದ ಸೌಲಭ್ಯ ನೀಡದಿರುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಆಕಾಶದಲ್ಲಿ ನಿಂತು ಹೋದ ‘ಹವಾ’; ಟಿಶ್ಯೂ ಪೇಪರ್‌ನಲ್ಲಿ ಗಾಳಿ ಬೀಸಿಕೊಂಡ ಪ್ರಯಾಣಿಕರು; ಆಗಿದ್ದೇನು?

https://newsfirstlive.com/wp-content/uploads/2023/08/aeroplane.jpg

Load More